ಸಾಂದರ್ಭಿಕ ಚಿತ್ರ 
ದೇಶ

ಬಿಹಾರ ಬಾಲಕಿಯರ ಮೇಲೆ ಅತ್ಯಾಚಾರ: ಮಹಿಳಾ ಸಿಬ್ಬಂದಿಯಿಂದಲೇ ಸೆಕ್ಸ್ ದಂಧೆ

ಬಿಹಾರದ ಮುಜಫರ್ ಪುರ್ ಜಿಲ್ಲೆಯಲ್ಲಿನ ನಿರಾಶ್ರಿತ ಶಿಬಿರದ 34 ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರಕ್ಕೆ ಅಲ್ಲಿನ ಮಹಿಳಾ...

ಪಾಟ್ನಾ: ಬಿಹಾರದ ಮುಜಫರ್ ಪುರ್ ಜಿಲ್ಲೆಯಲ್ಲಿನ ನಿರಾಶ್ರಿತ ಶಿಬಿರದ 34 ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರಕ್ಕೆ ಅಲ್ಲಿನ ಮಹಿಳಾ ಸಿಬ್ಬಂದಿಯೇ ಸಹಕರಿಸುತ್ತಿದ್ದರು ಎಂದು ಸಂತ್ರಸ್ತ ಬಾಲಕಿಯೊಬ್ಬರು ತಿಳಿಸಿದ್ದಾರೆ.
ಅತ್ಯಾಚಾರ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ಈಗಾಗಲೇ ಶಿಬಿರ ಏಳು ಮಹಿಳಾ ಸಿಬ್ಬಂದಿಯನ್ನು ಬಂಧಿಸಿದ್ದು, ಅವರು ಪುರುಷ ಸಿಬ್ಬಂದಿ ಮತ್ತು ಪುರುಷ ಸಂದರ್ಶಕರಿಗೆ ಬಾಲಕಿಯರ ಮೇಲೆ ಅತ್ಯಾಚಾರ ಎಸಗಲು ಅವಕಾಶ ಕಲ್ಪಿಸುತ್ತಿದ್ದರು ಮತ್ತು ರಾತ್ರಿ ವೇಳೆ ಬಾಲಕಿಯರನ್ನು ಹೊರಗಡೆ ಕರೆದೊಯ್ದು ದಂಧೆ ನಡೆಸುತ್ತಿದ್ದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಶಿಬಿರದಲ್ಲಿ 7 ರಿಂದ 18 ವರ್ಷದೊಳಗಿನ ಬಾಲಕಿಯರು ವಾಸಿಸುತ್ತಿದ್ದು, ಅವರನ್ನು ರಾತ್ರಿ ವೇಳೆ ಹೊರಗೆ ಕರೆದೊಯ್ದು, ಕಳೆದ ಮೂರು ವರ್ಷಗಳಿಂದ ಸೆಕ್ಸ್ ದಂಧೆ ನಡೆಸುತ್ತಿರುವ ಬಗ್ಗೆ ತನಿಖಾ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.
ಸೇವಾ ಸಂಕಲ್ಪ ಇವಂ ಸಮಿತಿ ಎಂಬ ಸ್ವಯಂ ಸೇವಾ ಸಂಸ್ಥೆ ಮುಜಾಫರ್ ಫುರದ ಸಾಹು ರಸ್ತೆಯಲ್ಲಿರುವ ಈ ನಿರಾಶ್ರಿತ ಶಿಬಿರವನ್ನು ನಡೆಸುತ್ತಿದ್ದು, ಬ್ರಿಜೇಶ್ ಕುಮಾರ್ ಠಾಕೂರ್ ಎಂಬಾತ ಇದರ ಮುಖ್ಯಸ್ಥನಾಗಿದ್ದು,  ಬ್ರಿಜೇಶ್ ಸೇರಿದಂತೆ 9 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. 
ಈ ಶಿಬಿರದ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಇಂದು ಕುಮಾರಿ, ರಾತ್ರಿ ವೇಳೆ ಪುರುಷ ಸಂದರ್ಶಕರನ್ನು ಶಿಬಿರಕ್ಕೆ ಕರೆತರತ್ತಿದ್ದರು ಎನ್ನಲಾಗಿದೆ.
ಇನ್ನು ಸಂತ್ರಸ್ತ ಬಾಲಕಿಯರು ಪೊಲೀಸರ ಮುಂದೆ ಮತ್ತು ಮ್ಯಾಜಿಸ್ಟ್ರೇಟ್ ಕೋರ್ಟ್ ಮುಂದೆ ನೀಡಿದ ಹೇಳಿಕೆ ಪ್ರಕಾರ, ಕಿರಣ್ ಆಂಟಿ ಮತ್ತು ಶಿಬಿರದಲ್ಲಿ ಸಹಾಯಕಿಯಾಗಿ ಕೆಲಸ ಮಾಡುತ್ತಿರುವ ಚಂದಾ ಆಂಟಿ ಇಬ್ಬರು ನಮ್ಮನ್ನು ರಾತ್ರಿ ವೇಳೆ ಪ್ರತ್ಯೇಕ ರೂಮ್ ಗೆ ಕಳುಹಿಸುತ್ತಿದ್ದರು. ಅಲ್ಲಿ ಅಪರಿಚತ ವ್ಯಕ್ತಿಯೊಬ್ಬರು ಹಾಜರಿರುತ್ತಿದ್ದರು. ಅಲ್ಲದೆ ಬಟ್ಟೆಯಿಲ್ಲದೆ ಬೆಡ್ ಮೇಲೆ ಮಲಗುವಂತೆ ಸೂಚಿಸುತ್ತಿದ್ದರು ಎಂದು ಹೇಳಿದ್ದಾರೆ.
ಈ ಕರ್ಮಕಾಂಡ ಬಯಲಿಗೆ ಬಂದ ನಂತರ ಮೊದಲಿಗೆ 29 ಬಾಲಕಿಯರ ಮೇಲೆ ಅತ್ಯಾಚಾರ ನಡೆದಿದೆ ಎಂದು ಹೇಳಲಾಗಿತ್ತು. ಆದರೆ ಇದೀಗ 34 ಬಾಲಕಿರ ಮೇಲೆ ಅತ್ಯಾಚಾರ ನಡೆದಿರುವುದು ವೈದ್ಯಕೀಯ ತಪಾಸಣೆಯಿಂದ ಬಹಿರಂಗಗೊಂಡಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇಸ್ರೇಲ್- ಲೆಬನಾನ್ ನಡುವೆ 10 ದಿನಗಳ ಕದನ ವಿರಾಮ, ಇದು ನಾನು ನಿಲ್ಲಿಸಿದ 10 ನೇ ಯುದ್ಧ- ಟ್ರಂಪ್

ಲೋಕಸಭೆಯ ಸ್ಥಾನಗಳು 850ಕ್ಕೆ ಏರಿಕೆಯಿಂದ ಏನು ಲಾಭ?: ಅಮಿತ್ ಶಾ ಹೇಳಿದ್ದಿಷ್ಟು...

ರಾಮ-ಲಕ್ಷ್ಮಣರು ಕದ್ದು ಹಣ್ಣು ತಿಂದರು, ಅದಕ್ಕೆ ಯುದ್ಧ ಆಯ್ತು: ನಗೆಪಾಟಲಿಗೀಡಾದ ಪ್ರಕಾಶ್ ರಾಜ್, Video

ದೇವಸ್ಥಾನಗಳಲ್ಲಿರುವ ಟನ್ ಗಟ್ಟಲೆ ಚಿನ್ನವನ್ನು ಹೊರತೆಗೆದು ಸಾರ್ವಜನಿಕ ಉದ್ದೇಶಕ್ಕೆ ಬಳಸಬೇಕು- ಫಾದರ್ ಪೌಲ್ ಥೆಲಕ್ಕಟ್

ರಾಜ್ಯ ಪೊಲೀಸ್ ಮಹಾನಿರ್ದೇಶಕ ಎಂ.ಎ ಸಲೀಂ ಸೇವಾವಧಿ ವಿಸ್ತರಿಸಿ ರಾಜ್ಯ ಸರ್ಕಾರ ಆದೇಶ!

SCROLL FOR NEXT