ಪಾಟ್ನಾ: ಬಿಹಾರ ರಾಜ್ಯಪಾಲರಿಗೆ ಬಿಜೆಪಿ ವಿಧಾನ ಪರಿಷತ್ ಸದಸ್ಯರೊಬ್ಬರು ಬೆದರಿಕೆ ಹಾಕಿದ್ದು, ಅದೊಂದು ಗೂಂಡಾ ಪಕ್ಷ ಎಂದು ಆರ್ ಜೆಡಿ ಮುಖಂಡ ಹಾಗೂ ಮಾಜಿ ಡಿಸಿಎಂ ತೇಜಸ್ವಿ ಯಾಗದವ್ ಆರೋಪಿಸಿದ್ದಾರೆ.
ಈ ಸಂಬಂಧ ವಿಡಿಯೋ ಟ್ವೀಟ್ ಮಾಡಿರುವ ತೇಜಸ್ವಿ, ರಾಜ್ಯಪಾಲ ಸತ್ಯಪಾಲ್ ಮಲ್ಲಿಕ್ ಅವರಿಗೆ ಬಿಜೆಪಿ ಎಂಎಲ್ ಸಿ ಬಹಿರಂಗವಾಗಿ ಬೆದರಿಕೆ ಹಾಕಿದ್ದಾರೆ.
ಗೂಂಡಾಗಳಿಂದ ತುಂಬಿಕೊಂಡಿರುವ ಬಿಜೆಪಿ ರಾಜ್ಯಪಾಲರಿಗೆ ಥಳಿಸಲು ಹಿಂದೆ-ಮುಂದೆ ನೋಡುವುದಿಲ್ಲ ಎಂದು ದೂರಿದ್ದಾರೆ.