ಮೇಕ್ ಇನ್ ಇಂಡಿಯಾ ಲಾಂಛನ 
ದೇಶ

'ಮೇಕ್ ಇನ್ ಇಂಡಿಯಾ' ದಿಂದ ಸೃಷ್ಟಿಯಾದ ಉದ್ಯೋಗದ ಮಾಹಿತಿ ಇಲ್ಲ: ಕೇಂದ್ರ ಸರ್ಕಾರ

ಮೇಕ್ ಇನ್ ಇಂಡಿಯಾ ಅಡಿಯಲ್ಲಿ ಸೃಷ್ಟಿಯಾದ ಉದ್ಯೋಗಗಳ ಕುರಿತು ಯಾವುದೇ ದತ್ತಾಂಶವನ್ನು ನಾವು ಸಂಗ್ರಹಿಸುತ್ತಿಲ್ಲ ಎಂದು ಭಾರತ ಸರ್ಕಾರ ಹೇಳಿದೆ.

ನವದೆಹಲಿ: "ಮೇಕ್ ಇನ್ ಇಂಡಿಯಾ ಅಡಿಯಲ್ಲಿ ಸೃಷ್ಟಿಯಾದ  ಉದ್ಯೋಗಗಳ ಕುರಿತು ಯಾವುದೇ ದತ್ತಾಂಶವನ್ನು ನಾವು ಸಂಗ್ರಹಿಸುತ್ತಿಲ್ಲ ಎಂದು ಭಾರತ ಸರ್ಕಾರ ಹೇಳಿದೆ.
ಇಂತ ಯಾವುದೇ ದತ್ತಾಂಶ (ಡೇಟಾ) ವನ್ನು ನಾವು ನಿರ್ವಹಿಸುವುದಿಲ್ಲ ಎಂದು ಕೇಂದ್ರ  ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಸಿ ಆರ್ ಚೌಧರಿ ಲೋಕಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
ಮೇಕ್ ಇನ್ ಇಂಡಿಯಾ ಯೋಜನೆ ಪ್ರಾರಂಭವಾದ ಬಳಿಕದಿಂದ ಸೃಷ್ಟಿಯಾಗಿರುವ ಹೊಸ ಉದ್ಯೋಗಗಳ ಕುರಿತಂತೆ ಕೇಳಲಾದ ಪ್ರಶ್ನೆಗೆ ಅವರು ಉತ್ತರ ನೀಡಿದ್ದಾರೆ. 
2014 ರಿಂದಲೂ ದೇಶದಲ್ಲಿ ಉತ್ಪಾದನಾ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಲು ಸರ್ಕಾರ ಹಲವಾರು ಕ್ರಮಗಳನ್ನು ತೆಗೆದುಕೊಂಡಿದೆ.ಇದರಲ್ಲಿ ಗುಣಮಟ್ಟದ ಮೂಲಸೌಕರ್ಯ ಒದಗಿಸುವುದು, ಶಲ್ಯ ಅಭಿವೃದ್ಧಿ ಮತ್ತು ತಂತ್ರಜ್ಞಾನದ ಅಳವಡಿಕೆಯಂತಹದಕ್ಕೆ ಆದ್ಯತೆ ನಿಡಲಾಗಿದೆ.
ಭಾರತವನ್ನು ಜಾಗತಿಕ ಉತ್ಪಾದನಾ ಕೇಂದ್ರವಾಗಿ ಮಾಡಲು ಈ ಉಪಕ್ರಮವನ್ನು ಪ್ರಾರಂಭಿಸಲಾಗಿದ್ದು ಇದುವರೆಗೆ 27 ವಿವಿಧ ವಿಭಾಗಗಳಲ್ಲಿ ಇದನ್ನು ವಿಂಗಡಿಸಲಾಗಿದೆ ಎಂದು ಅವರು ಹೇಳಿದರು.
ಕೈಗಾರಿಕಾ ನೀತಿ ಹಾಗು ಪ್ರಚಾರ ವಿಭಾಗ 15 ಉತ್ಪಾದನಾ ಕ್ಷೇತ್ರಗಳ ನಿರ್ವಹಣೆ ಮಾಡುತ್ತಿದ್ದರೆ ವಾಣಿಜ್ಯ ಇಲಾಖೆ 12 ಸೇವಾ ಕ್ಷೇತ್ರಗಳನ್ನು ನಿರ್ವಹಿಸುತ್ತಿದೆ.
ಅಂತರಿಕ್ಷಯಾನ ಮತ್ತು ರಕ್ಷಣೆ, ವಾಹನ ಮತ್ತು ಆಟೋ ಕಂಪೋನೆಂತ್ ಔಷಧೀಯ ಮತ್ತು ವೈದ್ಯಕೀಯ ಸಾಧನಗಳು, ಜೈವಿಕ ತಂತ್ರಜ್ಞಾನ ಮತ್ತು ಕಾನೂನು ಸೇವೆಗಳನ್ನು  ಒಳಗೊಂಡು  ಹೊಸದಾಗಿ ಪರಿಷ್ಕರಿಸಲಾದ 27 ವಿಭಾಗಗಳನ್ನು ಇಲ್ಲಿ ಸೇರ್ಪಡಿಸಲಾಗಿದೆ. ಎಂದು ಸಚಿವರು ಮಾಹಿತಿ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್ ಮಾಡಿ ಟ್ರ್ಯಾಪ್​ ಮಾಡಲು ಯತ್ನ': ಡಿ ಕೆ ಶಿವಕುಮಾರ್ ಸ್ಫೋಟಕ ಆರೋಪ; Video

'Evil Dead': ನಟ ನಾನಾ ಪಾಟೇಕರ್ ಸಾವು, #MeToo ಆರೋಪ ಮಾಡಿದ್ದ ನಟಿ ತನುಶ್ರೀ ದತ್ತಾ ಹೇಳಿದ್ದೇನು? ವಿಚಿತ್ರ ಪೋಸ್ಟ್!

'SIR' ವಿರುದ್ಧ ಭಾರೀ ಪ್ರತಿಭಟನೆ: ಜ್ಞಾನೇಶ್ ಕುಮಾರ್ Z+ ಭದ್ರತೆ ಮತ್ತಷ್ಟು ಹೆಚ್ಚಿಸಿದ ಕೇಂದ್ರ ಸರ್ಕಾರ!

ಚಲಿಸುತ್ತಿದ್ದ ಬಸ್`ನಲ್ಲೇ ವೃದ್ಧನ 'ಮೈ ಬಿಸಿ ಏರಿಸಿ', 1 ಕೋಟಿ ರೂ ಮೌಲ್ಯದ ಚಿನ್ನ ಎಗರಿಸಿದ 'ಖತರ್ನಾಕ್ ಕಳ್ಳಿಯರು', Video

ಕಾವೇರಿ ವಿಚಾರದಲ್ಲಿ ಕರ್ನಾಟಕಕ್ಕೆ CWRC ಮತ್ತೆ ಶಾಕ್: ತಮಿಳುನಾಡಿಗೆ ನಿತ್ಯ 3,000 ಕ್ಯೂಸೆಕ್ ನೀರು ಹರಿಸಲು ಸೂಚನೆ