ದೇಶ

ರೈತರ ಪ್ರತಿಭಟನೆ ಬಗ್ಗೆ ಕೃಷಿ ಸಚಿವರ ಹೇಳಿಕೆಗೆ ತೀವ್ರ ಟೀಕೆ

Nagaraja AB

ನವದೆಹಲಿ: ಬೆಳೆಗಳಿಗೆ ಉತ್ತಮ ಬೆಲೆ ಹಾಗೂ ಸಾಲ ಮನ್ನಾಕ್ಕಾಗಿ ಆಗ್ರಹಿಸಿ  ದೇಶದ ವಿವಿಧ ರಾಜ್ಯಗಳಲ್ಲಿ  ರೈತರು ಕಳೆದ 10 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.  ಉತ್ಪನ್ನಗಳನ್ನು ನಗರ ಪ್ರದೇಶಗಳಿಗೆ ಕಳುಹಿಸದೆ ಹಾಲು- ತರಕಾರಿಯನ್ನು ರಸ್ತೆಯಲ್ಲಿಯೇ ಸುರಿದು ಪ್ರತಿಭಟನೆ ನಡೆಸುತ್ತಿದ್ದಾರೆ.

ರೈತರ ಪ್ರತಿಭಟನೆ ಕುರಿತು ಕೃಷಿ ಸಚಿವ ರಾಧಾಮೋಹನ್ ಸಿಂಗ್ ನಿನ್ನೆ ನೀಡಿದ ಹೇಳಿಕೆ ವ್ಯಾಪಕ ಟೀಕೆಗೆ ಗುರಿಯಾಗಿದೆ. ಪ್ರತಿಭಟನೆಗಳು ಮಾಧ್ಯಮಗಳ   ಗಮನ ಸೆಳೆಯಲು ಒಂದು ವ್ಯಾಯಾಮ ಎಂದು ಸಿಂಗ್  ನಿನ್ನೆ ನುಡಿದಿದ್ದರು.

 ಸಚಿವರ ಈ ಹೇಳಿಕೆಗೆ  ಕಾಂಗ್ರೆಸ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ. ಇದೊಂದು ಸೂಕ್ಷ್ಮವಲ್ಲದ ಟೀಕೆ ಎಂದು ಕಾಂಗ್ರೆಸ್ ಕಿಡಿಕಾರಿದೆ.  ರಾಧಾಮೋಹನ್ ಸಿಂಗ್ ಮಾತ್ರವಲ್ಲ ಅನೇಕ ಹಿರಿಯ ಬಿಜೆಪಿ ನಾಯಕರು ಇದೇ ರೀತಿಯ ಹೇಳಿಕೆ ನೀಡಿದ್ದಾರೆ. ರೈತರ ಪ್ರತಿಭಟನೆಯನ್ನು  ಅರ್ಥಹೀನ ಎಂದು ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಕಟ್ಟರ್ ಹೇಳಿದ್ದಾರೆ.

ದೇಶದಲ್ಲಿ 12ರಿಂದ 14 ಕೋಟಿ ರೈತರಿದ್ದಾರೆ.  ಅವರಲ್ಲಿ ಕೆಲ ಸಂಘಟನೆಗಳು 1 ಸಾವಿರ,   500, 2,000, 40,000, 50,000 ರೈತರನ್ನು ಹೊಂದಿರುವ ಸಂಸ್ಥೆಗಳಿರುತ್ತವೆ. ಮತ್ತು ಮಾಧ್ಯಮದಲ್ಲಿ ಕಾಣಿಸಿಕೊಳ್ಳಲು ಕೆಲವು ಅಸಾಮಾನ್ಯ ಕಾರ್ಯಗಳು ಬೇಕಾಗುತ್ತದೆ. ಇದು ನೈಸರ್ಗಿಕವಾಗಿದೆ ಎಂದು ರಾಧಾಮೋಹನ್ ಸಿಂಗ್  ಮಾಧ್ಯಮ ಸಂವಾದದಲ್ಲಿ ಹೇಳಿಕೆ ನೀಡಿದ್ದರು.

ಬಿಜೆಪಿ ವಿರೋಧಪಕ್ಷದಲ್ಲಿದ್ದಾಗ ರೈತರಿಗೆ ಚಂದ್ರನ ಆಸೆ ತೋರಿಸಿದ್ದರು. ಈಗ ಅಧಿಕಾರಕ್ಕೆ ಬಂದ ಮೇಲೆ ಒಂದು ಸಾರಿ ರೈತರನ್ನು ಬಳಸಿಕೊಂಡು ಮತ್ತೆ ಬಿಸಾಕಿದೆ ಎಂದು ಕಾಂಗ್ರೆಸ್ ಮುಖಂಡ ಆರ್ ಪಿಎನ್ ಸಿಂಗ್ ಆರೋಪಿಸಿದ್ದಾರೆ.



SCROLL FOR NEXT