ದೇಶ

ಮುಂದಿನ ಲೋಕಸಭೆಗೆ ಅಗತ್ಯವಿರುವ ಇವಿಎಂ, ವಿವಿಪ್ಯಾಟ್ ವರ್ಷಾಂತ್ಯಕ್ಕೆ ಲಭ್ಯ: ಚುನಾವಣಾ ಆಯೋಗ

Lingaraj Badiger
ನವದೆಹಲಿ: ಮುಂದಿನ ವರ್ಷ ಲೋಕಸಭೆ ಚುನಾವಣೆ ನಡೆಸಲು ಸುಮಾರು 23.35 ಲಕ್ಷ ಇವಿಎಂ ಹಾಗೂ 16.15 ಲಕ್ಷ ವಿವಿಪ್ಯಾಟ್ ಗಳ ಅಗತ್ಯವಿದ್ದು, ಈ ವರ್ಷಾಂತ್ಯಕ್ಕೆ ಅವು ನಮ್ಮ ಕೈಸೇರಲಿವೆ ಎಂದು ಬುಧವಾರ ಚುನಾವಣಾ ಆಯೋಗ ತಿಳಿಸಿದೆ.
ವಿವಿಪ್ಯಾಟ್ ಡೆಲಿವೆರಿ ವಿಳಂಬಕ್ಕೆ ತಾಂತ್ರಿಕ ಕಾರಣ ಎಂದಿರುವ ಚುನಾವಣಾ ಆಯೋಗ, ಅಗತ್ಯವಿರುವ ಎಲ್ಲಾ ಇವಿಎಂಗಳು ಸೆಪ್ಟೆಂಬರ್ 30ರೊಳಗೆ ಮತ್ತು ವಿವಿಪ್ಯಾಟ್ ಗಳು ನವೆಂಬರ್ ಒಳಗೆ ಡೆಲಿವೆರಿಯಾಗಲಿವೆ ಎಂದು ಆಯೋಗ ಪ್ರಕಟಣೆಯಲ್ಲಿ ತಿಳಿಸಿದೆ.
16.15 ಲಕ್ಷ ವಿವಿಪ್ಯಾಟ್ ಗಾಗಿ ಚುನಾವಣಾ ಆಯೋಗ ಬಿಇಎಲ್ ಮತ್ತು ಇಸಿಐಎಲ್ ಕಂಪನಿಗೆ ಗೆ ಆರ್ಡರ್ ನೀಡಿ 14 ತಿಂಗಳಲು ಕಳೆದರೂ ಕೇವಲ 3.48 ಲಕ್ಷ ಯ್ಯೂನಿಟ್ ಗಳನ್ನು ಮಾತ್ರ ನೀಡಲಾಗಿದೆ ಎಂಬ ಮಾಧ್ಯಗಳ ವರದಿಯ ಹಿನ್ನೆಲೆಯಲ್ಲಿ ಆಯೋಗ ಈ ಪ್ರಕಟಣೆ ನೀಡಿದೆ.
SCROLL FOR NEXT