ಪ್ರಚಾರಕ್ಕಾಗಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ: ಕೃಷಿ ಸಚಿವ
ಪಾಟ್ನಾ: ಕೆಲವು ರೈತರು ಪ್ರಚಾರ ಪಡೆಯುವ ಉದ್ದೇಶದಿಂದಲೇ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಕೇಂದ್ರ ಕೃಷಿ ಸಚಿವ ರಾಧಾಮೋಹನ್ ಸಿಂಗ್ ವಿವಾದಾತ್ಮಕ ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿರುವ ರಾಧಾಮೋಹನ್ ಸಿಂಗ್, ದೇಶದಲ್ಲಿ ಕೋಟ್ಯಂತರ ಜನ ರೈತರು ಇದ್ದಾರೆ. ಆದರೆ ಕೆಲವರಷ್ಟೇ ಪ್ರತಿಭಟನೆ ಮಾಡುತ್ತಾರೆ. ಅಂತಹ ಪ್ರತಿಭಟನೆಗಳಿಗೆ ಪ್ರಸ್ತುತತೆಯೇ ಇರುವುದಿಲ್ಲ ಎಂದು ರಾಧಾಮೋಹನ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.
ಮಧ್ಯಪ್ರದೇಶದ ರೈತರು ತಮ್ಮ ಬೆಳೆಗೆ ಕಡಿಮೆ ಬೆಂಬಲ ಬೆಲೆ ನೀಡುತ್ತಿರುವುದರ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ವಿಷಯಕ್ಕೆ ರಾಧಾ ಮೋಹನ್ ಸಿಂಗ್ ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ. ಜೂ.01 ರಿಂದ ರೈತರು ಪ್ರತಿಭಟನೆ ನಡೆಸುತ್ತಿದ್ದು, ರಾಜಸ್ಥಾನ, ಹರ್ಯಾಣ, ಮಹಾರಾಷ್ಟ್ರಗಳಿಂದಲೂ ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ.
ಮಧ್ಯಪ್ರದೇಶದಲ್ಲಿರುವ ಬಿಜೆಪಿ ಸರ್ಕಾರ ರೈತರ ಪರವಾಗಿದ್ದು, ರೈತರ ಪರವಾದ ನಿರ್ಧಾರಗಳನ್ನೇ ತೆಗೆದುಕೊಳ್ಳುತ್ತಿದೆ ಎಂದು ರಾಧಾಮೋಹನ್ ಸಿಂಗ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics