ದೇಶ

ಒಂದು ವೇಳೆ 'ಮುಕ್ತ ಭಾರತ' ಅಂತ ಇರೋದಾದ್ರೆ, ಅದು ಬಿಜೆಪಿ ಮುಕ್ತ: ಚಿದಂಬರಂ

Vishwanath S
ಬೆಂಗಳೂರು: ಕಾಂಗ್ರೆಸ್ ನ ಹಿರಿಯ ಮುಖಂಡ, ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಅವರು ತಮ್ಮ ಪಕ್ಷದ ಕಾರ್ಯಕರ್ತರಿಗೆ, ಬಿಜೆಪಿಯ ಕಾಂಗ್ರೆಸ್ ಮುಕ್ತ ಭಾರತ ಘೋಷಣೆಗೆ ಹೆದರಬೇಡಿ. ಒಂದು ವೇಳೆ ಮುಕ್ತ ಭಾರತ ಅಂತ ಇರೋದಾದರೆ ಅದು ಬಿಜೆಪಿ ಮುಕ್ತ ಭಾರತ ಅಂತ ಹೇಳಿದ್ದಾರೆ. 
ಭಾರತದಲ್ಲಿ ಕಾಂಗ್ರೆಸ್ ಪ್ರಶ್ನಾತೀತ ರಾಜಕೀಯ ಪಕ್ಷವಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ರಾಜಕೀಯದಲ್ಲಿ ಹಲವು ಬದಲಾವಣೆಗಳು ಆಗಿದ್ದು ಸದ್ಯ ಪಕ್ಷವನ್ನು ತಳಮಟ್ಟದಿಂದ ಬಲಪಡಿಸುವ ಅಗತ್ಯವಿದೆ. ಮುಂದಿನ ಚುನಾವಣೆಗಳು ಪಕ್ಷವನ್ನು ತಳಮಟ್ಟವನ್ನು ಬಲಪಡಿಸುವ ಮೂಲಕ ಸ್ಪರ್ಧಿಸಬೇಕಿದೆ ಎಂದು ಕಾರ್ಯಕರ್ತರಿಗೆ ಚಿದಂಬರಂ ಧೈರ್ಯ ತುಂಬಿದರು. 
ಒಂದು ಕಾಲವಿತ್ತು ಅಂದು ಮಾಜಿ ಪ್ರಧಾನಿ ಜವಾಹರ್ ಲಾಲ್ ನೆಹರೂ ಹಾಗೂ ಇಂದಿರಾಗಾಂಧಿ ಹೆಸರನ್ನು ಹೇಳಿದರೆ ಸಾಕು ಲಕ್ಷಾಂತರ ಮತದಾರರು ಮತಗಟ್ಟೆಗೆ ಬಂದು ಕಾಂಗ್ರೆಸ್ ಪರವಾಗಿ ಮತ ಚಲಾಯಿಸುತ್ತಿದ್ದರು. ಅದೇ ರೀತಿ ಇಂದಿನ ಚುನಾವಣೆ ಬೂತ್ ಮಟ್ಟದ್ದಾಗಿದ್ದು ಅದಕ್ಕಾಗಿಯೇ ಪ್ರತಿ ಬೂತ್ ನಲ್ಲೂ ನಾವು ಇರಬೇಕು. ಪ್ರತಿ ಬೂತ್ ನಲ್ಲೂ ಸಾಕಷ್ಟು ಜನರನ್ನು ಹೊಂದಿರಬೇಕು ಎಂದು ಹೇಳಿದರು. 
ಇಂದು ರಾಜಕೀಯದಲ್ಲಿ ಹಲವು ಪಕ್ಷಗಳು ಪ್ರಮುಖ ಪಾತ್ರ ವಹಿಸುತ್ತಿವೆ ಮತ್ತು ಇದೀಗ ಹೆಚ್ಚಿನ ಪ್ರಾದೇಶಿಕ ಪಕ್ಷಗಳು ಮುಂಚೂಣಿಯಲ್ಲಿವೆ. ಆದರೆ ಕಾಂಗ್ರೆಸ್ ಮತ್ತು ಬಿಜೆಪಿ ಎರಡು ಪಕ್ಷಗಳು ಮಾತ್ರ ರಾಷ್ಟ್ರೀಯ ಹೆಜ್ಜೆ ಗುರುತನ್ನು ಹೊಂದಿವೆ ಎಂದು ಚಿದಂಬರಂ ಅವರು ಹೇಳಿದ್ದಾರೆ.
SCROLL FOR NEXT