ನವದೆಹಲಿ: ಶಿಸ್ತು, ರಕ್ಷಣೆ, ಬದ್ದತೆಗೆ ಹೆಸರಾಗಿರುವ ಆರ್ ಎಸ್ ಎಸ್ ಸಂಘಟನೆಯ ತತ್ವ ಸಿದ್ದಾಂತಗಳನ್ನು ವಿರೋಧಿಸಲು ಯಾರೋಬ್ಬರಿಗೂ ಯಾವುದೇ ಕಾರಣವಿಲ್ಲ ಎಂದು ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಹೇಳಿದ್ದಾರೆ.
ನಾನಾಜಿ ಸ್ಮಾರಕ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಆರ್ ಎಸ್ ಎಸ್ ಸಭೆಯಲ್ಲಿ ಪಾಲ್ಗೊಂಡ ವಿಷಯ ಸಂಬಂಧ ಪ್ರತಿಕ್ರಿಯಿಸಿದ್ದರು.
ಸ್ವಯಂ ಶಿಸ್ತು, ಸ್ವಯಂ ರಕ್ಷಣೆ, ಆತ್ಮಾವಲಂಬನೆ ಮತ್ತು ಸಾಮಾಜಿಕ ಸುಧಾರಣೆ ಮುಂತಾದ ತತ್ವ ಸಿದ್ಧಾಂತಗಳನ್ನಿಟ್ಟುಕೊಂಡಿರುವ ಸಂಘ ಪರಿವಾರವನ್ನು ವಿರೋಧಿಯಲು ಯಾವುದೇ ಕಾರಣವಿಲ್ಲ ಎಂದು ಅವರು ಹೇಳಿದ್ದಾರೆ, ಭಾರತೀಯರ ತತ್ವ ಆದರ್ಶ, ಸಿದ್ಧಾಂತ ಗಳ ರಕ್ಷಣೆ ಅಭಿವೃದ್ಧಿಯನ್ನು ಆರ್ ಎಸ್ ಎಸ್ ಗುರಿಯಾಗಿಸಿಕೊಂಡಿದೆ. ವಿಶ್ವವೇ ಒಂದು ಕುಟುಂಬ ಅಂದರೆ ವಸುದೈವ ಕುಟುಂಬಕಂ ಎಂಬುದರ ಮೇಲೆ ನಂಬಿಕೆಯಿಟ್ಟಿದೆ ಎಂದು ಹೇಳಿದ್ದಾರೆ.
1930 ರಲ್ಲಿ ಮಹಾತ್ಮ ಗಾಂಧಿ ಕೂಡ ಆರ್ ಎಸ್ ಎಸ್ ಕ್ಯಾಂಪ್ ಗೆ ಭೇಟಿ ನೀಡಿದ್ದರು ಎಂದು ತಿಳಿಸಿದ್ದಾರೆ.