ಸದನದಲ್ಲಿ ಟಿಡಿಪಿ ಸಂಸದ ಗಲ್ಲಾ ಜಯದೇವ್ 
ದೇಶ

ಬಿಜೆಪಿಯಿಂದ ಭ್ರಷ್ಟಚಾರಿಗಳ ರಕ್ಷಣೆ; 'ಬೆದರಿಕೆ' ಹಾಕುತ್ತಿಲ್ಲ, 'ಶಾಪ' ನೀಡುತ್ತಿದ್ದೇವೆ: ಟಿಡಿಪಿ

ಪ್ರಧಾನಿ ಮೋದಿ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಸುಳ್ಳು ಭರವಸೆಗಳನ್ನು ನೀಡಿ ಆಂಧ್ರ ಪ್ರದೇಶಕ್ಕೆ ಅನ್ಯಾಯ ಮಾಡಿದ್ದಾರೆ ಎಂದು ಟಿಡಿಪಿ ಆರೋಪಿಸಿದೆ.

ನವದೆಹಲಿ: ಪ್ರಧಾನಿ ಮೋದಿ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಸುಳ್ಳು ಭರವಸೆಗಳನ್ನು ನೀಡಿ ಆಂಧ್ರ ಪ್ರದೇಶಕ್ಕೆ ಅನ್ಯಾಯ ಮಾಡಿದ್ದಾರೆ ಎಂದು ಟಿಡಿಪಿ ಆರೋಪಿಸಿದೆ.
ಸಂಸತ್ ಕಲಾಪದಲ್ಲಿ ಅವಿಶ್ವಾಸ ನಿರ್ಣಯದ ಕುರಿತು ನಡೆದ ಚರ್ಚೆಯಲ್ಲಿ ಮಾತನಾಡಿದ ಟಿಡಿಪಿ ಸಂಸದ ಗಲ್ಲಾ ಜಯದೇವ್ ಅವರು, ಕೇಂದ್ರ ಸರ್ಕಾರ ತಾರತಮ್ಯ ನೀತಿ ಅನುಸರಿಸುತ್ತಿದೆ. ಆಂಧ್ರ ಪ್ರದೇಶ ಹಳೆಯ ಹೆಸರಾದರೂ ಅದು ಹೊಸ ರಾಜ್ಯ, ತೆಲಂಗಾಣ ಹೊಸ ಹೆಸರಾದರೂ ಅದು ಹಳೆಯ ರಾಜ್ಯ. ಇದು ಕೇಂದ್ರ ಸರ್ಕಾರಕ್ಕೆ ತಿಳಿದಿದ್ದರೂ ಆರ್ಥಿಕವಾಗಿ ತೆಲಂಗಾಣಕ್ಕೆ ಬೆಂಬಲ ನೀಡಿದೆ. ಮೋದಿ ಸರ್ಕಾರ 2014ರ ಚುನಾವಣೆ ವೇಳೆ ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವ ಭರವಸೆ ನೀಡಿದ್ದರು. ಆದರೆ ಎನ್ ಡಿಎ ಸರ್ಕಾರ ರಚನೆಯಾಗಿ 4 ವರ್ಷಗಳೇ ಕಳೆದರೂ ಈ ವರೆಗೂ ಕೇಂದ್ರ ಸರ್ಕಾರ ನೀಡಿದ್ದ ಭರವಸೆಗಳನ್ನು ಈಡೇರಿಸಿಲ್ಲ ಎಂದು ಹೇಳಿದರು.
ಸದನದಲ್ಲಿ ತೆಲುಗಿನ ಬ್ಲಾಕ್ ಬಸ್ಟರ್ ಚಿತ್ರ ಭರತ್ ಅನೇ ನೇನು ಎಂಬ ಚಿತ್ರವನ್ನು ಪ್ರಸಾಪಿಸಿದ ಗಲ್ಲಾ ಜಯದೇವ್ ಅವರು, ಕೊಟ್ಟ ಮಾತನ್ನು ಉಳಿಸಿಕೊಳ್ಳಲು ನಾಯಕ ಹೋರಾಡುವ ಬಗೆಯನ್ನು ಚಿತ್ರದಲ್ಲಿ ವಿವರಿಸಲಾಗಿದೆ. ಆದರೆ ಇದಕ್ಕೆ ವ್ಯತಿರಿಕ್ತವಾಗಿ ಮೋದಿ ಸರ್ಕಾರ ನಡೆದುಕೊಳ್ಳುತ್ತಿದ್ದು, ನೀಡಿದ ಯಾವುದೇ ಭರವಸೆಗಳನ್ನೂ ಮೋದಿ ಸರ್ಕಾರ ಈಡೇರಿಸಿಲ್ಲ. ಎನ್ ಡಿಎ ಆಂಧ್ರ ಪ್ರದೇಶದ 5 ಕೋಟಿ ಜನರಿಗೆ ಅನ್ಯಾಯ ಮಾಡಿಜದೆ ಎಂದು ಹೇಳಿದರು.
ಆಂಧ್ರ ಪ್ರದೇಶಕ್ಕಾಗಿ ಧರ್ಮಯುದ್ಧ
'ಟಿಡಿಪಿ ಅವಿಶ್ವಾಸ ನಿರ್ಣಯ ಮಂಡಿಸುತ್ತಿದೆ. ಇದು ಬಿಜೆಪಿ ಮತ್ತು ಟಿಡಿಪಿ ನಡುವಿನ ಹೋರಾಟವಲ್ಲ. ಆಂಧ್ರದ ಜನರು ಮತ್ತು ಕೇಂದ್ರ ನಡುವಿನ 'ಧರ್ಮಯುದ್ಧ' ಎಂದು ಅವಿಶ್ವಾಸ ಮಂಡಿಸಿದ ಟಿಡಿಪಿ ಸದಸ್ಯ ಜಯದೇವ್‌ ಗಲ್ಲಾ ಹೇಳಿದರು. ಆಂಧ್ರದ 5 ಕೋಟಿ ಜನರಿಗೆ ಅನ್ಯಾಯವಾಗಿದೆ. ಕೊಟ್ಟಿದ್ದ ಭರವಸೆಯಲ್ಲಿ ಈಡೇರಿಸಿಲ್ಲ ಎಂದು ಪ್ರತಿಪಾದಿಸಿದರು.

ಬಿಜೆಪಿಯಿಂದ ಭ್ರಷ್ಟಚಾರಿಗಳ ರಕ್ಷಣೆ, 'ಬೆದರಿಕೆ' ಹಾಕುತ್ತಿಲ್ಲ. 'ಶಾಪ' ನೀಡುತ್ತಿದ್ದೇವೆ
ಪ್ರಧಾನಿ ಅವರು ಸೀಮಾಂಧ್ರವನ್ನು ‘ಸ್ಕ್ಯಾಮ್‌ ಆಂಧ್ರ’ ಎಂದು ಟೀಕಿಸಿದ್ದರು. ಆದರೆ, ಬಿಜೆಪಿ ಭ್ರಷ್ಟಾಚಾರಿಗಳನ್ನು ರಕ್ಷಿಸುತ್ತಿದೆ. ಕರ್ನಾಟಕದಲ್ಲಿ ಹಲವು ದೂರುಗಳಿರುವ ಜನಾರ್ಧನ ರೆಡ್ಡಿ ಅವರನ್ನು ರಕ್ಷಿಸುತ್ತಿದ್ದೀರಿ ಎಂದ ಜಯದೇವ ಗಲ್ಲಾ ಅವರು ಸರ್ಕಾರ ಕೆಲವರ ಹಿತಕ್ಕಾಗಿ ಮಾತ್ರ ಕಾರ್ಯ ನಿರ್ವಹಿಸುತ್ತಿದೆ ಎಂದು ಹೇಳಿದರು.  2016ರಲ್ಲಿ ಆಂಧ್ರಕ್ಕೆ ವಿಶೇಷ ಪ್ಯಾಕೇಜ್‌ ನೀಡುವುದಾಗಿ ಕೇಂದ್ರ ಸರ್ಕಾರ ಹೇಳಿತ್ತು. ನಾವಿನ್ನೂ ಭರವಸೆ ಈಡೇರಲಿದೆ ಎಂಬ ನಿರೀಕ್ಷೆಯಲ್ಲಿದ್ದೇವೆ. ನಾವು ಕೇಂದ್ರ ಸರ್ಕಾರ, ಪ್ರಧಾನಿಗೆ 'ಬೆದರಿಕೆ' ಹಾಕುತ್ತಿಲ್ಲ. 'ಶಾಪ' ನೀಡುತ್ತಿದ್ದೇವೆ. ಇದು ಪ್ರಜಾಪ್ರಭುತ್ವ ಮತ್ತು ಸರ್ಕಾರದ ನಡುವಿನ ಹೋರಾಟ ಎಂದು ಹೇಳಿದರು. ಸರ್ಧಾರ್‌ ವಲ್ಲಬಾಭಾಯಿ ಪಟೇಲ್‌ ಮತ್ತು ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಗೆ ನೂರಾರು ಕೋಟಿ ಅನುದಾನ ನೀಡಲು ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದೆ. ಆದರೆ, ಆಂಧ್ರದ ರಾಜಧಾನಿಗೆ ಯಾವ ಯೋಜನೆಯನ್ನೂ ನೀಡುತ್ತಿಲ್ಲ ಎಂದು ದೂರಿದರು. ಸ್ಪೀಕರ್‌ ಸುಮಿತ್ರಾ ಮಹಾಜನ್‌ ಅವರು ನೀಡಿದ್ದ ಸಮಯ ಮೀರಿ ಜಯದೇವ್‌ ಗಲ್ಲಾ ಅವರು ನಿರ್ಣಯ ಮಂಡನೆಯನ್ನು ಮುಂದುವರಿಸಿದ್ದರಿಂದ ಬಿಜೆಪಿ ಸದಸ್ಯರು ಆಕ್ಷೇಪಿಸಿದರು. ಆಗ, ಮಂಡನೆ ಮುಗಿಸುವಂತೆ ಸ್ಪೀಕರ್‌ ಸೂಚಸಿದರು. ಟಿಡಿಪಿ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ನೀಡಿರುವ ಹೇಳಿಕೆಗಳನ್ನು ಹಿಂಪಡೆಯಬೇಕು ಎಂದು ರಕ್ಷಣಾ ಸಚಿವೆ ನಿರ್ಮಾಲಾ ಸೀತಾರಾಮನ್‌ ಆಗ್ರಹಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾಂಗ್ರೆಸ್‌ನ ಆಂತರಿಕ ಕಲಹದಿಂದ 'ಮೂರನೇ ಮುಖ್ಯಮಂತ್ರಿ' ಬಂದರೂ ಅಚ್ಚರಿ ಇಲ್ಲ: ಬಿ.ವೈ ವಿಜಯೇಂದ್ರ; Video

ಸುಪ್ರೀಂಕೋರ್ಟ್​ಗೆ ನನ್ನ ಬಗ್ಗೆ ತಪ್ಪು ಮಾಹಿತಿ: ಸರ್ಕಾರದ ವಿರುದ್ಧ ಡಿಜಿಪಿ ಅಲೋಕ್ ಕುಮಾರ್ ಅಸಮಾಧಾನ!

ಯುವ ಜನತೆಯ ಆಕ್ರೋಶ ತಡೆಯಲು ಸಾಧ್ಯವಿಲ್ಲ, ಇಡೀ ದೇಶ ಜಂತರ್ ಮಂತರ್ ಆಗಲಿದೆ: ಪ್ರಕಾಶ್ ರಾಜ್

ಸೆಪ್ಟೆಂಬರ್‌ನಲ್ಲಿ ನಿರೀಕ್ಷೆ ಮೀರಿ ಹೆಚ್ಚಿದ ಭಾರತದ ಸಗಟು ಹಣದುಬ್ಬರ: ಶೇ.11.4ಕ್ಕೆ ಏರಿಕೆ

'ಅಧರ್ಮ ಎಸಗಿದವರಿಗೆ ಶಿಕ್ಷೆ ನೀಡುವುದೂ ಧರ್ಮವೇ'; ಮೀರತ್ ಹತ್ಯೆ ಪ್ರಕರಣ ಶಿಕ್ಷೆ ಪ್ರಕಟ ವೇಳೆ ನ್ಯಾಯಾಧೀಶರಿಂದ ಭಗವದ್ಗೀತೆ ಉಲ್ಲೇಖ!