ಪ್ರಧಾನಮಂತ್ರಿ ನರೇಂದ್ರ ಮೋದಿ
ನವದೆಹಲಿ: ಸ್ವಾತಂತ್ರ್ಯ ಹೋರಾಟಗಾರರಲ್ಲಿ ಪ್ರಮುಖರಾಗಿದ್ದ ಬಾಲ ಗಂಗಾಧರ್ ತಿಲಕ್ ಮತ್ತು ಚಂದ್ರಶೇಖರ್ ಅವರ ಹುಟ್ಟುಹಬ್ಬದ ಹಿನ್ನಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನಮನ ಸಲ್ಲಿಸಿದ್ದಾರೆ.
ಬಾಲ ಗಂಗಾಧರ್ ತಿಲಕ್, ಚಂದ್ರಶೇಖರ್ ಆಜಾದ್'ಅವರ ಜಯಂತಿ ಹಿನ್ನಲೆಯಲ್ಲಿ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಮೋದಿಯವರು, ಲೋಕಮಾನ್ಯ ಬಾಲ ಗಂಗಾಧರ್ ತಿಲಕ್ ಅವರ ಜಯಂತಿ ಹಿನ್ನಲೆಯಲ್ಲಿ ಬಾಲ ಗಂಗಾಧರ್ ಅವರಿಗೆ ತಲೆ ಬಾಗಿ ನಮಸ್ಕರಿಸುತ್ತೇನೆ. ಬಾಲ ಗಂಗಾಧರ್ ತಿಲಕ್ ಅವರು, ಅಸಂಖ್ಯಾತ ಭಾರತೀಯರಲ್ಲಿ ದೇಶಪ್ರೇಮವನ್ನು ಹುಟ್ಟುಹಾಕಿದ್ದರು. ಪ್ರತೀ ವಿಭಾಗದ ಸಮಾಜವನ್ನು ಒಗ್ಗೂಡಿಸಿದ್ದರು. ಶಿಕ್ಷಣಕ್ಕೂ ಬಹಳಷ್ಟು ಒತ್ತು ನೀಡಿದ್ದರು ಎಂದು ಹೇಳಿದ್ದಾರೆ.
ಬಳಿಕ ಚಂದ್ರಶೇಖರ್ ಆಜಾದ್ ಅವರಿಗೂ ಸಮನ ಸಲ್ಲಿಸಿರುವ ಮೋದಿಯವರು, ಚಂದ್ರಶೇಖರ್ ಆಜಾದ್ ಅವರು ಭಾರತಮಾತೆಯ ಹೆಮ್ಮೆ ಹಾಗೂ ವೀರ, ಧೀರ ಪುತ್ರರಾಗಿದ್ದಾರೆ. ವಸಾಹತುಶಾಹಿಗಳಿಂದ ಸಹಸ್ರಾರು ನಾಗರೀಕರು ಸ್ವಾತಂತ್ರ್ಯ ಪಡೆಯಬೇಕೆಂಬ ಉದ್ದೇಶದಿಂದ ತಮ್ಮನ್ನು ತಾವೇ ತ್ಯಾಗ ಮಾಡಿದ್ದರು. ಇವರ ಧೈರ್ಯದಿಂದ ಹಲವಾರು ಭಾರತೀಯರು ಪ್ರೇರಿತರಾಗಿದ್ದಾರೆಂದು ತಿಳಿಸಿದ್ದಾರೆ.