ದೇಶ

ಪ್ರದ್ಯುಮನ್ ಕೊಲೆ ಪ್ರಕರಣ: ಬಾಲಾಪರಾಧಿ ಜಾಮೀನು ಅರ್ಜಿ ವಜಾ

Nagaraja AB

ಪಂಜಾಬ್:  ಗುರುಗ್ರಾಮದ  ರಾಯನ್ ಇಂಟರ್ ನ್ಯಾಷನಲ್  ಶಾಲೆಯ ಏಳು ವರ್ಷದ ಬಾಲಕನ  ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ  ಬಾಲಕನಿಗೆ  ಜಾಮೀನು ನೀಡಲು  ಪಂಜಾಬ್  ಹಾಗೂ ಹರಿಯಾಣ ಹೈಕೋರ್ಟ್ ತಿರಸ್ಕರಿಸಿದೆ.

ಪ್ರದ್ಯುಮನ್ ಕೊಲೆ ಪ್ರಕರಣದಲ್ಲಿ ಬಾಲಾಪರಾಧಿ ವಯಸ್ಕರಂತೆ ಕೊಲೆ ಮಾಡಿದ್ದಾನೆ ಎಂದು ಗುರುಗ್ರಾಮನಲ್ಲಿನ   ಮಕ್ಕಳ ಸೆಷನ್ಸ್ ನ್ಯಾಯಾಲಯ ಮೇ 21 ರಂದು  ತೀರ್ಪು ನೀಡಿತ್ತು ಎಂದು  ಮೃತ ಬಾಲಕನ ಕುಟುಂಬದ ಪರ ವಾದಿಸುತ್ತಿರುವ ವಕೀಲ  ಸುಶೀಲ್ ತೆಕ್ರಿವಾಲ್ ತಿಳಿಸಿದ್ದಾರೆ.

ಮಕ್ಕಳ ಸೆಷನ್ಸ್ ನ್ಯಾಯಾಲಯ ನೀಡಿದ್ದ ತೀರ್ಪನ್ನು  ಬಾಲಾಪರಾಧಿ ನ್ಯಾಯಾಂಗ ಮಂಡಳಿ ಎತ್ತಿ ಹಿಡಿದಿದೆ.  ಆತನಿಗೆ ಕಠಿಣ ಶಿಕ್ಷೆಯಾಗುವುದನ್ನು ಸ್ವಾಗತಿಸುವುದಾಗಿ ಹೇಳಿದ್ದಾರೆ.

ರೆಯಾನ್ ಇಂಟರ್ ನ್ಯಾಷನಲ್  ಶಾಲೆಯ  ಎರಡನೇ ತರಗತಿ ವಿದ್ಯಾರ್ಥಿ ಪ್ರದ್ಯುಮನ್ ನನ್ನು 11 ನೇ ತರಗತಿ ವಿದ್ಯಾರ್ಥಿ ಕಳೆದ ವರ್ಷ  ಕೊಲೆ ಮಾಡಿದ್ದ ಆರೋಪದ ಮೇರೆಗೆ ಬಾಲಾಪರಾಧಿಯನ್ನು  ಸಿಬಿಐ ಕಳೆದ ವರ್ಷ ಬಂಧಿಸಿತ್ತು,

ಸೆ .8ರಂದು ಎಂದಿನಂತೆ ಶಾಲೆಗೆ ತೆರಳಿದ್ದ ಪ್ರದ್ಯುಮನ್ ಠಾಕೂರ್‌ ಮೃತದೇಹ ಶಾಲೆಯ ಶೌಚಾಲಯದಲ್ಲಿ ಕತ್ತು ಸೀಳಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.
SCROLL FOR NEXT