ದೇಶ

ಉತ್ತರ ಪ್ರದೇಶದಲ್ಲಿ ಚಂಡಮಾರುತಕ್ಕೆ 17 ಮಂದಿ ಬಲಿ, 9 ಗಾಯ

Nagaraja AB

ಉತ್ತರ ಪ್ರದೇಶ: ಉತ್ತರ ಪ್ರದೇಶದ  ವಿವಿಧ ಕಡೆಗಳಲ್ಲಿ ವಿನಾಶಕಾರಿ ಚಂಡಮಾರುತದ ಅಬ್ಬರಕ್ಕೆ ಸಿಲುಕಿ  17  ಮಂದಿ ಸಾವನ್ನಪ್ಪಿದ್ದು, 9 ಮಂದಿ ಗಾಯಗೊಂಡಿದ್ದಾರೆ ಎಂದು ಹಿರಿಯ ಅಧಿಕಾರಿಗಳು ಇಂದು ತಿಳಿಸಿದ್ದಾರೆ.

ಮುಂದಿನ ಎರಡು ದಿನಗಳ ಕಾಲ ಒಳನಾಡು ಭಾಗದಲ್ಲಿ  ಮಳೆ ಅಥವಾ  ಚಂಡಮಾರುತ  ಹೆಚ್ಚಾಗಲಿದೆ  ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

 ಈ ತಿಂಗಳು ದೇಶದ ವಿವಿಧ ರಾಜ್ಯಗಳಲ್ಲಿ ಉಂಟಾದ ಚಂಡಮಾರುತದ ಘಟನೆಗಳು ವಿನಾಶದ ಪ್ರವಾಹವನ್ನು ತಂದೊಡ್ಡಿದ್ದವು.  ಮೇ 2, 3 ರಂದು  ಐದು ರಾಜ್ಯಗಳಲ್ಲಿ  ಚಂಡಮಾರುತದ ಅಬ್ಬರಕ್ಕೆ ಸಿಲುಕಿ 134 ಮಂದಿ ಸಾವನ್ನಪ್ಪಿದ್ದು, ಸುಮಾರು 400 ಮಂದಿ ಗಾಯಗೊಂಡಿದ್ದರು.
 ಚಂಡಮಾರುತದಿಂದಾಗಿ ಉತ್ತರಪ್ರದೇಶದಲ್ಲಿಯೇ ಭಾರಿ ಹಾನಿಯಾಗಿದ್ದು, ಸುಮಾರು 80 ಮಂದಿ ಮೃತಪಟ್ಟಿದ್ದಾರೆ. ಅವರಲ್ಲಿ ಹೆಚ್ಚಿನವರು ಆಗ್ರಾ ಜಿಲ್ಲೆಗೆ ಸೇರಿದವರಾಗಿದ್ದಾರೆ.
SCROLL FOR NEXT