ದೇಶ

ಐಎನ್ ಎಕ್ಸ್ ಮೀಡಿಯಾ ಕೇಸ್: ಸಿಬಿಐ ಮುಂದೆ ವಿಚಾರಣೆಗೆ ಹಾಜರಾದ ಪಿ.ಚಿದಂಬರಂ

Sumana Upadhyaya

ನವದೆಹಲಿ: ತಮ್ಮ ಅಧಿಕಾರಾವಧಿಯಲ್ಲಿ ಐಎನ್ ಎಕ್ಸ್ ಮೀಡಿಯಾಗೆ ವಿದೇಶಿ ಹೂಡಿಕೆ ಅನುಮತಿ ನೀಡಿರುವ ಕುರಿತು ವಿಚಾರಣೆಗೆ ಮಾಜಿ ಹಣಕಾಸು ಸಚಿವ ಪಿ ಚಿದಂಬರಂ ಸಿಬಿಐ ಕೇಂದ್ರ ಕಚೇರಿ ಎದುರು ಹಾಜರಾಗಿದ್ದಾರೆ.

ಐಎನ್ ಎಕ್ಸ್ ಮೀಡಿಯಾದ ವಿದೇಶಿ ಹೂಡಿಕೆಗೆ ಅನುಮತಿ ನೀಡಿದ ವಿಚಾರದಲ್ಲಿ ಅಕ್ರಮ ನಡೆದಿದೆ ಎಂದು ಸಿಬಿಐ ಆರೋಪಿಸಿದೆ.ಐಎನ್ ಎಕ್ಸ್ ಮೀಡಿಯಾದ ಪ್ರವರ್ತಕರು ಮಾಜಿ ಮಾಧ್ಯಮ ಪ್ರಚಾರಕ ಪೀಟಕ್ ಮುಖರ್ಜಿ ಹಾಗೂ ಇಂದ್ರಾಣಿ ಮುಖರ್ಜಿ ಆಗಿದ್ದಾರೆ.
ಸುಮಾರು 305 ಕೋಟಿ ರೂಪಾಯಿಗಳ ವಿದೇಶಿ ಹೂಡಿಕೆ ಪ್ರಚಾರ ಮಂಡಳಿಗೆ ಅನುಮತಿ ನೀಡಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಚಿದಂಬರಂ ಪಾತ್ರವಿದೆ ಎಂದು ಸಿಬಿಐ ವಿಚಾರಣೆ ನಡೆಸುತ್ತಿದೆ.

ಐಎನ್ ಎಕ್ಸ್ ಮೀಡಿಯಾಗೆ ವಿದೇಶಿ ಹೂಡಿಕೆ ಅನುಮತಿ ನೀಡಿಕೆಯಲ್ಲಿ ಅಕ್ರಮ ನಡೆದಿದೆ ಮತ್ತು ಯುಪಿಎ-1 ಸರ್ಕಾರದ ಅವಧಿಯಲ್ಲಿ ಹಣಕಾಸು ಸಚಿವರಾಗಿದ್ದ ಚಿದಂಬರಂ ಇದರಲ್ಲಿ ಭಾಗಿಯಾಗಿದ್ದರು ಎಂದು ಕಳೆದ ವರ್ಷ ಮೇ 15ರಂದು ಸಿಬಿಐ ಎಫ್ಐಆರ್ ದಾಖಲಿಸಿತ್ತು.
ಮೀಡಿಯಾಗೆ ಅನುಮತಿ ನೀಡಿ ಸುಮಾರು 10 ಲಕ್ಷ ರೂಪಾಯಿ ಲಂಚ ಪಡೆದಿದ್ದರು ಎಂದು ಚಿದಂಬರಂ ಪುತ್ರ ಕಾರ್ತಿ ಚಿದಂಬರಂ ಅವರು ಕೂಡ ಈ ಕೇಸಿಗೆ ಸಂಬಂಧಪಟ್ಟಂತೆ ಬಂಧಿಯಾಗಿದ್ದರು.

ಐಎನ್ ಎಕ್ಸ್ ಮೀಡಿಯಾದ ಅಂದಿನ ನಿರ್ದೇಶಕ ಇಂದ್ರಾಣಿ ಮುಖರ್ಜಿ, ಐಎನ್ ಎಕ್ಸ್ ನ್ಯೂಸ್ ನಿರ್ದೇಶಕ ಪೀಟರ್ ಮುಖರ್ಜಿ ಪ್ರಕರಣದ ಇತರ ಆರೋಪಿಗಳಾಗಿದ್ದಾರೆ. ಇವರಿಬ್ಬರೂ ತಮ್ಮ ಪುತ್ರಿ ಶೀನಾ ಬೋರಾ ಹತ್ಯೆಗೆ ಸಂಬಂಧಪಟ್ಟಂತೆ ಜೈಲು ಸೇರಿದ್ದಾರೆ.

SCROLL FOR NEXT