ಕರುಣಾನಿಧಿ 
ದೇಶ

ಕರುಣಾನಿಧಿ ಆರೋಗ್ಯದ ಬಗ್ಗೆ ಸುಳ್ಳು ವದಂತಿಗಳನ್ನು ನಂಬಬೇಡಿ- ಸ್ಟಾಲಿನ್

ಡಿಎಂಕೆ ಪಕ್ಷದ ಮುಖ್ಯಸ್ಥ ಎಂ. ಕರುಣಾನಿಧಿ ಅವರು ಜ್ವರದ ಸಮಸ್ಯೆಯಿಂದ ಬಳಲುತ್ತಿದ್ದು, ಅವರಿಗೆ ವೈದ್ಯರು ಚಿಕಿತ್ಸೆ ನೀಡಿದ್ದಾರೆ. ಅವರ ಆರೋಗ್ಯದಲ್ಲಿ ಆತಂಕ ಪಡಬೇಕಾಗಿಲ್ಲ ಎಂದು ಡಿಎಂಕೆ ಕಾರ್ಯಾಧ್ಯಕ್ಷ ಎಂ. ಕೆ. ಸ್ಟಾಲಿನ್ ತಿಳಿಸಿದ್ದಾರೆ.

ಚೆನ್ನೈ: ಡಿಎಂಕೆ ಪಕ್ಷದ ಮುಖ್ಯಸ್ಥ ಎಂ. ಕರುಣಾನಿಧಿ ಅವರು ಜ್ವರದ ಸಮಸ್ಯೆಯಿಂದ ಬಳಲುತ್ತಿದ್ದು, ಅವರಿಗೆ ವೈದ್ಯರು ಚಿಕಿತ್ಸೆ ನೀಡಿದ್ದಾರೆ. ಅವರ ಆರೋಗ್ಯದಲ್ಲಿ ಆತಂಕ ಪಡಬೇಕಾಗಿಲ್ಲ ಎಂದು ಡಿಎಂಕೆ ಕಾರ್ಯಾಧ್ಯಕ್ಷ ಎಂ. ಕೆ. ಸ್ಟಾಲಿನ್ ತಿಳಿಸಿದ್ದಾರೆ.

ಕರುಣಾನಿಧಿ ಆರೋಗ್ಯದ ಕ್ಷೀಣ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿ ಹರಡಿದ್ದ ಸುದ್ದಿ ಕುರಿತು ಪ್ರತಿಕ್ರಿಯಿಸಿದ ಸ್ಟಾಲಿನ್, ಕರುಣಾನಿಧಿ ಅವರ ಆರೋಗ್ಯ ಕುರಿತು  ಸುಳ್ಳು ಸುದ್ದಿಗಳನ್ನು  ಹಬ್ಬಿಸಲಾಗುತ್ತಿದೆ. ಅಂತಹ ವದಂತಿಗಳಲ್ಲಿ ನಂಬಿಕೆ ಇಡಬೇಡಿ. ಅವರು ಮನೆಯಲ್ಲಿದ್ದು, ವಿಶ್ರಾಂತಿ ಪಡೆಯುತ್ತಿದ್ದಾರೆ ಎಂದು  ಹೇಳಿದರು.

ಸ್ವಲ್ಪ ಸ್ವರದಿಂದ ಬಳಲುತ್ತಿರುವ ಕರುಣಾನಿಧಿ ಟ್ರಾಚೆಸ್ಟೋಮಿ ಟ್ಯೂಬ್ ಬದಲಾಯಿಸಲು  ಖಾಸಗಿ ಆಸ್ಪತ್ರೆಗೆ ತೆರಳಿದ್ದರು.  ಎರಡು ದಿನಗಳ ನಂತರ ಕರುಣಾನಿಧಿ ಖಾಸಗಿ ಆಸ್ಪತ್ರೆಯಿಂದ ಮನೆಗೆ ವಾಪಾಸ್ ಆಗಿದ್ದಾರೆ ಎಂದು ಅವರು ತಿಳಿಸಿದರು.

 2016 ಅಕ್ಟೋಬರ್ ತಿಂಗಳಿನಲ್ಲಿ  ಕರುಣಾನಿಧಿ ಅವರಿಗೆ ಅಲರ್ಜಿ ಸಮಸ್ಯೆ ಉಂಟಾಗಿತ್ತು. ತದನಂತರ ಆಗಾಗ್ಗೇ ಅನಾರೋಗ್ಯ ಸಮಸ್ಯೆ ಉಂಟಾಗುತ್ತಿದ್ದು, ಆಸ್ಪತ್ರೆಗೆ ಸೇರಿ  ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದ ವರ್ಷದ ಡಿಸೆಂಬರ್ ಮೊದಲ ವಾರದಲ್ಲಿ ನ್ಯೂಟ್ರಿಷನ್ ಮತ್ತು ಹೈಡ್ರಾಷನ್ ಸಮಸ್ಯೆಯಿಂದಾಗಿ ಆಸ್ಪತ್ರೆಗೆ  ದಾಖಲಾಗಿದ್ದು, ಟ್ರಾಚೆಸ್ಟೋಮಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಪಕ್ಷದ ಹಿತಕ್ಕಾಗಿ ನಾಗೇಂದ್ರ ಯಾವುದೇ ತ್ಯಾಗಕ್ಕೂ ಸಿದ್ಧ, ಆದ್ರೆ...: ಹೈಕಮಾಂಡ್ ಭೇಟಿ ಬಳಿಕ CM ಡಿಕೆ ಶಿವಕುಮಾರ್

Nepal Floods: ಭೀಕರ ಪ್ರವಾಹದಲ್ಲಿ 30 ದೇಶಗಳ ನಾಗರೀಕರು ನಾಪತ್ತೆ, ಅಮೆರಿಕದವರೇ ಅತೀ ಹೆಚ್ಚು!

ಎಂ.ಎಸ್. ಧೋನಿ ಸಿಎಸ್ ಕೆ ಯಲ್ಲಿ ಶೇ. 25 ರಷ್ಟು ಪಾಲು ಕೇಳಿದ್ದಾರೆಯೇ? 3,820 ಕೋಟಿ ರೂ ಮೊತ್ತದ ಕ್ಲೈಮ್ ಹಿಂದಿರುವ ಸತ್ಯವೇನು?

ವಿದ್ಯಾರ್ಥಿಗಳ ವಿರೋಧದ ಬೆನ್ನಲ್ಲೇ NLSIU ಘಟಿಕೋತ್ಸವ ರದ್ದು; ‘ಅನಿವಾರ್ಯ ಕಾರಣ’ ಎಂದ ವಿವಿ

Yash’s Toxic: ನೆಗೆಟಿವ್ ರಿವ್ಯೂ ನಡುವೆ 'ರೇಟಿಂಗ್' ತೆಗೆದುಹಾಕಿದ ಬುಕ್ ಮೈ ಶೋ; ನಿರೀಕ್ಷಿತ ಕಲೆಕ್ಷನ್ ಇಲ್ವಾ? ನೆಟ್ಟಿಗರಿಂದ ತರಾಟೆ!