ದೇಶ

ರೊಹಿಂಗ್ಯಾ ವಲಸಿಗರು ಭಾರತದಲ್ಲಿ ಹೆಚ್ಚು ದಿನ ಉಳಿಯಲು ಅವಕಾಶ ನೀಡುವುದಿಲ್ಲ- ರಿಜಿಜು

Nagaraja AB

ನವದೆಹಲಿ:ಅಕ್ರಮವಾಗಿ ವಲಸೆ ಬಂದಿರುವ ರೊಹಿಂಗ್ಯಾ ವಲಸಿಗರು ದೇಶದಲ್ಲಿ ಹೆಚ್ಚು ದಿನ ಉಳಿಯಲು ಅವಕಾಶ ನೀಡುವುದಿಲ್ಲ ಎಂದು  ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಕಿರಣ್ ರಿಜಿಜು ಹೇಳಿದ್ದಾರೆ.

 ಕಾನೂನುಬಾಹಿರವಾಗಿ ವಲಸೆ ಬಂದಿರುವ ರೊಹಿಂಗ್ಯಾ ಸಮುದಾಯ ದೇಶದಲ್ಲಿ ಧೀರ್ಘ ಕಾಲ ವಾಸಿಸಲು ಅವಕಾಶ ನೀಡುವುದಿಲ್ಲ. ಈ ವಿಚಾರದಲ್ಲಿ   ಸರ್ಕಾರ ಸ್ಪಷ್ಟ ನಿಲುವು ತಾಳಿದೆ ಎಂದು ಅವರು ತಿಳಿಸಿದ್ದಾರೆ.

ಈ ಮಧ್ಯೆ   ದೇಶವಾಸಿಗಳಿಗೆ ನೀಡಿರುವ ದಾಖಲೆಗಳು ರೊಹಿಂಗ್ಯಾ ಸಮುದಾಯಕ್ಕೆ ಲಭ್ಯವಾಗದಂತೆ ನೋಡಿಕೊಳ್ಳುವಂತೆ ಎಲ್ಲಾ ರಾಜ್ಯಸರ್ಕಾರಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

ಈ ಸಂಬಂಧ ಮ್ಯಾನ್ ಮಾರ್  ಸರ್ಕಾರ ಹಾಗೂ ಅಲ್ಲಿನ ವಿದೇಶಾಂಗ ಸಚಿವರೊಂದಿಗೆ    ಭಾರತದ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಮಾತುಕತೆ ನಡೆಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಮ್ಯಾನ್ಮಾರ್ ನಿಂದ ರೊಹಿಂಗ್ಯಾ ಮುಸ್ಲಿ ವಲಸಿಗರು ಅಕ್ರಮವಾಗಿ ದೇಶಕ್ಕೆ ಬರದಂತೆ  ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜಮ್ಮು-ಕಾಶ್ಮೀರ ಸೇರಿದಂತೆ ಎಲ್ಲಾ ರಾಜ್ಯಸರ್ಕಾರಗಳಿಗೆ  ಕೇಂದ್ರಸರ್ಕಾರ ಕಳೆದ ತಿಂಗಳು ಪತ್ರ ಬರೆದಿದೆ ಎಂದು ಅವರು ಹೇಳಿದ್ದಾರೆ.

 ಇತ್ತೀಚಿಗೆ ಭಾರತಕ್ಕೆ ಭೇಟಿ ನೀಡಿದ್ದ ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ  ರೊಹಿಂಗ್ಯಾ ಸಮಸ್ಯೆ ಕುರಿತಂತೆ ಚರ್ಚೆ ನಡೆಸಿದ್ದು, ರೊಹಿಂಗ್ಯಾ ಸಮುದಾಯ ಬಾಂಗ್ಲಾದೇಶಕ್ಕೆ ಮರಳುವಲ್ಲಿ ದೆಹಲಿ ಪ್ರಮುಖ ಪಾತ್ರ ವಹಿಸಲಿದೆ ಎಂದು ಹೇಳಿದ್ದಾರೆ.

ಕಳೆದ ವರ್ಷ ಆಗಸ್ಟ್  ತಿಂಗಳು ಭಾರತದ ಕಡೆಗೆ ವಲಸೆ ಬಂದ  ರೊಹಿಂಗ್ಯಾ ಸಮುದಾಯದ ಜನರು  ಜಮ್ಮು-ಕಾಶ್ಮೀರ, ಹೈದ್ರಾಬಾದ್, ಹರ್ಯಾಣ, ಉತ್ತರ ಪ್ರದೇಶ, ದೆಹಲಿ , ರಾಜಸ್ತಾನ ಮತ್ತಿತರ ಕಡೆಗಳಲ್ಲಿ ವಾಸಿಸುತ್ತಿದ್ದಾರೆ.

SCROLL FOR NEXT