ಡಿಎಂಕೆ ಕಾರ್ಯಕಾರಿ ಅಧ್ಯಕ್ಷ ಎಂ.ಕೆ.ಸ್ಟಾಲಿನ್ 
ದೇಶ

ಬೇಸರವಿದ್ದರೂ ಎಐಎಡಿಎಂಕೆ ಎನ್'ಡಿಎ ಸರ್ಕಾರಕ್ಕೆ ಬೆಂಬಲ ನೀಡಿದೆ: ಡಿಎಂಕೆ

ಭಿನ್ನಭಿಪ್ರಾಯ ಹಾಗೂ ಬೇಸರಗಳಿದ್ದರೂ ಎಐಎಡಿಎಂಕೆ ಪಕ್ಷ ಕೇಂದ್ರದ ಆಡಳಿತಾರೂಢ ಎನ್'ಡಿಎ ಪಕ್ಷಕ್ಕೆ ಬೆಂಬಲ ನೀಡಿದೆ ಎಂದು ಡಿಎಂಕೆ ಶನಿವಾರ ಹೇಳಿದೆ...

ಚೆನ್ನೈ: ಭಿನ್ನಭಿಪ್ರಾಯ ಹಾಗೂ ಬೇಸರಗಳಿದ್ದರೂ ಎಐಎಡಿಎಂಕೆ ಪಕ್ಷ ಕೇಂದ್ರದ ಆಡಳಿತಾರೂಢ ಎನ್'ಡಿಎ ಪಕ್ಷಕ್ಕೆ ಬೆಂಬಲ ನೀಡಿದೆ ಎಂದು ಡಿಎಂಕೆ ಶನಿವಾರ ಹೇಳಿದೆ. 
ಅವಿಶ್ವಾನ ನಿರ್ಣಯದ ಮಂಡನೆ ವೇಳೆ ಎಐಎಡಿಎಂಕೆ ಪಕ್ಷ ಎನ್'ಡಿಎ ಪಕ್ಷಕ್ಕೆ ಬೆಂಬಲ ನೀಡಿಲ್ಲ ಎಂಬ ಸುದ್ದಿಗಳ ವಿರುದ್ಧ ಕಿಡಿಕಾರಿರುವ ಡಿಎಂಕೆ ಕಾರ್ಯಕಾರಿ ಅಧ್ಯಕ್ಷ ಎಂ.ಕೆ.ಸ್ಟಾಲಿನ್ ಅವರು, ಕೇಂದ್ರ ಸರ್ಕಾರದ ಮೇಲೆ ಹಲವು ವಿಚಾರಗಳ ಕುರಿತಂತೆ ಬೇಸರಗಳಿದ್ದರೂ ಎಐಎಡಿಎಂಕೆ ಪಕ್ಷದ ಸಂಸದರು ಮೋದಿ ಸರ್ಕಾರಕ್ಕೆ ಬೆಂಬಲ ನೀಡಿದ್ದಾರೆಂದು ಹೇಳಿದ್ದಾರೆ. 
ಈ ಕುರಿತಂತೆ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಸ್ಟಾಲಿನ್, ನೀಟ್, 15ನೇ ವೇತನ ಆಯೋಗ, ಜಿಎಸ್'ಟಿ, ಹಿಂದಿ ಭಾಷೆ ಹೇರಿಕೆ ಮತ್ತು ಕೋಮು ರಾಜಕೀಯ ವಿಚಾರಗಳ ಬಗ್ಗೆ ಮೋದಿ ಸರ್ಕಾರದ ಮೇಲೆ ಬೇಸರಗಳಿದ್ದರೂ, ಅವಿಶ್ವಾಸ ನಿರ್ಣಯ ಮಂಡನೆ ವೇಳೆ ಕೇಂದ್ರಕ್ಕೆ ರಾಜ್ಯ ಸರ್ಕಾರ ಬೆಂಬಲ ನೀಡಿದೆ ಎಂದು ಹೇಳಿಕೊಂಡಿದ್ದಾರೆ. 
ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಿಕೆ ನಿರಾಕರಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಹಾಗೂ ಟಿಡಿಪಿ ಪಕ್ಷಗಳು ನಿನ್ನೆಯಷ್ಟೇ ಕೇಂದ್ರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಮಾಡಿತ್ತು. ವಿಪಕ್ಷಗಳ ಅವಿಶ್ವಾಸ ನಿರ್ಣಯ ಮಂಡನೆಯನ್ನು ಸ್ಪೀಕರ್ ಸುಮಿತ್ರಾ ಮಹಾಜನ್ ಅವರು ಅಂಗೀಕರಿಸಿದ್ದರು.
ಇದರಂತೆ ಅವಿಶ್ವಾಸ ನಿರ್ಣಯ ಮಂಡನೆ ಕುರಿತ ಚರ್ಚೆ ನಿನ್ನೆ ಲೋಕಸಭೆಯಲ್ಲಿ ನಡೆದಿತ್ತು. ಅವಿಶ್ವಾಸ ನಿರ್ಣಯ ಕುರಿತಂತೆ ಶುಕ್ರವಾರ ಹೇಳಿಕೆ ನೀಡಿದ್ದ ತಮಿಳುನಾಡು ಮುಖ್ಯಮಂತ್ರಿ ಎ.ಕೆ. ಪಳನಿಸ್ವಾಮಿಯವರು, ಅವಿಶ್ವಾಸ ನಿರ್ಣಯ ಮಂಡನೆ ಮಾಡಿದ್ದು ನಾವಲ್ಲ, ಆಂಧ್ರಪ್ರದೇಶ. ಕಾವೇರಿ ನಿರ್ವಹಣಾ ಮಂಡಳಿ ಕುರಿತಂತೆ ಸಂಸತ್ತಿನಲ್ಲಿ ಕಳೆದ 22 ದಿನಗಳಿಂದ ಹೋರಾಡುತ್ತಲೇ ಇದ್ದೇವೆ. ಕಾವೇರಿ ವಿಚಾರ ನಮ್ಮ ವಿಷಯವಾಗಿದ್ದು, ಅವಿಶ್ವಾಸ ನಿರ್ಣಯ ಮಂಡನೆಯಲ್ಲ. ಕಾವೇರಿ ವಿಚಾರವಾಗಿ ನಾವು ಹೋರಾಟ ಮಾಡುತ್ತಲೇ ಇದ್ದೇವೆ. ನಮ್ಮೊಂದಿಗೆ ಯಾರು ಕೈಜೋಡಿಸಿದರು? ನಮ್ಮ ಸಹಾಯಕ್ಕೆ ಯಾವ ರಾಜ್ಯ ಬಂದಿತು? ಅವಿಶ್ವಾಸ ಮಂಡನೆ ಮಾಡಿದ್ದು ಟಿಡಿಪಿ ಪಕ್ಷ. ಪ್ರತೀ ಪಕ್ಷಕ್ಕೂ ಅವಿಶ್ವಾಸ ನಿರ್ಣಯ ಮಂಡನೆ ಮಾಡುವ ಹಕ್ಕಿದೆ. ಅದನ್ನೇ ಟಿಡಿಪಿ ಮಾಡಿದೆ ಎಂದು ಹೇಳಿದ್ದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!