ಸುಪ್ರೀಂಕೋರ್ಟ್ 
ದೇಶ

ಕ್ಲಾಟ್ 2018 ಕೌನ್ಸಿಲಿಂಗ್ ಗೆ ತಡೆ ನೀಡಲು ಸುಪ್ರೀಂಕೋರ್ಟ್ ನಕಾರ

2018 ಸಾಮಾನ್ಯ ಕಾನೂನು ಪ್ರವೇಶ ಪರೀಕ್ಷೆಯ (CLAT) ಕೌನ್ಸಿಲಿಂಗ್ ಗೆ ತಡೆ ನೀಡಲು ಸುಪ್ರೀಂಕೋರ್ಟ್ ನಿರಾಕರಿಸಿದೆ.

ನವದೆಹಲಿ: 2018 ಸಾಮಾನ್ಯ ಕಾನೂನು ಪ್ರವೇಶ ಪರೀಕ್ಷೆಯ (CLAT) ಕೌನ್ಸಿಲಿಂಗ್ ಗೆ ತಡೆ ನೀಡಲು  ಸುಪ್ರೀಂಕೋರ್ಟ್ ನಿರಾಕರಿಸಿದೆ.

 ಈ ವಿಷಯವನ್ನು ಸೋಮವಾರ ಮತ್ತೆ ವಿಚಾರಣೆ ನಡೆಸುವುದಾಗಿ  ನ್ಯಾಯಾಧೀಶರಾದ ಆದರ್ಶ ಕುಮಾರ್ ಗೋಯೆಲ್ ಮತ್ತು ಅಶೋಕ್ ಭೂಷಣ್ ಅವರಿದ್ದ  ವಿಭಾಗೀಯ ಪೀಠ  ಹೇಳಿದೆ.

ಕಳೆದ ವಾರ  ಕ್ಲಾಟ್ 2018 ಪರೀಕ್ಷೆ ಫಲಿತಾಂಶ ಪ್ರಕಟಣೆಗೆ ತಡೆ ನೀಡಲು ಸುಪ್ರೀಂಕೋರ್ಟ್ ನಿರಾಕರಿಸಿದ ನಂತರ  ಸುಪ್ರೀಂಕೋರ್ಟ್ ನಲ್ಲಿ ಮತ್ತೆ ಈ ವಿಚಾರ ವಿಚಾರಣೆಗೆ ಬಂದಿದೆ.  19 ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳಲ್ಲಿ ಕಾನೂನು ವಿಷಯದಲ್ಲಿ  ಸ್ನಾತಕ ಮತ್ತು ಸ್ನಾತಕೋತ್ತರ  ಪದವಿ ಪ್ರವೇಶಕ್ಕಾಗಿ  ಪರೀಕ್ಷೆಯನ್ನು ನಡೆಸಲಾಗಿತ್ತು.

ಮೇ 13 ರಂದು ನಡೆದಿದ್ದ ಪರೀಕ್ಷೆಯನ್ನು  ಅಸಿಂಧುಗೊಳಿಸಿ  ಮರು ಪರೀಕ್ಷೆ ನಡೆಸುವಂತೆ ನಿರ್ದೇಶಿಸಬೇಕೆಂದು  ಕೋರಿ  ಪರೀಕ್ಷೆಗೆ ಹಾಜರಾಗಿದ್ದ  ಅಭ್ಯರ್ಥಿಗಳು ಸಲ್ಲಿಸಿದ್ದ  ಆರು ಅರ್ಜಿಗಳ  ವಿಚಾರಣೆ ಇದಾಗಿದೆ.

ಈ ವರ್ಷದ ಮೇ 31 ರಂದು ಕ್ಲಾಟ್ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿತ್ತು.ಕೊಚ್ಚಿಯ  ಮುಂದುವರೆದ  ಕಾನೂನು ಅಧ್ಯಯನ - ಎನ್ ಯುಎಎಲ್ ಎಸ್  ಈ ಪರೀಕ್ಷೆಯನ್ನು  ನಡೆಸಿತ್ತು.

ಆನ್ ಲೈನ್ ಪರೀಕ್ಷೆ ವೇಳೆಯಲ್ಲಿ ಅಭ್ಯರ್ಥಿಗಳು ಸಾಕಷ್ಟು ತಾಂತ್ರಿಕ ತೊಂದರೆ ಎದುರಿಸಿದ್ದರಿಂದ ಕಳೆದ ತಿಂಗಳು  ಸುಪ್ರೀಂಕೋರ್ಟ್ ಗೆ  ಅರ್ಜಿ ಸಲ್ಲಿಸಲಾಗಿತ್ತು.  ಪರೀಕ್ಷಾ ಕೇಂದ್ರಗಳಲ್ಲಿನ ಸಿಬ್ಬಂದಿಯಿಂದ ಸೂಕ್ತ ಮಾರ್ಗದರ್ಶನ , ಅಗತ್ಯ ಸೌಕರ್ಯ ಸಿಗದೆ ವಿದ್ಯಾರ್ಥಿಗಳು ತೀವ್ರ ತೊಂದರೆ ಎದುರಿಸುವಂತಾಗಿತ್ತು.

 ಪರೀಕ್ಷೆ ಸಂದರ್ಭದಲ್ಲಿ  200 ಪರೀಕ್ಷಾ ಕೇಂದ್ರಗಳಲ್ಲಿ  ವಿದ್ಯುತ್ ಪೂರೈಕೆ ಮತ್ತಿತರ ತೊಂದರೆಗೊಳಗಾಗಬೇಕಾಯಿತು ಎಂದು  ಪರೀಕ್ಷೆಗೆ ಹಾಜರಾಗಿದ್ದ ವಿವಿಧ ರಾಜ್ಯಗಳ ಅಭ್ಯರ್ಥಿಗಳು ಹೇಳಿದ್ದರು.
ಈ ವಿಷಯ ಸುಪ್ರೀಂಕೋರ್ಟ್ ಗಮನಕ್ಕೆ ಬಂದ ನಂತರ , ಅಭ್ಯರ್ಥಿಗಳ ಕುಂದುಕೊರತೆಗಳ್ನು ಪಟ್ಟಿಮಾಡುವಂತೆ ಎನ್ ಯುಎಎಲ್ ಎಸ್ ಗೆ ನ್ಯಾಯಾಲಯ ನಿರ್ದೇಶನ ನೀಡಿತ್ತು.ಆದರೆ, ಈಗ ಫಲಿತಾಂಶ ಹೊರಬಿದ್ದಿದೆ. ಎನ್ ಎಲ್ ಯುಎಸ್  ಕೌನ್ಸಿಲಿಂಗ್ ಹಾಗೂ ಸೀಟು ಹಂಚಿಕೆ  ಪ್ರಕ್ರಿಯೆಯನ್ನು ಆರಂಭಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ರಾಜ್ಯದಲ್ಲಿ ಶೇ. 90ರಷ್ಟು ಬೆಳೆ ಹಾನಿ: ಪರಿಸ್ಥಿತಿ ಗಂಭೀರ - DCM ಪರಮೇಶ್ವರ

'ನನ್ನ ವಿರುದ್ಧ 100 ಎಫ್‌ಐಆರ್‌ ದಾಖಲಿಸಿ ಹೆದರಲ್ಲ, ಪ್ರತಿಯೊಂದೂ ನನಗೆ ಪದಕ': ರಾಹುಲ್ ಗಾಂಧಿ

CM ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್; ಈಗ ಸಚಿವರ ವಿರುದ್ಧವೂ ಅದೇ ತಂತ್ರ: ಕುಮಾರಸ್ವಾಮಿ ಗಂಭೀರ ಆರೋಪ

ಕಾರ್ಮಿಕರ ಆರೋಗ್ಯ ತಪಾಸಣೆ ಹೆಸರಲ್ಲಿ 800 ಕೋಟಿ ರೂ. ಲೂಟಿ; ಸಂತೋಷ್ ಲಾಡ್ ರಾಜೀನಾಮೆಗೆ ಆರಗ ಜ್ಞಾನೇಂದ್ರ ಆಗ್ರಹ