ಭಾರತೀಯ ಸೇನೆ 
ದೇಶ

ಪಾಕಿಸ್ತಾನ ತಪ್ಪು ತಿದ್ದುಕೊಳ್ಳದಿದ್ದರೆ, ರಂಜಾನ್ ಲೆಕ್ಕಿಸದೇ ದಾಳಿ ನಡೆಸುತ್ತೇವೆ: ಭಾರತ

ಪದೇ ಪದೇ ಗಡಿಯಲ್ಲಿ ಪುಂಡಾಟ ನಡೆಸುತ್ತಿರುವ ಪಾಕಿಸ್ತಾನದ ವಿರುದ್ಧ ಭಾರತ ಗುಡುಗಿದ್ದು, ಪಾಕ್ ತನ್ನ ನಡೆಯನ್ನು ತಿದ್ದುಕೊಳ್ಳದೇ ಇದ್ದರೆ ರಂಜಾನ್ ನ್ನೂ ಲೆಕ್ಕಿಸದೇ ಕದನ ವಿರಾಮ ರದ್ದುಗೊಳಿಸುತ್ತೇವೆ ಎಂದು

ಯವತ್ಮಾಲ್: ಪದೇ ಪದೇ ಗಡಿಯಲ್ಲಿ ಪುಂಡಾಟ ನಡೆಸುತ್ತಿರುವ ಪಾಕಿಸ್ತಾನದ ವಿರುದ್ಧ ಭಾರತ ಗುಡುಗಿದ್ದು, ಪಾಕ್ ತನ್ನ ನಡೆಯನ್ನು ತಿದ್ದುಕೊಳ್ಳದೇ ಇದ್ದರೆ ರಂಜಾನ್ ನ್ನೂ ಲೆಕ್ಕಿಸದೇ ಕದನ ವಿರಾಮ ರದ್ದುಗೊಳಿಸುತ್ತೇವೆ ಎಂದು ಹೇಳಿದೆ. 
ಈ ಬಗ್ಗೆ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಹಂಸ್ ರಾಜ್ ಅಹಿರ್ ಮಾತನಾಡಿದ್ದು, ಪಾಕಿಸ್ತಾನ ಗಡಿಯಾಚೆಗಿನ ಭಯೋತ್ಪಾದನೆಯನ್ನು ಮುಂದುವರೆಸಿದರೆ ರಂಜಾನ್ ನ್ನೂ ಲೆಕ್ಕಿಸದೇ ಸೇನಾ ಕಾರ್ಯಾಚರಣೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.  ಮೊದಲು ದಾಳಿ ಮಾಡದೇ ಇರುವ ನಿಯಮಕ್ಕೆ ಭಾರತ ಎಂದಿಗೂ ಬದ್ಧವಾಗಿದೆ. ಆದರೆ ಪಾಕಿಸ್ತಾನ ತನ್ನ ನಡೆಯನ್ನು ತಿದ್ದುಕೊಳ್ಳದಿದ್ದರೆ ರಂಜಾನ್ ನ್ನೂ ಲೆಕ್ಕಿಸದೇ ಸೇನಾ ಕಾರ್ಯಾಚರಣೆ ಮುಂದುವರೆಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. 
ರಂಜಾನ್ ಹಿನ್ನೆಲೆಯಲ್ಲಿ ಜಮ್ಮು-ಕಾಶ್ಮೀರದಲ್ಲಿ ಸೇನಾ ಕಾರ್ಯಾಚರಣೆಗೆ ವಿರಾಮ ನೀಡಲಾಗಿದೆ. ಆದರೆ ಸೇನೆ ಮೇಲೆ ದಾಳಿ ನಡೆಸಿದರೆ ಅದಕ್ಕೆ ಪ್ರತ್ಯುತ್ತರ ನೀಡುವ ಅಧಿಕಾರವನ್ನೂ ಸೇನೆಗೆ ನೀಡಲಾಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರದೋಶ್ ಮಾಫಿ ಸಾಕ್ಷಿ ಅರ್ಜಿ ಅಂಗೀಕರಿಸಿದ ಕೋರ್ಟ್; 'ದಾಸ'ನಿಗೆ ಬಿಗ್ ಶಾಕ್!

ನಾಳೆ ಜಗತ್ತಿನಾದ್ಯಂತ ಯಶ್ ನಟನೆಯ 'Toxic' ಚಿತ್ರ ಬಿಡುಗಡೆ; ಇಂದು ದಿಢೀರ್ ಕೋರ್ಟ್ ಮೆಟ್ಟಿಲೇರಿದ ನಿರ್ಮಾಪಕ!

ಬೆಂಗಳೂರು: ಸಿಗ್ನಲ್‌ನಲ್ಲಿ ನಿಂತಿದ್ದ ಬೈಕ್‌ಗೆ ವೇಗವಾಗಿ ಬಂದ ಕಾರು ಡಿಕ್ಕಿ, ಹೇರ್ ಸ್ಟೈಲಿಸ್ಟ್ ಸಾವು; Video

BPSC ಪರೀಕ್ಷೆ ವಿವಾದ: ಬಿಹಾರ ಸಿಎಂ ನಿವಾಸದ ಬಳಿ ಬ್ಯಾರಿಕೇಡ್ ಮುರಿದ ವಿದ್ಯಾರ್ಥಿಗಳು, ಜಲಫಿರಂಗಿಗೆ ಜಗ್ಗದೆ ರೇನ್ ಡ್ಯಾನ್ಸ್ ಮಾಡಿ ಪ್ರತಿಭಟನೆ!

'ಕಾಂಗ್ರೆಸ್ ಸರ್ಕಾರದ ವೈಫಲ್ಯ' ವಿರೋಧಿಸಿ ಸೆಪ್ಟೆಂಬರ್ 1 ರಿಂದ 10ರವರೆಗೆ ರಾಯಚೂರಿನಿಂದ ಬಳ್ಳಾರಿಗೆ BJP-JDS ಪಾದಯಾತ್ರೆ!