ಭದ್ರತಾ ಪಡೆಗಳು 
ದೇಶ

ಜಮ್ಮು-ಕಾಶ್ಮೀರ :ರಾಜ್ಯಪಾಲರ ಆಡಳಿತದಲ್ಲಿ ತಗ್ಗಿದ ಉಗ್ರರ ಹಿಂಸಾಚಾರ ಪ್ರಕರಣ- ಕೇಂದ್ರ ಗೃಹ ಸಚಿವಾಲಯ

ಜಮ್ಮು -ಕಾಶ್ಮೀರದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೊಂಡ ನಂತರ ಉಗ್ರರ ಹಿಂಸಾಚಾರ ಪ್ರಕರಣಗಳು ಕಡಿಮೆಯಾಗಿವೆ ಆದರೆ, ಕಲ್ಲು ತೂರಾಟದಂತಹ ಘಟನೆಗಳು ಸ್ವಲ್ಪ ಹೆಚ್ಚಾಗಿವೆ ಎಂದು ಕೇಂದ್ರ ಗೃಹ ಸಚಿವಾಲಯದ ಅಧಿಕೃತ ಮಾಹಿತಿಯಲ್ಲಿ ತಿಳಿಸಿದೆ.

ನವದೆಹಲಿ: ಜಮ್ಮು -ಕಾಶ್ಮೀರದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೊಂಡ ನಂತರ ಉಗ್ರರ ಹಿಂಸಾಚಾರ ಪ್ರಕರಣಗಳು ಕಡಿಮೆಯಾಗಿವೆ ಆದರೆ, ಕಲ್ಲು ತೂರಾಟದಂತಹ ಘಟನೆಗಳು ಸ್ವಲ್ಪ ಹೆಚ್ಚಾಗಿವೆ ಎಂದು ಕೇಂದ್ರ ಗೃಹ ಸಚಿವಾಲಯದ ಅಧಿಕೃತ ಮಾಹಿತಿಯಲ್ಲಿ ತಿಳಿಸಿದೆ.

ರಂಜಾನ್ ತಿಂಗಳಿಗೆ ಹೋಲಿಸಿದ್ದರೆ ಜೂನ್ 16 ರಿಂದ  ಜುಲೈ 15ರವರೆಗೂ ಉಗ್ರರ ದಾಳಿ ಪ್ರಕರಣಗಳಲ್ಲಿ ಕಡಿಮೆಯಾಗಿವೆ ಎಂದು  ಗೃಹ ಸಚಿವಾಲಯ ಬಿಡುಗಡೆ ಮಾಡಿರುವ ಮಾಹಿತಿಯಲ್ಲಿ ತಿಳಿಸಲಾಗಿದೆ. ರಂಜಾನ್ ತಿಂಗಳ ವೇಳೆಯಲ್ಲಿ ಭದ್ರತಾ ಪಡೆಗಳ ಕಾರ್ಯಾಚರಣೆಯನ್ನು ಅಮಾನತ್ತಿನಲ್ಲಿಡಲಾಗಿತ್ತು.

 ಒಂದು ತಿಂಗಳ ಹಿಂದೆ 47 ಕ್ಕೂ ಹೆಚ್ಚು ಉಗ್ರ ಘಟನೆಗಳು ನಡೆದಿವೆ. ಆದರೆ, ಕಾರ್ಯಾಚರಣೆ ಅಮಾನತ್ತಿನಲ್ಲಿಟ್ಟ ತಿಂಗಳಲ್ಲಿ 80 ಉಗ್ರ ಘಟನೆಗಳು ನಡೆದಿದ್ದವು. ಇದರಲ್ಲಿ ಅರ್ಧ ಗ್ರೇನೆಡ್ ಎಸೆತ ಹಾಗೂ ಗುಂಡಿನ ದಾಳಿಯೇ ಆಗಿದ್ದವು.

ರಾಜ್ಯಪಾಲರ ಆಡಳಿತಾವಧಿಯಲ್ಲಿ  14 ಉಗ್ರರು  ಹತ್ಯೆಯಾಗಿದ್ದು, ಐವರು ಭದ್ರತಾ ಸಿಬ್ಬಂದಿಗಳು ಹುತಾತ್ಮರಾಗಿದ್ದಾರೆ.  ಆದರೆ, ಕಾರ್ಯಾಚರಣೆ ಅಮಾನತ್ತಿನಲ್ಲಿಟ್ಟ ವೇಳೆಯಲ್ಲಿ 24 ಉಗ್ರರು  ಹತ್ಯೆಯಾಗಿದ್ದರೆ, 10 ಭದ್ರತಾ ಸಿಬ್ಬಂದಿಗಳು ಹುತಾತ್ಮರಾಗಿದ್ದರು ಎನ್ನಲಾಗಿದೆ.

ರಾಜ್ಯಪಾಲರ ಒಂದು ತಿಂಗಳ ಆಡಳಿತಾವಧಿಯಲ್ಲಿ 95 ಕಲ್ಲು ತೂರಾಟದಂತಹ ಘಟನೆಗಳು ವರದಿಯಾಗಿವೆ. ಕದನ ವಿರಾಮದ ಒಂದು ತಿಂಗಳ ಅವಧಿಯಲ್ಲಿ 90 ಘಟನೆಗಳು ವರದಿಯಾಗಿದ್ದವು.
ರಾಜ್ಯಪಾಲರ ಆಡಳಿತಾವಧಿಯಲ್ಲಿ ಭದ್ರತಾ ಪಡೆಗಳು ಕೈಗೊಂಡ ಕಾರ್ಯಾಚರಣೆ ವೇಳೆಯಲ್ಲಿ ಏಳಕ್ಕೂ ಹೆಚ್ಚು ನಾಗರೀಕರು ಮೃತಪಟ್ಟಿದ್ದಾರೆ. ಆದರೆ, ಕಾರ್ಯಾಚರಣೆ ರದ್ದುಗೊಂಡಿದ್ದ ವೇಳೆಯಲ್ಲಿ ನಾಲ್ವರು ನಾಗರಿಕರು ಸಾವನ್ನಪ್ಪಿದ್ದರು  ಎಂದು ಕೇಂದ್ರ ಗೃಹ ಸಚಿವಾಲಯದಿಂದ ಬಿಡುಗಡೆಯಾಗಿರುವ ಮಾಹಿತಿಯಲ್ಲಿ ತಿಳಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್