ನವದೆಹಲಿ: ಅಂತಾರಾಷ್ಟ್ರೀಯ ಫಿಸಿಕ್ಸ್ ಒಲಂಪಿಯಾಡ್ 2018 ರಲ್ಲಿ ಭಾರತದ ವಿದ್ಯಾರ್ಥಿಗಳು ಅದ್ಭುತ ಸಾಧನೆ ಮಾಡಿದ್ದು, 5 ಚಿನ್ನದ ಪದಕ ಗೆದ್ದಿದ್ದಾರೆ.
ಪೋರ್ಚುಗಲ್ ನ ಲಿಸ್ಬಾನ್ ನಲ್ಲಿ ನಡೆದ ಐಪಿಹೆಚ್ ಒ ದಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ತಂಡದ ಪ್ರತಿಯೊಬ್ಬ ಸದಸ್ಯರೂ ಅದ್ಭುತ ಪ್ರದರ್ಶನ ನೀಡಿದ್ದು, 5 ಜನಕ್ಕೂ ಚಿನ್ನದ ಪದಕ ದೊರೆತಿದೆ. 21 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಭಾರತದ ಎಲ್ಲಾ ವಿದ್ಯಾರ್ಥಿಗಳೂ ಸಹ ಚಿನ್ನದ ಪದಕ ಗೆದ್ದಿದ್ದಾರೆ.
86 ರಾಷ್ಟ್ರಗಳ ಪೈಕಿ ಐಪಿಹೆಚ್ ಒ ದಲ್ಲಿ ಗರಿಷ್ಠ ಚಿನ್ನದ ಪದಕ ಗಳಿಸಿರುವ ಮತ್ತೊಂದು ರಾಷ್ಟ್ರ ಚೀನಾ ಆಗಿದೆ. ಮುಂಬೈ ನ ಭಾಸ್ಕರ್ ಗುಪ್ತ, ಕೋಟಾದಿಂದ ಲೇ ಜೈನ್, ರಾಜ್ ಕೋಟ್ ನಿಂದ ನಿಶಾಂತ್ ಅಭಂಗಿ, ಜೈಪುರದಿಂದ ಪವಾನ್ ಗೋಯಲ್, ಕೋಲ್ಕತ್ತಾದಿಂದ ಸಿದ್ಧಾರ್ಥ್ ತಿವಾರಿ ಅಂತಾರಾಷ್ಟ್ರೀಯ ಫಿಸಿಕ್ಸ್ ಒಲಂಪಿಯಾಡ್ 2018 ರಲ್ಲಿ ಭಾಗವಹಿಸಿದ್ದರು.