ಪ್ರಧಾನಮಂತ್ರಿ ನರೇಂದ್ರ ಮೋದಿ 
ದೇಶ

ಉತ್ತಮ ಆಡಳಿತದ ಲಾಭಗಳು ಪ್ರತೀಯೊಬ್ಬರನ್ನೂ ತಲುಪಬೇಕು; ಮನ್ ಕಿ ಬಾತ್'ನಲ್ಲಿ ಪ್ರಧಾನಿ ಮೋದಿ

ಉತ್ತಮ ಆಡಳಿತ ಹಾಗೂ ಅಭಿವೃದ್ಧಿಯ ಲಾಭಗಳು ಪ್ರತೀಯೊಬ್ಬರನ್ನೂ ತಲುಪಬೇಕು. ಇದು ನವ ಭಾರತದ ಅಡಿಪಾಯವಾಗಲಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭಾನುವಾರ ಹೇಳಿದ್ದಾರೆ...

ನವದೆಹಲಿ: ಉತ್ತಮ ಆಡಳಿತ ಹಾಗೂ ಅಭಿವೃದ್ಧಿಯ ಲಾಭಗಳು ಪ್ರತೀಯೊಬ್ಬರನ್ನೂ ತಲುಪಬೇಕು. ಇದು ನವ ಭಾರತದ ಅಡಿಪಾಯವಾಗಲಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭಾನುವಾರ ಹೇಳಿದ್ದಾರೆ. 
46ನೇ ಆವೃತ್ತಿಯ ರೇಡಿಯೋ ಕಾರ್ಯಕ್ರಮದ ಮನ್ ಕಿ ಬಾತ್ ನಲ್ಲಿ ಮಾತನಾಡಿರುವ ಮೋದಿಯವರು, ಲೋಕಮಾನ್ಯ ಬಾಲಗಂಗಾಧರ್ ತಿಲಕ್ ಅವರು ಸ್ವರಾಜ್ ನನ್ನ ಜನ್ಮಸಿದ್ಧ ಹಕ್ಕು ಎಂಬ ಘೋಷಣೆಯನ್ನು ಕೂಗಿದ್ದರು. ಜನರಲ್ಲಿ ಆತ್ಮವಿಶ್ವಾಸದ ಬೆಂಕಿಯನ್ನು ಹೊತ್ತಿಸಿದ್ದರು. ಇಂದು ಸೂರಜ್ ನನ್ನ ಜನ್ಮ ಸಿದ್ಧ ಹಕ್ಕು ಎಂದು ಒತ್ತಿ ಹೇಳಬೇಕಿದೆ. ಉತ್ತಮ ಆಡಳಿತ ಹಾಗೂ ಅಭಿವೃದ್ಧಿಯ ಲಾಭಗಳು ಪ್ರತೀಯೊಬ್ಬರನ್ನು ತಲುಪಬೇಕು. ಇದು ನವಭಾರತಕ್ಕೆ ಅಡಿಪಾಯವಾಗಲಿದೆ ಎಂದು ಹೇಳಿದ್ದಾರೆ. ಇದೇ ವೇಳೆ ಬಾಲಗಂಗಾಧರ್ ತಿಲಕ್ ಅವರಿಗೆ ನಮನಗಳನ್ನು ಸಲ್ಲಿಸಿದ್ದಾರೆ. 
ಇದ್ದಕ್ಕಿದ್ದಂತೆ ಸುರಿದ ಮಳೆಯಿಂದಾಗಿ ಥೈಲ್ಯಾಂಡ್ ಗುಹೆಯಲ್ಲಿ 12 ಬಾಲಕರು ಸಿಲುಕಿಕೊಂಡಿದ್ದರು. ಘಟನೆ ವೇಳೆ ಜನರು ತೋರಿದ ಜವಾಬ್ದಾರಿ ಅತ್ಯುತ್ತವಾಗಿತ್ತು. ಈ ಕಾರ್ಯಾಚರಣೆ ತಾಳ್ಮೆ, ಶೂರತೆ ಬಗ್ಗೆ ಸಾಕಷ್ಟು ಪಾಠ ಕಲಿಯುವಂತೆ ಮಾಡಿತ್ತು ಎಂದು ಹೇಳಿದ್ದಾರೆ. 
ಹಿಂದಿಯ ಹೆಸರಾಂತ ಗೀತಕಾರ ಗೋಪಾಲ್ ದಾಸ್ ಅವರು ವಿಧಿವಶರಾಗಿರುವ ಹಿನ್ನಲೆಯಲ್ಲಿ ಶ್ರದ್ಧಾಂಜಲಿ ಸಲ್ಲಿಸಿದರು. 
ಪ್ರಸಕ್ತ ಸಾಲಿನ ಜುಲೈ ತಿಂಗಳು ರೈತರು ಹಾಗೂ ವಿದ್ಯಾರ್ಥಿಗಳಿಗೆ ಅತ್ಯಂತ ಕಠಿಣ ಸಮಯವಾಗಿದೆ. ಹೊಸ ಕಾಲೇಜು ಮತ್ತು ಶಾಲೆಗಳಿಗೆ ಮಕ್ಕಳು ದಾಖಲಾಗಬೇಕಾಗುತ್ತದೆ. ಕೆಲ ವಿದ್ಯಾರ್ಥಿಗಳು ಮನೆಯಿಂದ ಹೊರಬಂದು ಕಾಲೇಜುಗಳಿಗೆ ಸೇರ್ಪಡೆಗೊಳ್ಳಬೇಕಾಗುತ್ತದೆ. ಈ ವೇಳೆ ವಿದ್ಯಾರ್ಥಿಗಳು ತಾಳ್ಮೆಯಿಂದ ಇರಬೇಕಿದ್ದು, ಜೀವನದ ಸಂತೋಷವನ್ನು ಆಹ್ಲಾದಿಸಬೇಕು. 
ಜೀವನ ಬದಲಾಯಿಸಲು ಯುವಕರು ತಂತ್ರಾಜ್ಞಾನಗಳನ್ನು ಬಳಕೆ ಮಕಾಡುತ್ತಿದ್ದಾರೆ. ರಾಯ್ ಬರೇಲಿಯ ಇಬ್ಬರು ಯುವಕರು ಅಮೆರಿಕಾದಲ್ಲಿದ್ದು, ಸ್ಮಾರ್ಟ್ ಗಾಂವ್ ಆ್ಯಂಪ್ ಸಿದ್ಧಪಡಿಸಿದ್ದಾರೆ. ಈ ಆ್ಯಪ್ ಗ್ರಾಮದಲ್ಲಿ ಡಿಜಿಟಲ್ ಕ್ರಾಂತಿಯನ್ನು ಸೃಷ್ಟಿಸಿದೆ. ಈ ಆ್ಯಪ್ ಮೂಲಕ ಗ್ರಾಮದ ಪ್ರತೀ ವಿಚಾರವನ್ನೂ ತಿಳಿದುಕೊಳ್ಳಬಹುದಾಗಿದೆ ಎಂದು ಹೊಗಳಿದ್ದಾರೆ. 
ದುಷ್ಟರ ವಿರುದ್ಧ ಹೇಗೆ ಹೋರಾಡಬೇಕೆಂಬುದನ್ನು ನಮ್ಮ ಸಂತರು ಹೇಳಿಕೊಟ್ಟಿದ್ದಾರೆ. ಸಂತರ ಹೇಳಿಕೊಟ್ಟಿರುವ ಪಾಠ ಪ್ರತೀಯೊಬ್ಬರಿಗೂ ಪ್ರೇರಣೆಯಾಗಿದೆ. 
ಅಹಮದಾಬಾದ್'ನ ಆಟೋ ಚಾಲಕನ ಮಗಳಾದ ಅಫ್ರಿನ್ ಶೇಖ್ ಕಡು ಬಡುತನದ ನಡುವೆಯ ಬಿಎಸ್ಇಬಿ ಪರೀಕ್ಷೆಯಲ್ಲಿ ಶೇ,.98.31ರಷ್ಟು ಅಂಕಗಳನ್ನು ಪಡೆದಿದ್ದು, ಅಫ್ರಿನ್ ಶೇಖ್ ಸಾಧನೆಯನ್ನು ಇದೇ ವೇಲೆ ಮೋದಿ ಶ್ಲಾಘಿಸಿದ್ದಾರೆ. 
ಮನ್ ಕಿ ಬಾತ್ ನಲ್ಲಿ ಮೋದಿಯವರು ತಮ್ಮ ಹೆಸರನ್ನು ಹೇಳಿದ್ದಕ್ಕೆ ಅಫ್ರಿನ್ ಸಂತವನ್ನು ವ್ಯಕ್ತಪಡಿಸಿದ್ದಾರೆ. 
ಐಎಎಎಫ್ 20ರ ವಯೋಮಿತಿಯ ವಿಶ್ವ ಜೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್'ನ ಮಹಿಳೆಯ ವಿಭಾಗದಲ್ಲಿ 400 ಮೀ. ಓಟದಲ್ಲಿ ಚಿನ್ನ ಗೆಲ್ಲುವ ಮೂಲಕ ವಿಶ್ವ ದಾಖಲೆ ಮಾಡಿರುವ ಹಿಮಾದಾಸ್ ಅವರನ್ನೂ ಮೋದಿಯವರು ಕೊಂಡಾಡಿದ್ದಾರೆ. 
ಬಳಿಕ ಗಣೇಶ ಉತ್ಸವ ಹತ್ತಿರ ಬರುತ್ತಿರುವ ಹಿನ್ನಲೆಯಲ್ಲಿ ದೇಶದ ಜನತೆಗೆ ಸಂದೇಶವನ್ನು ನೀಡಿರುವ ಅವರು, ಗಣೇಶ ಹಬ್ಬವನ್ನು ಪರಿಸರ ಸ್ನೇಹಿಯಾಗಿ ಆಚರಿಸುವಂತೆ ಕರೆ ನೀಡಿದ್ದಾರೆ. ಲೋಕಮಾನ್ಯ ತಿಲಕ್ ಅವರ ಶ್ರಮದ ಮೂಲಕ ಗಣೇಶ ಉತ್ಸವವನ್ನು ಆಚರಿಸಲಾಗುತ್ತಿದೆ. ಪ್ರತೀಯೊಬ್ಬರೂ ಪರಿಸರ ಸ್ನೇಹಿ ಹಾದಿಯಲ್ಲಿಯೇ ಗಣೇಶ ಹಬ್ಬವನ್ನು ಆಚರಿಸಬೇಕೆಂದು ತಿಳಿಸಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

SCROLL FOR NEXT