ನವದೆಹಲಿ: ಡಾಟಾ ಸಂರಕ್ಷಣೆಗೆ ಸಂಬಂಧಿಸಿದಂತೆ ಉನ್ನತ ಮಟ್ಟದ ಶ್ರೀಕೃಷ್ಣ ಸಮಿತಿ ಸರ್ಕಾರಕ್ಕೆ ವರದಿ ಸಲ್ಲಿಸಿದೆ.
ಖಾಸಗಿ ಮಾಹಿತಿ ರಕ್ಷಣೆಗೆ ಕೈಗೊಳ್ಳಬೇಕಾದ ಕ್ರಮ, ಡೇಟಾ ಪ್ರೊಸೆಸರ್ಗಳ ಬಾಧ್ಯತೆಯನ್ನು ವ್ಯಕ್ತಿಗಳ ಹಕ್ಕುಗಳೆಂಬುದನ್ನು ವರದಿಯಲ್ಲಿ ಉಲ್ಲೇಖಿಸಲಾಗಿದ್ದು, ಉಲ್ಲಂಘನೆ ಮಾಡಿದವರಿಗೆ ಶಿಕ್ಷೆ ವಿಧಿಸಲು ಶಿಫಾರಸ್ಸು ಮಾಡಲಾಗಿದೆ.
ನ್ಯಾ.ಬಿಎನ್ ಶ್ರೀಕೃಷ್ಣ ನೇತೃತ್ವದ ಸಮಿತಿ ಐಟಿ ಸಚಿವ ರವಿಶಂಕರ್ ಪ್ರಸಾದ್ ಅವರಿಗೆ ವರದಿಯನ್ನು ಸಲ್ಲಿಸಿದ್ದು, ಸೂಕ್ಷ್ಮ ವೈಯಕ್ತಿಕ ಡೇಟಾ, ವಿನಾಯಿತಿಗಳನ್ನು ನೀಡಬಹುದಾದ ಅಂಶಗಳು, ಡೇಟಾ ಸಂಸ್ಕರಣೆಗಿರುವ ಆಧಾರ, ವೈಯಕ್ತಿಕ ಡಾಟಾಗೆ ಇರುವ ಸ್ಟೋರೇಜ್ ನಿರ್ಬಂಧ, ಖಾಸಗಿ ಹಕ್ಕುಗಳು ಸೇರಿದಂತೆ ಹಲವು ಸೂಕ್ಷ್ಮ ವಿಷಯಗಳ ಬಗ್ಗೆ ವರದಿಯಲ್ಲಿ ಪ್ರಸ್ತಾಪಿಸಲಾಗಿದೆ.
"ಭಾರತೀಯ ಡಾಟಾ ಸಂರಕ್ಷಣೆ ಕಾನೂನು ಜಗತ್ತಿಗೇ ಮಾದರಿಯಾಗಬೇಕು, ಈ ಕಾನೂನಿನ ಬಗ್ಗೆ ವಿಸ್ತೃತವಾದ ಸಂಸದೀಯ ಚರ್ಚೆ ನಡೆಯಬೇಕಿದೆ" ಎಂದು ರವಿಶಂಕರ್ ಪ್ರಸಾದ್ ಹೇಳಿದ್ದಾರೆ.