ಹೈದರಾಬಾದ್: ತ್ರಿವಳಿ ತಲಾಖ್ ಧಾರ್ಮಿಕ ವಿಷಯವಲ್ಲ, ಆದರೆ ಅದೊಂದು ಲಿಂಗ ಸಮಾನತೆಯ ವಿಷಯವಾಗಿದೆ ಎಂದು ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.
ಹೈದರಾಬಾದ್ ನಲ್ಲಿ ಮಾತನಾಡಿದ ಅವರು, ಈ ಪದ್ಧತಿಯ ವಿರುದ್ಧವಾಗಿ ಕೇಂದ್ರ ಸರ್ಕಾರ ಕಾಯಿದೆ ಪಾಸು ಮಾಡಿದೆ. ಆದರೆ ಉತ್ತರ ಪ್ರದೇಶ ಮತ್ತು ತೆಲಂಗಾಣಗಳಂತ ರಾಜ್ಯಗಳಲ್ಲಿ ಈ ಪದ್ದತಿ ಇನ್ನೂ ರೂಡಿಯಲ್ಲಿದೆ ಎಂದು ಹೇಳಿದ್ದಾರೆ.
ತ್ರಿವಳಿ ತಲಾಖ್ ಧಾರ್ಮಿಕ ವಿಷಯವಲ್ಲ, ಅದೊಂದು ನಂಬಿಕೆ, ಲಿಂಗ ಸಮಾನತೆಯ ವಿಷಯ, ಘನತೆ ಮತ್ತು ಸಮಾನತೆಗೆ ಸಂಬಂಧಿಸಿದ್ದು ಎಂದಿದ್ದಾರೆ.
ಬಾಂಗ್ಲಾ , ಪಾಕಿಸ್ತಾನ ಆಪ್ಘಾನಿಸ್ತಾನ ಸೇರಿದಂತೆ 22 ಇಸ್ಲಾಮಿಕ್ ರಾಷ್ಟ್ರಗಳಲ್ಲಿ ತ್ರಿವಳಿ ತಲಾಖ್ ಅನ್ನು ನಿಯಂತ್ರಿಸಲಾಗಿದೆ, ಆದರೆ ಭಾರತದಲ್ಲಿ ಜನರು ಇದನ್ನು ಕೋಮುವಾದಗೊಳಿಸುತ್ತಿದ್ದಾರೆ, ಸುಪ್ರೀಂ ಕೋರ್ಟ್ ಆದೇಶ ಹಾಗೂ ಲೋಕಸಭೆಯಲ್ಲಿ ಕಾಯಿದೆ ಪಾಸು ಮಾಡಿದ್ದರೂ ಕೆಲವು ರಾಜ್ಯಗಳಲ್ಲಿ ತ್ರಿವಳಿ ತಲಾಖ್ ಇನ್ನೂ ಜಾರಿಯಲ್ಲಿದೆ ಎಂದು ತಿಳಿಸಿದ್ದಾರೆ.