ದೇಶ

ಕೇಶವ್ ಮೌರ್ಯರನ್ನು ಸಿಎಂ ಆಗಿ ನೋಡಲು ಜನ ಬಿಜೆಪಿಗೆ ಮತ ಹಾಕಿದ್ದು, ಯೋಗಿಯನಲ್ಲ: ರಾಜ್‏ಭರ್

Vishwanath S
ಲಖನೌ: ಕಳೆದ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದ ಮತದಾರರು ಕೇಶವ್ ಮೌರ್ಯರನ್ನು ಮುಖ್ಯಮಂತ್ರಿಯಾಗಿ ನೋಡಲು ಬಿಜೆಪಿಗೆ ಮತ ನೀಡಿದರೇ ಹೊರತು ಯೋಗಿ ಆದಿತ್ಯನಾಥ ಅವರನ್ನಲ್ಲ ಎಂದು ಸಚಿವ ಓಂ ಪ್ರಕಾಶ್ ರಾಜ್‏ಭರ್ ಹೇಳಿದ್ದಾರೆ. 
ಒಬಿಸಿ ಸಮುದಾಯಕ್ಕೆ ಸೇರಿದ ಕೇಶವ್ ಪ್ರಸಾದ್ ಮೌರ್ಯ ಅವರ ನೇತೃತ್ವದಲ್ಲಿ ಬಿಜೆಪಿ ವಿಧಾನಸಭೆ ಚುನಾವಣೆಯನ್ನು ಎದುರಿಸಿತ್ತು. ಆದರೆ ನಂತರ ಯೋಗಿ ಆದಿತ್ಯನಾಥ ಅವರನ್ನು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಲಾಯಿತು. ಕೇಶವ್ ಮೌರ್ಯ ಅವರು ಸಿಎಂ ಆಗುತ್ತಾರೆ ಎಂದು ಹಿಂದುಳಿದ ಸಮುದಾಯ ಮತದಾರರು ಬಿಜೆಪಿಯನ್ನು ಬೆಂಬಲಿಸಿತ್ತು. ಆದರೆ ಅವರ ಆಕ್ರೋಶ ಇತ್ತೀಚೆಗೆ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಕಾರಣವಾಗಿದೆ ಎಂದು ಹೇಳಿದ್ದಾರೆ. 
ಉಪ ಚುನಾವಣೆ ಮತ್ತು ಸೋಲಿಗೆ ಯೋಗಿ ಆದಿತ್ಯನಾಥ ಅವರೇ ನೇರ ಕಾರಣ. ಬಿಜೆಪಿ ಇಗಲಾದರೂ ಸೋಲಿನ ಕುರಿತು ಮನನ ಮಾಡಿಕೊಳ್ಳಬೇಕಿದೆ ಎಂದು ಹೇಳಿದ್ದಾರೆ. 
ಉತ್ತರ ಪ್ರದೇಶದ ಕೈರಾನ್ ಮತ್ತು ನೂರ್ಪುರ್ ವಿಧಾನಸಭೆ ಉಪಚುನಾವಣೆಯಲ್ಲಿ ಬಿಜೆಪಿ ಸೋಲು ಕಂಡಿತ್ತು.
SCROLL FOR NEXT