ದೇಶ

ನಟ ಸಲ್ಮಾನ್ ಖಾನ್ ಥಳಿಸಿದರೆ ರೂ.2 ಲಕ್ಷ; 'ಹಿಂದೂ ಹೀ ಆಗೇ' ಸಂಘಟನೆಯಿಂದ ಬಹುಮಾನ ಘೋಷಣೆ

Manjula VN
ಆಗ್ರಾ: ಬಾಲಿವುಡ್ ನಟ ಸಲ್ಮಾನ್ ಖಾನ್ ಅವರನ್ನು ಸಾರ್ವಜನಿಕ ಸ್ಥಳದಲ್ಲಿ ಥಳಸಿದರೆ ರೂ.2 ಲಕ್ಷ ಇನಾಮು ನೀಡುವುದಾಗಿ ಹಿಂದೂ ಹೀ ಆಗೇ ಸಂಘಟನೆ ಶುಕ್ರವಾರ ಘೋಷಣೆ ಮಾಡಿದೆ. 
ವಿಶ್ವ ಹಿಂದೂ ಪರಿಷತ್ ಮಾಜಿ ಅಧ್ಯಕ್ಷ ಪ್ರವೀಣ್ ತೊಗಾಡಿಯಾ ಅವರು ನೂತನ ಸಂಘಟನೆಯಾಗಿರುವ ಹಿಂದೂ ಹೀ ಆಗೇ ಆಗ್ರಾ ಘಟಕದ ಮುಖ್ಯಸ್ಥರಾಗಿರುವ ಗೋವಿಂದ ಪರಾಶರ್ ಅವರು ಈ ಘೋಷಣೆಯನ್ನು ಮಾಡಿದ್ದಾರೆ. 
ನಟ ಸಲ್ಮಾನ್ ಅವರು ಸಿನಿಮಾ ನಿರ್ಮಾಣ ಸಂಸ್ಥೆ ಲವ್'ರಾತ್ರಿ ಎಂಬ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದು, ಚಿತ್ರ ನವರಾತ್ರಿ ಸಂದರ್ಭದಲ್ಲಿ ಬಿಡುಗಡೆಯಾಗಲಿದೆ. 
ಚಿತ್ರದ ಹೆಸರಿಗೆ ಇದೀಗ ಭಾರೀ ವಿರೋಧಗಳು ವ್ಯಕ್ತವಾಗುತ್ತಿದ್ದು, ಚಿತ್ರಕ್ಕೆ ಲವ್'ರಾತ್ರಿ ಎಂಬ ಹೆಸರಿಡುವ ಮೂಲಕ ಹಿಂದೂಗಳ ಭಾವನೆಗೆ ಧಕ್ಕೆಯುಂಟು ಮಾಡಿದ್ದಾರೆ, ಚಿತ್ರಕ್ಕೆ ನಿಷೇಧ ಹೇರಬೇಕೆಂಬ ಹಿಂದೂ ಹೀ ಆಗೇ ಸಂಘಟನೆ ಆಗ್ರಹಿಸುತ್ತಿದೆ. 
ಸಂಘಟನೆಯ ಕಾರ್ಯಕರ್ತರು ಭಗವಾನ್ ಟಾಕೀಸ್ ಬಳಿ ಸಲ್ಮಾನ್ ಅವರ ಪೋಸ್ಟರ್ ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಸಲ್ಮಾನ್ ಅವರನ್ನು ಸಾರ್ವಜನಿಕವಾಗಿ ಥಳಿಸಿದವರಿಗೆ ರೂ.5 ಲಕ್ಷ ಬಹುಮಾನ ನೀಡುವುದಾಗಿ ಘೋಷಣೆ ಮಾಡಿದ್ದಾರೆ. 
ಸಲ್ಮಾನ್ ಖಾನ್ ಅವರಿಗೆ ಯಾರು ಹೊಡೆಯುತ್ತಾರೋ ಅವರಿಗೆ ರೂ.5 ಲಕ್ಷ ಹಾಗೂ ಚಿತ್ರದ ಸೆಟ್'ನ್ನು ಧ್ವಂಸಗೊಳಿಸಿದವರಿಗೆ ರೂ.2 ಲಕ್ಷ ಬಹುಮಾನ ನೀಡುವುದಾಗಿ ಪರಾಶರ್ ಅವರು ಘೋಷಣೆ ಮಾಡಿದ್ದಾರೆ. 
ಇಲ್ಲದೆ, ಚಿತ್ರ ಬಿಡುಗಡೆ ಮಾಡುವ ಚಿತ್ರಮಂದಿರವನ್ನು ಧ್ವಂಸಗೊಳಿಸುವುದಾಗಿಯೂ ಇದೇ ವೇಳೆ ಬೆದರಿಕೆ ಹಾಗಿದ್ದಾರೆ. ಚಿತ್ರಮಂದಿರ ಹಾಳಾದರೆ ಅದಕ್ಕೆ ಮಾಲೀಕರೇ ಕಾರಣರಾಗುತ್ತಾರೆಂದು ಪರಾಶರ್ ಅವರು ತಿಳಿಸಿದ್ದಾರೆ. 
SCROLL FOR NEXT