ಅಮೆರಿಕ ಜೈಲಿನಲ್ಲಿ ಮಾರಣಾಂತಿಕ ಹಲ್ಲೆ: ಗಂಭೀರ ಸ್ಥಿತಿಯಲ್ಲಿ 26/11 ರ ಸೂತ್ರಧಾರ ಡೇವಿಡ್ ಕೋಲ್ಮನ್ ಹೆಡ್ಲಿ!
26/11 ಮುಂಬೈ ದಾಳಿಯ ಸೂತ್ರಧಾರ ಪಾಕಿಸ್ತಾನಿ-ಅಮೆರಿಕನ್ ಡೇವಿಡ್ ಹೆಡ್ಲಿ ಮೇಲೆ ಅಮೆರಿಕ ಜೈಲಿನಲ್ಲಿ ದಾಳಿ ನಡೆದಿದ್ದು ಗಂಭೀರ ಸ್ಥಿತಿಯಲ್ಲಿದ್ದಾನೆ.
ಚಿಕಾಗೊ: 26/11 ಮುಂಬೈ ದಾಳಿಯ ಸೂತ್ರಧಾರ ಪಾಕಿಸ್ತಾನಿ-ಅಮೆರಿಕನ್ ಡೇವಿಡ್ ಹೆಡ್ಲಿ ಮೇಲೆ ಅಮೆರಿಕ ಜೈಲಿನಲ್ಲಿ ದಾಳಿ ನಡೆದಿದ್ದು ಗಂಭೀರ ಸ್ಥಿತಿಯಲ್ಲಿದ್ದಾನೆ.
ಚಿಕಾಗೊದಲ್ಲಿರುವ ಮೆಟ್ರೋಪಾಲಿಟನ್ ಕರೆಕ್ಷನ್ ಸೆಂಟರ್ ನಲ್ಲಿ ಇಬ್ಬರು ಸಹಖೈದಿಗಳಿಂದ ಹಲ್ಲೆಗೊಳಗಾಗಿರುವ ಹೆಡ್ಲಿಯನ್ನು ನಾರ್ತ್ ಇವಾನ್ಸ್ಟನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಜು.8 ರಂದು ಇಬ್ಬರು ಸಹ ಖೈದಿಗಳು ಹೆಡ್ಲಿಯನ್ನು ಹಿಡಿದು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.
ಪೊಲೀಸರ ಮೇಲೆಯೂ ಈ ಇಬ್ಬರು ಖೈದಿಗಳು ಹಲ್ಲೆ ನಡೆಸಿದ್ದು, ಇದನ್ನು ಒಪ್ಪಿಕೊಂಡಿದ್ದಾರೆ.
26/11 ರ ಮುಂಬೈ ದಾಳಿಯಲ್ಲಿ ತನ್ನ ಕೈವಾಡ ಇರುವುದನ್ನು 2016 ರ ಫೆಬ್ರವರಿಯಲ್ಲಿ ಹೆಡ್ಲಿ ಮುಂಬೈ ಕೋರ್ಟ್ ನಲ್ಲಿ ನಡೆದ ವಿಡಿಯೋ ಕಾನ್ಫರೆನ್ಸ್ ವಿಚಾರಣೆ ವೇಳೆ ಒಪ್ಪಿಕೊಂಡಿದ್ದ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.