ಸಾಂದರ್ಭಿಕ ಚಿತ್ರ 
ದೇಶ

ವೈದ್ಯಕೀಯ ಸಹಾಯವಿಲ್ಲದೆ ಮನೆಯಲ್ಲಿಯೇ ಹೆರಿಗೆ ದುಸ್ಸಾಹಸ: ಮಹಿಳೆ ಸಾವು, ಪತಿ ಬಂಧನ

ವೈದ್ಯಕೀಯ ಸಹಾಯವಿಲ್ಲದೆ, ಯೂಟ್ಯೂಬ್ ವಿಡಿಯೋ ನೆರವಿನಿಂದ ಹೆರಿಗೆ ದುಸ್ಸಾಹಸ ಮಾಡಿ ಮಹಿಳೆ ಸಾವನ್ನಪ್ಪಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆಯ ಪತಿಯನ್ನು ಪೊಲೀಸರು ಶುಕ್ರವಾರ ಬಂಧನಕ್ಕೊಳಪಡಿಸಿದ್ದಾರೆ...

ಕೊಯಿಮತ್ತೂರು: ವೈದ್ಯಕೀಯ ಸಹಾಯವಿಲ್ಲದೆ, ಯೂಟ್ಯೂಬ್ ವಿಡಿಯೋ ನೆರವಿನಿಂದ ಹೆರಿಗೆ ದುಸ್ಸಾಹಸ ಮಾಡಿ ಮಹಿಳೆ ಸಾವನ್ನಪ್ಪಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆಯ ಪತಿಯನ್ನು ಪೊಲೀಸರು ಶುಕ್ರವಾರ ಬಂಧನಕ್ಕೊಳಪಡಿಸಿದ್ದಾರೆ. 
ಶಾಸಗಿ ಶಾಲೆಯ ಶಿಕ್ಷಕಿಯಾಗಿದ್ದ ಕೃತಿಕಾ ಮೃತ ದುರ್ದೈವಿಯಾಗಿದ್ದಾರೆ. ಮೊದಲ ಮಗುವಿಗೆ ಆಸ್ಪತ್ರೆಯಲ್ಲಿಯೇ ಜನ್ಮ ನೀಡಿದ್ದ ಮಹಿಳೆ, ನಂತರ ನೈಸರ್ಗಿದ ವೈದ್ಯ ಪದ್ಧತಿ ಅನುಸರಿಸಲು ಇಚ್ಛಿಸಿದ್ದಾರೆ. ಇದರಂತೆ ಎರಡನೇ ಮಗುವನ್ನು ಮನೆಯಲ್ಲಿಯೇ ಹೆರಲು ನಿರ್ಧರಿಸಿ, ಇದಕ್ಕೆ ಈಕೆಯ ಪತಿ ಜೆ. ಕಾರ್ತಿಕೇಯನ್ ಕೂಡ ಬೆಂಬಲ ನೀಡಿದ್ದಾರೆ. ಸಹೋದ್ಯೋಗಿಯೊಬ್ಬರ ಹೆರಿಗೆ ಮನೆಯಲ್ಲಿದೇ ಆಗಿದೆ ಎಂಬ ವಿಚಾರ ಅರಿತಿದ್ದ ಕೃತಿಕಾ ಅವರು ತಾವೂ ಕೂಡ ಮನೆಯಲ್ಲಿಯೇ ಹೆರಿಗೆ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ. ಕಾರ್ತಿಕೇಯನ್ ಅವರ ಸ್ನೇಹಿತರಾದ ಪ್ರವೀಣ್ ಹಾಗೂ ಲಾವಣ್ಯ ಎಂಬುವವರು ಇದಕ್ಕೆ ಸಹಾಯ ಮಾಡಿದ್ದಾರೆ. 
ಯೂಟ್ಯೂಬ್ ನೋಡಿ ಮನೆಯಲ್ಲಿಯೇ ಹೆರಿಗೆ ಮಾಡಿಸಲು ಮುಂದಾಗಿದ್ದವರಿಗೆ ವೈದ್ಯಕೀಯ ಜ್ಞಾನವಿರಲಿಲ್ಲ ಎಂದು ಕೃತಿಕಾ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ. 
ಹೆರಿಗೆ ವೇಲೆ ಕೃತಿಕಾ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ನಂತರ ಪ್ರಜ್ಞೆ ಕಳೆದುಕೊಂಡಿದ್ದಾರೆ. ಸೂಕ್ತ ಸಮಯಕ್ಕೆ ಮಾಸು ಹೊರಬರದ ಕಾರಣ, ತೀವ್ರ ರಕ್ತಸ್ರಾವವಾಗಿದೆ. ಕೂಡಲೇ ಕೃತಿಕಾ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಷ್ಟರಲ್ಲಾಗಲೇ ಕೃತಿಕಾ ಅವರು ಸಾವನ್ನಪ್ಪಿದ್ದಾರೆ. 
ಪ್ರಕರಣ ಸಂಬಂಧ ಕೃತಿಕಾ ಪತಿ ಕಾರ್ತಿಕೇಯನ್ ವಿರುದ್ಧ ಐಪಿಸಿ ಸೆಕ್ಷನ್ 304 (ಎ) ನಿರ್ಲಕ್ಷ್ಯದ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಮನೆಯಲ್ಲಿಯೇ ಹೆರಿಗೆ ಮಾಡಿಸಿಕೊಳ್ಳುವಂತೆ ಪತ್ನಿ ಮೇಲೆ ನಾನು ಒತ್ತಡ ಹೇರಿರಲಿಲ್ಲ. ಹೆರಿಗೆ ವಿಚಾರ ಆಕೆಯ ಆಯ್ಕೆಗೆ ಬಿಟ್ಟಿದ್ದೆ ಎಂದು ಕಾರ್ತಿಕೇಯನ್ ಅವರು ಪೊಲೀಸರಿಗೆ ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಪಶ್ಚಿಮ ಏಷ್ಯಾದ ಉದ್ವಿಗ್ನತೆ ನಡುವೆ ಮೋದಿ- ಪೆಜೆಶ್ಕಿಯನ್ ಮಾತುಕತೆ: ದೀರ್ಘಕಾಲೀನ, ಪರಸ್ಪರ ಲಾಭದಾಯಕ ಕಾರ್ಯತಂತ್ರಕ್ಕೆ ಒತ್ತು

ಲೋಕೋಪಯೋಗಿ ಇಲಾಖೆಯಲ್ಲಿ 'ಲಂಚ'; ವಿದೇಶಿ ಷೇರು ಹೂಡಿಕೆ ಇತ್ಯಾದಿ; ಸತೀಶ್ ಜಾರಕಿಹೊಳಿ ಮನೆಯಲ್ಲಿ ಸಿಕ್ಕಿದ್ದೇನು? EDಯಿಂದ ಅಧಿಕೃತ ಹೇಳಿಕೆ

ಬದರಿನಾಥದ 'ತಪ್ತ ಕುಂಡ'ದಲ್ಲಿ 108 ಬಾರಿ ಧಾರ್ಮಿಕ ಸ್ನಾನ: ರಾಜಸ್ಥಾನದ ಇಬ್ಬರು ವೃದ್ಧೆಯರು ಸಾವು!

BRICS 2026: ಪುಟಿನ್-ಮೋದಿ ಮಾತುಕತೆ: ಕಪ್ಪು ಸಮುದ್ರದಲ್ಲಿ ಭಾರತೀಯರ ಸುರಕ್ಷತೆಯ ವಿಷಯ ಪ್ರಸ್ತಾಪ ರಷ್ಯಾ ಅಧ್ಯಕ್ಷ ಹೇಳಿದ್ದೇನು?

ಬ್ರಿಕ್ಸ್ ಶೃಂಗಸಭೆ: ಭಾರಿ ಭದ್ರತೆ, ಐಷಾರಾಮಿ ವಿಮಾನದಲ್ಲಿ ನವದೆಹಲಿಗೆ ಆಗಮಿಸಿದ ಪುಟಿನ್! "ಡೂಮ್ಸ್ ಡೇ' ವಿಶೇಷತೆ ಏನು ಗೊತ್ತಾ? Video