ದೇಶ

ಮಾಲೆಗಾಂವ್ ಸ್ಪೋಟ: ಇಬ್ಬರು ಆರೋಪಿಗಳ ಖುಲಾಸೆ ಅರ್ಜಿ ವಿಚಾರಣೆಗೆ ಬಾಂಬೆ ಹೈಕೋರ್ಟ್ ಸಮ್ಮತಿ

Raghavendra Adiga
ಮುಂಬೈ: 2008 ರ ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ಆರೊಪಿಗಳಾದ ಸಾಧ್ವಿ ಪ್ರಜ್ಞಾ ಸಿಂಗ್ ಮತ್ತು ಸಮೀರ್ ಕುಲಕರ್ಣಿ ಅವರ ಬಿಡುಗಡೆಗೆ ಸಂಬಂಧಿಸಿದ ಅರ್ಜಿ ವಿಚಾರಣೆಗೆ ಬಾಂಬೆ ಹೈಕೋರ್ಟ್ ಸಮ್ಮತಿಸಿದೆ.
ಪ್ರಕರಣದಲ್ಲಿ ಪ್ರಮುಖ ಆರೊಪಿಯಾಗಿದ್ದ ಲೆಫ್ಟಿನೆಂಟ್ ಕರ್ನಲ್ ಪ್ರಸಾದ್ ಪುರೋಹಿತ್ ಅವರ ಖುಲಾಸೆ ಅರ್ಜಿ ಒಪ್ಪಿಕೊಂಡ ನ್ಯಾಯಾಲಯದ ನಿಲುವಿನ ಬಳಿಕ ಈ ಅರ್ಜಿಗಳ ಪ್ರಸ್ತಾಪ ಬಂದಿದೆ.
"ಕರ್ನಲ್ ಪುರೋಹಿತ್ ಅವರ ಬಿಡುಗಡೆ ವಿಚಾರವಾಗಿ ಇದಾಗಲೇ ವಿಚಾರಣೆ ನಡೆಸುತ್ತಿರುವ ಬಾಂಬೆ ಹೈಕೋರ್ಟ್ ಇದೀಗ ಕೆಳ ನ್ಯಾಯಾಲಯದಿಂದ ತಿರಸ್ಕರಿಸಲ್ಪಟ್ಟ ಸಾಧ್ವಿ ಪ್ರಜ್ಞಾ ಸಿಂಗ್ ಅವರ ಮನವಿಯನ್ನು ಸಹ ಒಪ್ಪಿಕೊಂಡಿದೆ. ಆರೋಪಿಗಳ ಪರ ವಕೀಲರಾದ  ಪ್ರಶಾಂತ್ ಮಗ್ಗು ಎ ಎನ್ ಐ ಗೆ ತಿಳಿಸಿದ್ದಾರೆ.
ಅರ್ಜಿಗಳ ಜಂಟಿ ವಿಚಾರಣೆಯು ಆಗಸ್ಟ್ 13 ರಂದು ನಡೆಯಲಿದೆ.
ನಾಸಿಕ್ ನ ಮಾಲೆಗಾಂವ್ ಪಟ್ಟಣದಲ್ಲಿ ಸೆಪ್ಟೆಂಬರ್ 29, 2009 ಸಂಭವಿಸಿದ ಬಾಂಬ್ ಸ್ಪೋಟದಲ್ಲಿ  ಆರು ಜನರು ಮೃತಪಟ್ಟು  101 ಮಂದಿ ಗಾಯಗೊಂಡಿದ್ದರು.
ನವೆಂಬರ್ 2008 ರಲ್ಲಿ, ಭಯೋತ್ಪಾದನಾ ವಿರೋಧಿ ದಳ (ಎಟಿಎಸ್) ಪ್ರಕರಣ ಸಂಬಂಧ 11 ಜನರನ್ನು  ಬಂಧಿಸಿತ್ತು. ಆದರೆ ಏಪ್ರಿಲ್ 2011ರಲ್ಲಿ ಎಟಿಎಸ್ ತನಿಖೆಯನ್ನು ಎನ್ ಐಎಗೆ ವರ್ಗಾಯಿಸಲಾಗಿತ್ತು.
SCROLL FOR NEXT