ದೇಶ

ಗಾಝಿಯಾಬಾದ್ ಕಟ್ಟಡ ಕುಸಿತ: ಬಿರುಕು ಕಾಣಿಸಿಕೊಂಡಿದ್ದರೂ ಕಾಮಗಾರಿ ಮುಂದುವರೆಸಲು ಸೂಚನೆ!

Srinivas Rao BV
ನವದೆಹಲಿ: ಗಾಝಿಯಾಬಾದ್ ನಲ್ಲಿ ನಿರ್ಮಾಣ ಹಂತದಲ್ಲಿದ್ದ 5 ಅಂತಸ್ತಿನ ಕಟ್ಟಡ ಕುಸಿತ ಕಂಡಿದ್ದು, ಇಬ್ಬರು ಮೃತಪಟ್ಟಿದ್ದಾರೆ. ಘಟನಾ ಸ್ಥಳದಲ್ಲಿದ್ದ ಹಲವು ಕಾರ್ಮಿಕರಿಗೆ ಗಾಯಗಳಾಗಿದ್ದು, ಕಟ್ಟಡದಲ್ಲಿ ಬಿರುಕು ಕಾಣಿಸಿಕೊಂಡಿದ್ದರೂ ಸಹ ಕಾಮಗಾರಿ ಮುಂದುವರೆಸಲು ಸೂಚನೆ ನೀಡಲಾಗಿತ್ತು ಎಂದು ಹೇಳಿದ್ದಾರೆ. 
ಕಾರ್ಮಿಕರ ಹೇಳಿಕೆಯನ್ನು ಎಎನ್ಐ ವರದಿ ಮಾಡಿದ್ದು, ಕಟ್ಟಡದಲ್ಲಿ ಬಿರುಕು ಕಾಣಿಸಿಕೊಂಡಿದ್ದರೂ ಸಹ ಬಿಲ್ಡರ್ ಕಾಮಗಾರಿಯನ್ನು ಮುಂದುವರೆಸುವಂತೆ ಸೂಚನೆ ನೀಡಿದ್ದರು ಎಂಬ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ. 
"ಕಟ್ಟಡದ ಭಾಗದಲ್ಲಿ ಬಿರುಕು ಕಾಣಿಸಿಕೊಂಡಿರುವುದರ ಬಗ್ಗೆ ಬಿಲ್ಡರ್ ಗೆ ತಿಳಿಸಿದ್ದೆವು, ಆದರೆ ಸಿಮೆಂಟ್ ಹಾಕಿ ಬಿರುಕನ್ನು ಮುಚ್ಚವಂತೆ ಬಿಲ್ಡರ್ ಸೂಚನೆ ನೀಡಿದ್ದರು. ಅಷ್ಟೇ ಅಲ್ಲದೇ ಎಂದಿನಂತೆ ಕಾಮಗಾರಿ ಮುಂದುವರೆಸುವಂತೆಯೂ ಹೇಳಿದ್ದರು". ನಾವು ಮೊದಲನೇ ಮಹಡಿಯಲ್ಲಿ ಕೆಲಸ ಮಾಡುತ್ತಿದ್ದಾಗ ಗ್ರೌಂಡ್ ಫ್ಲೋರ್ ನಲ್ಲಿ ಕುಸಿತ ಉಂಟಾಗಿರಬೇಕು ಎಂದು ಎಂದು  ಕಾರ್ಮಿಕರು ಹೇಳಿದ್ದಾರೆ.  ಘಟನೆಗೆ ಸಂಬಂಧಿಸಿದಂತೆ ಗಾಝಿಯಾಬಾದ್ ನ ಜಿಲ್ಲಾ ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶಿಸಿದ್ದು, ಮೇಲ್ನೋಟಕ್ಕೆ ಕಟ್ಟಡದ ಗುಣಮಟ್ಟದಿಂದ ಈ ಅನಾಹುತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಘಟನಾ ಸ್ಥಳದಿಂದ 7 ಜನರನ್ನು ರಕ್ಷಣೆ ಮಾಡಲಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. 
SCROLL FOR NEXT