ದೇಶ

ಸಂವಿಧಾನ, ಮಾನವ ಹಕ್ಕುಗಳು ಅಪಾಯದಲ್ಲಿದೆ, : ಗೋವಾ ಆರ್ಚ್ ಬಿಷಪ್

Srinivas Rao BV
ಪಣಜಿ: 2019 ರ ಲೋಕಸಭಾ ಚುನಾವಣೆ ನಡೆಯುತ್ತಿದ್ದು ದೇಶಕ್ಕಾಗಿ ಪ್ರಾರ್ಥನೆ ಸಲ್ಲಿಸಲು ಕರೆ ನೀಡಿ ದೆಹಲಿ ಆರ್ಚ್ ಬಿಷಪ್ ವಿವಾದಕ್ಕೀಡಾಗಿದ್ದ ಬೆನ್ನಲ್ಲೆ ಗೋವಾ ಆರ್ಚ್ ಬಿಷಪ್ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. 
ಮಾನವಹಕ್ಕುಗಳು, ದೇಶದ ಸಂವಿಧಾನ ಅಪಾಯದಲ್ಲಿದೆ ಎಂದು ಗೋವಾ ಆರ್ಚ್ ಬಿಷಪ್ ಫಿಲಿಪ್ ನೆರಿ ಫೆರಾವೊ, ಯಾರು ಏನನ್ನು ತಿನ್ನಬೇಕು, ಹೇಗೆ ಉಡುಗೆಗಳನ್ನು ತೊಡಬೇಕು, ಹೇಗೆ ಪೂಜಿಸಬೇಕು ಎಂಬುದನ್ನು ನಿರ್ಧರಿಸುವ ಏಕ ಸಂಸ್ಕೃತಿಯ ಟ್ರೆಂಡ್ ದೇಶದಲ್ಲಿ ಪ್ರಾರಂಭವಾಗಿದ್ದು, ದೇಶದ ಸಂವಿಧಾನ ಅಪಾಯಕ್ಕೆ ಸಿಲುಕಿದೆ ಎಂದು ಹೇಳಿದ್ದಾರೆ. 
ಗೋವಾ ಕ್ಯಾಥೋಲಿಕ್ ಗಳಿಗೆ ಬರೆದಿರುವ ಪತ್ರದಲ್ಲಿ ಆರ್ಚ್ ಬಿಷಪ್ ಸಾಮಾಜಿಕ ಚಳುವಳಿಯ ಬಗ್ಗೆ ಮಾತನಾಡಿದ್ದು, ಗೋವಾದಲ್ಲಿರುವ ಕ್ಯಾಥೋಲಿಕ್ ಗಳು ಸಾಮಾಜಿಕ ಹಾಗೂ ರಾಜಕೀಯ ಚಳುವಳಿಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕೆಂದು ಕರೆ ನೀಡಿದ್ದಾರೆ. ಚುನಾವಣೆಯ ಸಂದರ್ಭಗಳಲ್ಲಿ ಅಭ್ಯರ್ಥಿಗಳು ಸುಳ್ಳು ಭರವಸೆ ನೀಡುವ ಮೂಲಕ ಜನರನ್ನು ಗೊಂದಲಕ್ಕೀಡುಮಾಡುತ್ತಾರೆ. ಇಂದು ನಮ್ಮ ಸಂವಿಧಾನ ಅಪಾಯಕ್ಕೆ ಸಿಲುಕಿದೆ ಹಾಗಾಗಿರುವುದಕ್ಕೇ ಬಹುತೇಕ ಜನರು ಅಭದ್ರತೆಯಿಂದ ಬದುಕುವ ಸ್ಥಿತಿ ನಿರ್ಮಾಣವಾಗಿದೆ ಎಂದು ಫೆರಾವೊ ತಿಳಿಸಿದ್ದಾರೆ. 
ಈ ದೃಷ್ಟಿಯಿಂದ ಪ್ರಮುಖವಾಗಿ ಲೋಕಸಭಾ ಚುನಾವಣೆಯ ದೃಷ್ಟಿಯಿಂದ ನಾವು ಸಂವಿಧಾನವನ್ನು ಉಳಿಸುವುದಕ್ಕೆ ಕೆಲಸ ಮಾಡಬೇಕಾಗಿದೆ ಎಂದು ನೆರಿ ಫೆರಾವೊ ಕರೆ ನೀಡಿದ್ದಾರೆ. 
SCROLL FOR NEXT