ಸಾಂದರ್ಭಿಕ ಚಿತ್ರ 
ದೇಶ

ಆದಾಯ ತೆರಿಗೆ ಇಲಾಖೆಗೆ ಮಾಹಿತಿ ತಿಳಿಸಿ, 5 ಕೋಟಿ ರೂ. ಆದಾಯ ಗಳಿಸಿ

ಬೇನಾಮಿ ಆಸ್ತಿ , ವ್ಯವಹಾರದ ಬಗ್ಗೆ ಆದಾಯ ತೆರಿಗೆ ಇಲಾಖೆಗೆ ಸೂಕ್ತ ಮಾಹಿತಿ ನೀಡಿದ್ದರೆ, ಒಂದು ಕೋಟಿ ರೂಪಾಯಿ ಆದಾಯ ಗಳಿಸಬಹುದಾಗಿದೆ. ಅಲ್ಲದೇ ವಿದೇಶದಲ್ಲಿ ಬಚ್ಚಿಡಲಾಗಿರುವ ಕಪ್ಪುಹಣದ ಬಗ್ಗೆ ಮಾಹಿತಿ ನೀಡಿದ್ದರೆ, 5 ಕೋಟಿ ಆದಾಯ ಗಳಿಸಬಹುದಾಗಿದೆ.

ನವದೆಹಲಿ: ಬೇನಾಮಿ ಆಸ್ತಿ  , ವ್ಯವಹಾರದ ಬಗ್ಗೆ  ಆದಾಯ ತೆರಿಗೆ ಇಲಾಖೆಗೆ  ಸೂಕ್ತ ಮಾಹಿತಿ ನೀಡಿದ್ದರೆ,  ಒಂದು ಕೋಟಿ  ರೂಪಾಯಿ ಆದಾಯ ಗಳಿಸಬಹುದಾಗಿದೆ.  ಅಲ್ಲದೇ ವಿದೇಶದಲ್ಲಿ ಬಚ್ಚಿಡಲಾಗಿರುವ ಕಪ್ಪುಹಣದ ಬಗ್ಗೆ ಮಾಹಿತಿ ನೀಡಿದ್ದರೆ, 5 ಕೋಟಿ ಆದಾಯ ಗಳಿಸಬಹುದಾಗಿದೆ.

ಆದಾಯ ತೆರಿಗೆ ಕಾಯ್ದೆ 1961 ರ ಅಡಿಯಲ್ಲಿ ಭಾರತದಲ್ಲಿ ಆದಾಯ ಅಥವಾ ಆಸ್ತಿಗಳ ಮೇಲೆ ತೆರಿಗೆ ಗಣನೀಯವಾಗಿ ತಪ್ಪಿಸಿಕೊಳ್ಳುವುದು ತಡೆಯಲು ಮಾಹಿತಿ  ನೀಡುವವರಿಗೆ  50 ಲಕ್ಷ ರೂಪಾಯಿ ಬಹುಮಾನ ನೀಡುವ  ಆದಾಯ ತೆರಿಗೆ ಮಾಹಿತಿ ಪುರಸ್ಕಾರ ಯೋಜನೆಗೆ ತಿದ್ದುಪಡಿ  ತರಲಾಗಿದೆ.

ಬೇನಾಮಿ ವ್ಯವಹಾರ ಮಾಹಿತಿ ಪುರಸ್ಕಾರ ಯೋಜನೆ 2018ರ ಅಡಿಯಲ್ಲಿ ವಿದೇಶಿಗರು ಸೇರಿದಂತೆ ಯಾವುದೇ ವ್ಯಕ್ತಿ, ಬೆನಾಮಿ ಆಸ್ತಿ, ವ್ಯವಹಾರದ ಬಗ್ಗೆ   ಜಂಟಿ ಅಥವಾ  ಹೆಚ್ಚುವರಿ ಆಯುಕ್ತರಿಗೆ ಮಾಹಿತಿ ನೀಡಬಹುದಾಗಿದೆ.

ಬೇನಾಮಿ ಆಸ್ತಿ ವ್ಯವಹಾರದ ಬಗ್ಗೆ  ಜನರು ಮಾಹಿತಿ ನೀಡುವುದನ್ನು ಪ್ರೋತ್ಸಾಹಿಸುವುದು  ಪುರಸ್ಕಾರ ಯೋಜನೆಯ ಉದ್ದೇಶವಾಗಿದೆ. ಅಂತಹ ಆಸ್ತಿಗಳಿಂದ  ಆದಾಯ ಗಳಿಸಬಹುದಾಗಿದೆ ಹೇಳಲಾಗಿದೆ.
ಬೇನಾಮಿ ವ್ಯವಹಾರ ಮಾಹಿತಿ ಪುರಸ್ಕಾರ ಯೋಜನೆ-2018ರ ಅಡಿಯಲ್ಲಿ ಬೇನಾಮಿ ಆಸ್ತಿ, ವ್ಯವಹಾರದ ಬಗ್ಗೆ   ಸೂಕ್ತ  ಮಾಹಿತಿ ನೀಡುವ ವ್ಯಕ್ತಿಗೆ 1 ಕೋಟಿ ರೂಪಾಯಿ ಬಹುಮಾನ ನೀಡಲಾಗುವುದು , ಅಂತಹ ಆಸ್ತಿಗಳನ್ನು  ಬೇನಾಮಿ ವ್ಯವಹಾರ ( ನಿರ್ಬಂಧ)  ತಿದ್ದುಪಡಿ ಕಾಯ್ದೆ 2016ರ ಪ್ರಕಾರ  ಹರಾಜು  ಹಾಕಲಾಗುವುದು ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ.
ಮಾಹಿತಿ ನೀಡಿದ ವ್ಯಕ್ತಿಯ ಹೆಸರನ್ನು ಎಲ್ಲಿಯೂ ಬಹಿರಂಗಪಡಿಸುವುದಿಲ್ಲ, ಬಹುಮಾನ ಯೋಜನೆಯನ್ನು ಗೌಪ್ಯವಾಗಿಡಲಾಗುವುದು ಎಂದು ಆದಾಯ ತೆರಿಗೆ ಇಲಾಖೆ ಭರವಸೆ ನೀಡಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೆಂಗಳೂರಲ್ಲಿ ಆಪರೇಷನ್‌ ಫುಟ್‌ಪಾತ್‌: ಇದುವರೆಗೆ 9,878 ಅತಿಕ್ರಮಣ ತೆರವು; CM ಡಿಕೆಶಿ ಸಿಟಿ ರೌಂಡ್ಸ್!

Kumbh Mela viral girl ಮೊನಾಲಿಸಾ 'ನಾಪತ್ತೆ'​: ಪೊಲೀಸ್ ರಕ್ಷಣೆ ಹಿಂಪಡೆದ ಕೇರಳ ಹೈಕೋರ್ಟ್

BJP ಆರೋಪಗಳ ಬೆನ್ನಲ್ಲೇ ಮಂಗಳೂರಿನಲ್ಲಿ 8 ಬಾಂಗ್ಲಾದೇಶಿ ಪ್ರಜೆಗಳ ಬಂಧನ; ಗಡಿಪಾರಿಗೆ ಸಿದ್ಧತೆ

ವಿಜಯಪುರದಲ್ಲಿ ಭೀಕರ ಅಪಘಾತ: ಡಿವೈಡರ್‌ಗೆ ಕಾರು ಡಿಕ್ಕಿ; ಇಬ್ಬರು ಪುತ್ರರ ಜೊತೆ ತಾಯಿ ಸ್ಥಳದಲ್ಲೇ ಸಾವು!

'ಮಮತಾರಂತೆ ನಾನು ದುರ್ಬಲ, ಹೇಡಿ CM ಅಲ್ಲ': ಶಾಸಕ ಹುಮಾಯೂನ್ ಕಬೀರ್​ ಬೆವರಿಳಿಸಿದ ಸುವೇಂದು ಅಧಿಕಾರಿ