ಸಂಗ್ರಹ ಚಿತ್ರ 
ದೇಶ

ಪ್ರತಿಭಟನಾಕಾರರ ಮೇಲೆ ವಾಹನ ಹರಿಸಿಲ್ಲ, ದಾಳಿಯಿಂದ ತಪ್ಪಿಸಿಕೊಳ್ಳಲು ಚಾಲಕ ಯತ್ನಿಸಿದ್ದ; ಸಿಆರ್'ಪಿಎಫ್

ಪ್ರತಿಭಟನಾಕಾರರ ಮೇಲೆ ವಾಹನ ಹರಿಸಿಲ್ಲ, ದಾಳಿಯಿಂದ ತಪ್ಪಿಸಿಕೊಳ್ಳುವ ಸಲುವಾಗಿ ಚಾಲಕ ಯತ್ನ ನಡೆಸಿದ್ದ ಎಂದು ಸಿಆರ್'ಪಿಎಫ್ ಶನಿವಾರ ಹೇಳಿದೆ...

ಶ್ರೀನಗರ: ಪ್ರತಿಭಟನಾಕಾರರ ಮೇಲೆ ವಾಹನ ಹರಿಸಿಲ್ಲ, ದಾಳಿಯಿಂದ ತಪ್ಪಿಸಿಕೊಳ್ಳುವ ಸಲುವಾಗಿ ಚಾಲಕ ಯತ್ನ ನಡೆಸಿದ್ದ ಎಂದು ಸಿಆರ್'ಪಿಎಫ್ ಶನಿವಾರ ಹೇಳಿದೆ. 
ಘಟನೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಸಿಆರ್'ಪಿಎಫ್'ನ ಸಾರ್ವಜನಿಕ ಸಂಪರ್ಕ ಅಧಿಕಾರಿ ಸಂಜಯ್ ಶರ್ಮಾ ಅವರು, ಸೇನಾ ವಾಹನದಲ್ಲಿ 28 ಬೆಟಾಲಿಯನ್ ಸೆಕೆಂಡ್ ಇನ್ ಕಮಾಂಡ್ ಎಸ್.ಎಸ್. ಯಾದವ್ ಅವರು ಇದ್ದರು. ಪ್ರತಿಭಟನಾನಿರತರು ವಾಹನಕ್ಕೆ ಬಹಳ ಹತ್ತಿರ ಬಂದಿದ್ದರು. ಕೆಲವರು ವಾಹನದ ಮೇಲೆ ಹತ್ತಿದ್ದರು. ಇನ್ನು ಕೆಲ ಪ್ರತಿಭಟನಾಕಾರರು ವಾಹನದೊಳಗಿದ್ದ ಭದ್ರತಾ ಪಡೆಗಳನ್ನು ಹೊರಗೆಳೆದು ಹತ್ಯೆಗೈಯಲು ಯತ್ನ ನಡೆಸಿದ್ದರು. ಹೀಗಾಗಿ ದಾಳಿ ತಪ್ಪಿಸಲು ಚಾಲಕ ವಾಹನ ಚಲಾಯಿಸಿದ್ದ ಎಂದು ಹೇಳಿದ್ದಾರೆ. 
ದಾಳಿಯಿಂದ ತಪ್ಪಿಸಿಕೊಳ್ಳುವ ಸಲುವಾಗಿ ಚಾಲಕ ವಾಹನವನ್ನು ವೇಗವಾಗಿ ಚಲಾಯಿಸಿದ್ದರಿಂದಾಗಿ ಕೆಲವರು ವಾಹನದ ಚಕ್ರದಡಿ ಬಿದ್ದಿರಬಹುದು ಎಂದು ತಿಳಿಸಿದ್ದಾರೆ. 
ಶ್ರೀನಗರದಲ್ಲಿ ಶುಕ್ರವಾರ ಪ್ರಾರ್ಥನೆ ಮುಗಿಸಿ ಹೊರಬಂದ ಗುಂಪೊಂದು ಸಿಆರ್'ಪಿಎಫ್ ಯೋಧರ ಮೇಲೆ ಭಾರೀ ಪ್ರಮಾಣದಲ್ಲಿ ಕಲ್ಲು ತೂರಾಟ ನಡೆಸಿತ್ತು. ಏಕಾಏಕಿ ನಾರಾರು ಸಂಖ್ಯೆಯಲ್ಲಿದ್ದ ಜನ ಯೋಧರ ಮೇಲೆ ಕಲ್ಲು ಸೇರಿದಂತೆ ಕೈಗೆ ಸಿಕ್ಕ ವಸ್ತುಗಳನ್ನು ತೂರಿದ್ದಾರೆ. ಅಲ್ಲದೆ, ಕೆಲ ಯುವಕರು ಸೇನಾ ವಾಹನದ ಮೇಲೆ ಹತ್ತಿ, ವಾಹನದ ಒಳಗಿನಿಂದ ಯೋಧರ ಹೊರಗೆಳೆದುಅವರನ್ನು ಹತ್ಯೆಗೈಯುವ ಯತ್ನ ಮಾಡಿದ್ದರು. 
ಈ ವೇಳೆ ಜೀವ ರಕ್ಷಣೆಗಾಗಿ ಯೋಧರು, ವಾಹನವನ್ನು ವೇಗವಾಗಿ ಓಡಿಸಿದ್ದಾರೆ. ಈ ವೇಳೆ ಹಲವರು ಸೇನಾ ವಾಹನದ ಕೆಳಗೆ ಸಿಕ್ಕು ತೀವ್ರವಾಗಿ ಗಾಯಗೊಂಡಿದ್ದಾರೆ. ಈ ಘಟನೆಯಿಂದ ಮತ್ತಷ್ಟು ಆಕ್ರೋಶಗೊಂಡ ಗುಂಪು, ಕಂಡಕಂಡ ಸೇನಾ ವಾಹನಗಳ ಮೇಲೆ, ಪೊಲೀಸರ ಮೇಲೆ ದಾಳಿ ನಡೆಸಿದ್ದಾರೆ. ಪರಿಣಾಮ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣಗೊಂಡಿದೆ. ಭದ್ರತಾ ಪಡೆಗಳ ವಾಹನಗಳ ಕೆಳಗೆ ಸಿಕ್ಕು ಮೂವರು ಗಂಭೀರವಾಗಿ ಗಾಯಗೊಂಡಿದ್ದು, ಮೂವರ ಪೈಕಿ ಇದೀಗ ಓರ್ವ ಯುವಕ ಸಾವನ್ನಪ್ಪಿದ್ದಾನೆ. ಈ ಹಿನ್ನಲೆಯಲ್ಲಿ ಕಾಶ್ಮೀರದಲ್ಲಿ ಪರಿಸ್ಥಿತಿ ಮತ್ತಷ್ಟು ಉದ್ವಿಗ್ನಗೊಂಡಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಷ್ಯಾ ಕರಾವಳಿಯಲ್ಲಿ ಡ್ರೋನ್ ದಾಳಿ: ಹೊತ್ತಿ ಉರಿದ ತೈಲ ಟ್ಯಾಂಕರ್‌, 23 ಭಾರತೀಯ ಸಿಬ್ಬಂದಿ ಪಾರು..!

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video

‘ದಯವಿಟ್ಟು ಮಲಗಬೇಡಿ, ನಮಗೆ ನೀವು ಬೇಕು’: ಸಾವಿನ ದವಡೆಯಲ್ಲಿದ್ದ ಸ್ಮಿತ್ ಮಚ್ಚರ್'ಗೆ ಧೈರ್ಯ ತುಂಬಿದ ದಂತ ವೈದ್ಯ, Flydubai ವಿಮಾನದಲ್ಲಿ ಆ 45 ನಿಮಿಷಗಳಲ್ಲಿ ನಡೆದಿದ್ದೇನು..?

‘ಮತ ಕಳ್ಳತನ’ದ ಆರೋಪದಲ್ಲಿ ಹುರುಳಿಲ್ಲ, ಸುಖಾಸುಮ್ಮನೆ ರಾಹುಲ್ ಗಾಂಧಿಯಿಂದ ಗೊಂದಲ ಸೃಷ್ಟಿ: ಹೆಚ್‌.ಡಿ. ಕುಮಾರಸ್ವಾಮಿ ಆರೋಪ

SIR ಗೊಂದಲ: ಅಕ್ರಮ ಬಯಲಾಗುವ ಭೀತಿಯಿಂದಲೇ ರಾಜಪಾಲರ ಬಳಿ ಓಡಿದ್ದಾರೆ: NDA ನಾಯಕರ ವಿರುದ್ಧ ಡಿಕೆ.ಶಿವಕುಮಾರ್ ವಾಗ್ದಾಳಿ