ತಿರುವನಂತಪುರ: ದೇಶದ ಅತೀ ಹೆಚ್ಚು ಪ್ರಮಾಣದ ನೀರನ್ನು ಸಂಗ್ರಸಬಲ್ಲ ಕೇರಳ ಇಡುಕ್ಕಿ ಡ್ಯಾಂ ನ ಗೇಟ್ ಗಳನ್ನು ಬರೊಬ್ಬರಿ 26 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ತೆರೆಯಲಾಗುತ್ತಿದೆ.
ಕೇರಳದ ಕುರತ್ತಿ ಗುಡ್ಡಗಾಡು ಪ್ರದೇಶದಲ್ಲಿರುವ ಪೆರಿಯಾರ್ ನದಿಗೆ ಅಡ್ಡಲಾಗಿ ಕಟ್ಟಿರುವ ಇಡುಕ್ಕಿ ಡ್ಯಾಂ ನ ಗೇಟ್ ಗಳನ್ನು 26 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ತೆರೆಯಲಾಗುತ್ತಿದೆ. ದಕ್ಷಿಣ ಏಷ್ಯಾದಲ್ಲೇ ಅತೀ ದೊಡ್ಡ ಮತ್ತು ಅತೀ ಹೆಚ್ಚಿನ ಪ್ರಮಾಣದ ನೀರನ್ನು ಸಂಗ್ರಹಿಸುವ ಸಾಮರ್ಥ್ಯ ಹೊಂದಿರುವ ಡ್ಯಾಮ್ ನ ಗೇಟ್ ಗಳನ್ನು ತೆರೆದು ನೀರು ಬಿಡುವಂತೆ ಕೇರಳ ಸರ್ಕಾರ ಸೂಚನೆ ನೀಡಿದೆ.
ಮುಂಗಾರು ಮಳೆ ಹಿನ್ನಲೆಯಲ್ಲಿ ಕೇರಳದಾದ್ಯಂತ ಭಾರಿ ಮಳೆ ಸುರಿಯುತ್ತಿದ್ದು, ಇಡುಕ್ಕಿ ಡ್ಯಾಂಗೆ ಅಪಾರ ಪ್ರಮಾಣದ ನೀರು ಹರಿಯುತ್ತಿದೆ. ಈಗಾಗಲೇ ಡ್ಯಾಂ ತುಂಬಿದ್ದು, ನೀರು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಇಡುಕ್ಕಿ ಡ್ಯಾಂ ಒಟ್ಟು 2, 400 ಅಡಿಗಳ ನೀರಿನ ಸಂಗ್ರಹ ಸಾಮರ್ಥ್ಯವನ್ನು ಹೊಂದಿದ್ದು, ಈಗಾಗಲೇ ಡ್ಯಾಂಗೆ ಬರೊಬ್ಬರಿ 2,392 ಅಡಿಗಳಷ್ಟು ನೀರು ಸಂಗ್ರಹವಾಗಿದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಡ್ಯಾಮ್ ಗೇಟ್ ಗಳನ್ನು ತೆರೆದು ನೀರು ಹೊರ ಬಿಡುವಂತೆ ಕೇರಳ ಸರ್ಕಾರ ಆದೇಶಿಸಿದೆ.
ಡ್ಯಾಮ್ ಗೇಟ್ ಗಳನ್ನು ತೆರೆಯುತ್ತಿರುವುದು 26 ವರ್ಷಗಳಲ್ಲೇ ಇದೇ ಮೊದಲು
ಇನ್ನು ಇಷ್ಟು ದೊಡ್ಡ ಡ್ಯಾಮ್ ನ ಗೇಟ್ ಗಳನ್ನು ಕಳೆದ 26 ವರ್ಷಗಳಿಂದ ತೆರೆದಿರಲಿಲ್ಲ. ಆದರೆ ಇದೇ ಮೊದಲ ಬಾರಿಗೆ ಡ್ಯಾಮ್ ನ ಗೇಟ್ ಗಳನ್ನು ತೆರೆದು ನೀರು ಬಿಡಲು ನಿರ್ಧರಿಸಲಾಗಿದೆ. ಈ ಹಿಂದೆ 1992ರಲ್ಲಿ ಡ್ಯಾಮ್ ಗೇಟ್ ಗಳನ್ನು ತೆರೆಯಲಾಗಿತ್ತು. 26 ವರ್ಷಗಳ ಬಳಿಕ ಡ್ಯಾಂ ತುಂಬಿದ್ದು, ಇದೇ ಕಾರಣಕ್ಕೆ ಹೆಚ್ಚುವರಿ ನೀರನ್ನು ಹೊರಗೆ ಬಿಡಲು ಆದೇಶಿಸಲಾಗಿದೆ. ಇನ್ನು ನೀರು ಬಿಡುತ್ತಿರುವ ಹಿನ್ನಲೆಯಲ್ಲಿ ಪೆರಿಯಾರ್ ನದಿ ಪಾತ್ರದ ಗ್ರಾಮಗಳಿಗ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದ್ದು, ಎತ್ತರ ಪ್ರದೇಶಗಳಿಗೆ ತೆರಳುವಂತೆ ಸೂಚಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics