ದೇಶ

ತೃತೀಯ ಲಿಂಗಿಗಳನ್ನು ಇತರ'ರು’ ಎಂದು ಕರೆದದ್ದಕ್ಕಾಗಿ ಮೇನಕಾ ಗಾಂಧಿ ಕ್ಷಮೆ ಯಾಚನೆ

Raghavendra Adiga
ನವದೆಹಲಿ: ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಸಚಿವೆ  ಮನೇಕಾ ಗಾಂಧಿ ತಾವು ತೃತೀಲ ಲಿಂಗಿಗಳಿಗೆ ’ಇತರರು’ ಎಂದು ತಪ್ಪಾಗಿ ಪದ ಬಳಕೆ ಮಾಡಿದುದಕ್ಕೆ ಲೋಕಸಭೆಯಲ್ಲಿ ಕ್ಷಮಾಪಣೆ ಕೇಳಿದ್ದಾರೆ. "ನಾನು ಉದ್ದೇಶಪೂರ್ವಕವಾಗಿ ಹೇಳಿಲ್ಲ, ನನ್ನ ಅಜ್ಞಾನದ ಕಾರಣ ಈ ತಪ್ಪು ಸಂಭವಿಸಿದೆ ಎಂದು ಅವರು ಹೇಳಿದರು.
ಶಾಲಾ ಪಠ್ಯಪುಸ್ತಕಗಳಲ್ಲಿ ಮಾನವ ಕಳ್ಳಸಾಗಣೆ ತಡೆಗಟ್ಟುವ ಬಗ್ಗೆ ಮಾಹಿತಿಯನ್ನು ಸೇರಿಸುವುದರ ಕುರಿತು ಲೋಕಸಭೆಯಲ್ಲಿ ಮಾತನಾಡುವ ವೇಳೆ ಮೇನಕಾ ಗಾಂಧಿ ತಾವು ತೃತೀಯ ಲಿಂಗಿಗಳನ್ನು ’ಇತರರು’ ಎಂದು ಸಂಬೋಧಿಸಿದ್ದರು. 
ಇದಕ್ಕೂ ಮುನ್ನ ನ್ಯಾಷನಲ್ ಅಲೆಯನ್ಸ್ ಫಾರ್ ಪೀಪಲ್ಸ್ ಮೂಮೆಂಟ್ ಆಂಡ್ ಟ್ರಾನ್ಸ್ ವುಮನ್ ಸಂಘಟನೆಯ ಸದಸ್ಯೆ ಮೇರಾ ಸಂಘಮಿತ್ರ  ಸೇರಿ ಅನೆಕ ಸಂಸದರು ಮೇನಕಾ ಅವರ ಕ್ಷಮೆ ಯಾಚಿಸಬೇಕೆಂದು ಒತ್ತಾಯಿಸಿದ್ದರು.
"ಇತರರು ಎಂದು ಪದ ಬಳಕೆ ಮಾಡಿದುದಕ್ಕಾಗಿ ನಾನು ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ' ಮಾನವ ಕಳ್ಳ ಸಾಗಣೆ ತಡೆಗಟ್ಟುವಿಕೆ ವಿಧೇಯಕ ಕುರಿತ ಚರ್ಚೆ ಸಮಯದಲ್ಲಿ ನಾನುಈ ಪದ ಬಳಸಿದ್ದಕ್ಕಾಗಿ  ನಾನು ಕ್ಷಮೆ ಬೇಡುತ್ತೇನೆ. ಆದರೆ ಈ ಸಮುದಾಯಕ್ಕೆ ಅಧಿಕೃತವಾಗಿ ಏನೆನ್ನುತ್ತಾರೆ ಎನ್ನುವುದು ನನಗೆ ತಿಳಿದಿಲ್ಲ. ಆದರೆ ಭವಿಷ್ಯದಲ್ಲಿ ನಾನು ಈ ಸಮುದಾಯಕ್ಕಾಗಿರುವ ಅಧಿಕೃತ ಪದವನ್ನು ಉಲ್ಲೇಖಿಸಿ ಅವರನ್ನು ಹೆಸರಿಸುತ್ತೇನೆ" ಅವರು  ಹೇಳಿದ್ದಾರೆ.
SCROLL FOR NEXT