ಮುಂಬೈ: ಗೋಹತ್ಯೆಗಳು ನಿಂತರೆ, ಸಾಮೂಹಿಕ ಹಲ್ಲೆ ಪ್ರಕರಣಗಳೂ ಕೂಡ ನಿಲ್ಲುತ್ತವೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನಾಯಕ ಇಂದ್ರೇಶ್ ಕುಮಾರ್ ಅವರು ಮಂಗಳವಾರ ಹೇಳಿದ್ದಾರೆ.
ರಾಜಸ್ಥಾನದ ಆಳ್ವಾರ್ ಸಾಮೂಹಿಕ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆಅವರು, ಗೋಹತ್ಯೆಗಳು ನಿಂತರೆ, ಸಾಮಾನ್ಯವಾಗಿಯೇ ಸಾಮೂಹಿಕ ಹಲ್ಲೆ ಪ್ರಕರಣಗಳೂ ಕೂಡ ಅಂತಿಮಗೊಳ್ಳುತ್ತವೆ. ಯಾವುದೇ ಜಾತಿ, ಧರ್ಮ, ಲಿಂಗದವರೇ ಆದರೂ, ಹಿಂಸಾಚಾರ ಸೃಷ್ಟಿಸುವವರನ್ನು ಖಂಡಿಸಬೇಕು. ತಮ್ಮ ಧಾರ್ಮಿಕ ಪದ್ಧತಿ ಎಂದು ಹಸುಗಳ ಹತ್ಯೆ ಮಾಡುವುದನ್ನು ಭಾರತ ನಂಬಿಲ್ಲ ಎಂದು ಹೇಳಿದ್ದಾರೆ.
ಏಸು ಕ್ರಿಸ್ತ ಕೊಟ್ಟಿಗೆಯಲ್ಲಿ ಜನ್ಮ ತಾಳಿದ್ದರು. ಅದೇ ಕಾರಣದಿಂದ ಗೋವನ್ನು ಮಾತೆಯೆಂದು ಹೇಳಲಾಗುತ್ತದೆ. ಮೆಕ್ಕಾ-ಮದೀನಾಗೆ ಹೋದರೆ, ಅಲ್ಲಿ ಕೂಡ ಗೋ ಹತ್ಯೆಯನ್ನು ಅಪರಾಧವೆಂದು ಪರಿಗಣಿಸುತ್ತಾರೆ. ಗೋಹತ್ಯೆಯ ಪಾಪದಿಂದ ಮಾನವ ಸಮುದಾಯ ಮುಕ್ತಗೊಂದರೆ, ಸಾಮೂಹಿಕ ಹಲ್ಲೆಯಂತಹ ಸಮಸ್ಯೆಗೆ ಪರಿಹಾರ ದೊರೆಯುತ್ತದೆ ಎಂದು ತಿಳಿಸಿದ್ದಾರೆ.