ಮುಂಬೈ: ಮರಾಠ ಸಮುದಾಯಕ್ಕೆ ಸರ್ಕಾರಿ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ಕಲ್ಪಿಸಬೇಕು ಎಂದು ಒತ್ತಾಯಿಸಿ ಮಹಾರಾಷ್ಟ್ರದ ಹಲವು ಭಾಗದಲ್ಲಿ ಹಿಂಸಾತ್ಮಕ ಪ್ರತಿಭಟನೆ ನಡೆಯುತ್ತಿರುವ ಬೆನ್ನಲ್ಲೇ ಮುಸ್ಲಿಂ ಸಮೂದಾಯಕ್ಕೂ ಮೀಸಲಾತಿ ನೀಡಬೇಕು ಎಂದು ಶುಕ್ರವಾರ ಮಹಾರಾಷ್ಟ್ರ ಕಾಂಗ್ರೆಸ್ ಶಾಸಕರೊಬ್ಬರು ಒತ್ತಾಯಿಸಿದ್ದಾರೆ.
ಎಎನ್ಐ ಜತೆ ಮಾತನಾಡಿದ ಕಾಂಗ್ರೆಸ್ ಶಾಸಕ ಅಮಿನ್ ಪಟೇಲ್ ಅವರು, ಮುಸ್ಲಿಮರು ಸಹ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದೂಳಿದಿದ್ದು, ಅವರಿಗೂ ಮೀಸಲಾತಿ ನೀಡಬೇಕು ಎಂದರು.
ಮರಾಠ ಮತ್ತು ಧಂಗರ್ ಸಮಾಜದ ಜತೆಗೆ ಮುಸ್ಲಿಮರಿಗೂ ಮೀಸಲಾತಿ ನೀಡಬೇಕು. ಅವರು ಸಹ ಆರ್ಥಿಕವಾಗಿ ಹಿಂದೂಳಿದಿದ್ದು, ಅವರನ್ನು ವಿಶೇಷ ಹಿಂದೂಳಿದ ವರ್ಗದ-ಎ ಅಡಿ ತರಬೇಕು ಎಂದು ಪಟೇಲ್ ಆಗ್ರಹಿಸಿದ್ದಾರೆ.