ದೇಶ

ಸಂಸತ್ತಿನ ನಿಯಮ, ಕಾರ್ಯವಿಧಾನಗಳ ಬಗ್ಗೆ ರಾಹುಲ್'ಗೆ ಅರಿವಿಲ್ಲ: ಕಾಂಗ್ರೆಸ್ ಹಕ್ಕುಚ್ಯುತಿ ವಿರುದ್ಧ ಬಿಜೆಪಿ ಕಿಡಿ

Manjula VN
ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ವಿರುದ್ಧ ಕಾಂಗ್ರೆಸ್ ಮಂಡಿಸಿರುವ ಹಕ್ಕುಚ್ಯುತಿ ವಿರುದ್ಧ ಬಿಜೆಪಿ ತೀವ್ರವಾಗಿ ಕಿಡಿಕಾರಿದ್ದು, ಸಂಸತ್ತಿನ ನಿಯಮ ಹಾಗೂ ಕಾರ್ಯವಿಧಾನಗಳ ಬಗ್ಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರಿಗೆ ಅರಿವಿಲ್ಲ ಎಂದು ಬುಧವಾರ ಹೇಳಿದೆ. 
ಸಂಸತ್ತಿನ ಹೊರಾಂಗಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಕೇಂದ್ರ ಸಚಿವ ಅನಂತ್ ಕುಮಾರ್ ಅವರು, ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ. 
ಸಂಸತ್ತಿನ ನಿಯಮ ಹಾಗೂ ಕಾರ್ಯವಿಧಾನಗಳ ಬಗ್ಗೆ ಕಾಂಗ್ರೆಸ್ ಹಾಗೂ ಅದರ ಅಧ್ಯಕ್ಷರಿಗೆ ಅರಿವಿಲ್ಲ. ಇಂತಹ ಚಲನೆಗಳನ್ನು ತರಲು ಕಾಂಗ್ರೆಸ್'ಗೆ ಅಧಿಕಾರವಿದೆ. ಆದರೆ, ಯಾವ ಸಂದರ್ಭದಲ್ಲಿ ಹಕ್ಕುಚ್ಯುತಿ ಮಂಡಿಸಬೇಕೆಂಬುದನ್ನು ತಿಳಿದುಕೊಳ್ಳಬೇಕಿದೆ ಎಂದು ಹೇಳಿದ್ದಾರೆ. 
ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ, ವೀರಪ್ಪ ಮೊಯ್ಲಿ, ಜ್ಯೋತಿರಾಧಿತ್ಯ, ಕೆ.ವಿ.ಥಾಮಸ್ ಮತ್ತು ರಾಜೀವ್ ಸತವ್ ಅವರು ನಿನ್ನೆ ಸಂಜೆ ಸ್ಪೀಕರ್ ಸುಮಿತ್ರಾ ಮಹಾಜನ್ ಅವರನ್ನು ಭೇಟಿ ಮಾಡಿದ್ದರು. ಭೇಟಿ ವೇಳೆ ಹಕ್ಕುಚ್ಯುತಿಗೆ ಸಂಬಂಧಿಸಿದಂತೆ ಪ್ರತ್ಯೇಕ ನೋಟಿಸ್ ನೀಡಿದ್ದರು. 
SCROLL FOR NEXT