ನವದೆಹಲಿ: ಏರ್ಸೆಲ್ -ಮ್ಯಾಕ್ಸಿಸ್ ಪ್ರಕರಣದ ಆರೋಪಿಯನ್ನು ವಿಚಾರಣೆಗೊಳಪಡಿಸಲು ಅನುಮತಿ ಪಡೆಯುವುದಕ್ಕಾಗಿ ದೆಹಲಿ ಕೋರ್ಟ್ ಸಿಬಿಐ ಗೆ 2 ತಿಂಗಳ ಕಾಲಾವಕಾಶ ನೀಡಿದೆ.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಮಾಜಿ ಸಚಿವ ಪಿ.ಚಿದಂಬರಂ, ಅವರ ಪುತ್ರ ಕಾರ್ತಿ ಚಿದಂಬರಂ, ಸರ್ಕಾರಿ ಅಧಿಕಾರಿಗಳು, ಆರು ಸಂಸ್ಥೆಗಳಳು ಸೇರಿದಂತೆ ಇನ್ನೂ 10 ಜನರ ವಿರುದ್ಧ ಈ ಇಬ್ಬರ ವಿರುದ್ಧವೂ ಜು.19 ರಂದು ಸಿಬಿಐ ಚಾರ್ಜ್ ಶೀಟ್ ದಾಖಲಿಸಿತ್ತು. ಆರೋಪಿಗಳ ಹೆಚ್ಚಿನ ವಿಚಾರಣೆಗಾಗಿ ಅನುಮತಿ ಪಡೆಯುವುದಕ್ಕಾಗಿ 2 ತಿಂಗಳ ಕಾಲಾವಕಾಶ ನೀಡುವುದಕ್ಕೆ ಮನವಿ ಮಾಡಿದ್ದ ತನಿಖಾ ಸಂಸ್ಥೆಗೆ ವಿಶೇಷ ಸಿಬಿಐ ನ್ಯಾಯಾಲಯದ ನ್ಯಾ.ಒ.ಪಿ ಸೈನಿ ಅನುಮತಿ ನೀಡಿದ್ದು ಮುಂದಿನ ವಿಚಾರಣೆಯನ್ನು ಅ.1 ಕ್ಕೆ ಮುಂದೂಡಿದ್ದಾರೆ.
ತನಿಖಾ ಸಂಸ್ಥೆ ಪರ ವಾದ ಮಂದಿಸಿದ ವಕೀಲ ಮಾಥುರ್, ಆರೋಪಿಗಳ ವಿಚಾರಣೆಗಾಗಿ ಸಂಬಂಧಪಟ್ಟ ಅಧಿಕಾರಿಗಳಿಂದ ಇನ್ನು ನಾಲ್ಕು ವಾರಗಳಲ್ಲಿ ಅನುಮತಿಗಾಗಿ ಎದುರುನೋಡುತ್ತಿದ್ದೇವೆ ಎಂದು ಕೋರ್ಟ್ ಗೆ ಮಾಹ್ತಿಇ ನೀಡಿದ್ದಾರೆ.