ಮುಂಬೈ: 2019ರ ಲೋಕಸಭಾ ಚುನಾವಣೆಯಲ್ಲಿ ಶಿವಸೇನಾ ಸ್ವತಂತ್ರವಾಗಿ ಸ್ಪರ್ಧಿಸಲಿದ್ದು, ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಹೇಳಿಕೆ ನೀಡಿದೆ.
ಇತ್ತೀಚಿಗೆ ನಡೆದ ಪಲ್ಗರ್ ಉಪಚುನಾವಣೆಯ ಫಲಿತಾಂಶದಿಂದ ಚುನಾವಣಗೆ ಸ್ಪರ್ಧಿಸಲು ಯಾವುದೇ ಪೋಸ್ಟರ್ ಬಾಯ್ ( ಪ್ರಧಾನಮಂತ್ರಿ ನರೇಂದ್ರಮೋದಿ )ಅಗತ್ಯ ಇಲ್ಲ ಎಂಬ ಸಂದೇಶ ತಿಳಿದುಬಂದಿದೆ ಎಂದು ಶಿವಸೇನಾ ಮುಖವಾಣಿ ಸಾಮ್ನಾದಲ್ಲಿ ತಿಳಿಸಿದೆ.
ಬಿಜೆಪಿ ಇತ್ತೀಚಿಗೆ ಹಮ್ಮಿಕೊಂಡಿರುವ ಸಮರ್ಥನೆಗಾಗಿ ಸಂಪರ್ಕ ಅಭಿಯಾನವನ್ನು ಕೂಡಾ ಪರೋಕ್ಷವಾಗಿ ಶಿವಸೇನಾ ಟೀಕಿಸಿದೆ. ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಈ ಅಭಿಯಾನವನ್ನು ಪ್ರೋತ್ಸಾಹಿಸುತ್ತಿದ್ದು, ಇತ್ತೀಚಿಗೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಸೋತಿದ್ದರೂ ಏಕೆ ಅಭಿಯಾನವನ್ನು ನಡೆಸುತ್ತಿದೆ ಎಂದು ಹೇಳಿದೆ.
ಪಲ್ಗರ್ ಉಪಚುನಾವಣೆಯಲ್ಲಿ ಪಕ್ಷದ ಸಾಮರ್ಥ ಏನು ಎಂಬುದು ಗೊತ್ತಾಗಿದೆ. ಬಿಜೆಪಿ ಅಧಿಕಾರದಲ್ಲಿದ್ದರೂ ಜನರ ಜೊತೆಗಿನ ಸಂಪರ್ಕವನ್ನು ಕಡಿತಗೊಳಿಸಿಕೊಂಡಿದೆ. ಶಿವಸೇನಾ ಜನಸಂಪರ್ಕ ಹಾಗೂ ಜನಾಧಾರ್ ಮೂಲಕ ಜನರ ನಡುವಿದ್ದು, ಯಾರ ಸಹಾಯವಿಲ್ಲದೆ 2019ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಸಂಪಾದಕೀಯದಲ್ಲಿ ಉಲ್ಲೇಖಿಸಲಾಗಿದೆ.
ಉಪಚುನಾವಣೆಯಲ್ಲಿ ಬಿಜೆಪಿಯ ಕಾರ್ಯನೀತಿಯನ್ನು ಸಹ ಶಿವಸೇನಾ ಪ್ರಶ್ನಿಸಿದೆ. ಉಪಚುನಾವಣೆ ಸಂದರ್ಭದಲ್ಲಿ ದಿವಂಗತ ಚಿಂತಾಮನ್ ವಾನಾಗ ಕುಟುಂಬದ ವಿರೋಧದ ನಡುವೆಯೂ ವಾನಾಗ ಪೋಟೋ ಬದಲಿಗೆ ಪ್ರಧಾನಿ ನರೇಂದ್ರಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಪೋಟೋ ಹಾಕಲಾಗಿತ್ತು.
ಮತಗಳಿಕೆ ಹಿನ್ನೆಲೆಯಲ್ಲಿ ಪೋಸ್ಟರ್ ಗಳಲ್ಲಿ ಪೋಟೋಗಳನ್ನು ನಾವು ಬದಲಾವಣೆ ಮಾಡಲಿಲ್ಲ . ಆದರೆ, ಬಿಜೆಪಿ ವಾನಾಗ ಹೆಸರ ಬದಲು ಪ್ರಧಾನಿ ನರೇಂದ್ರಮೋದಿ ಹೆಸರಿನಲ್ಲಿ ಪ್ರಚಾರ ನಡೆಸಿತ್ತು ಎಂದು ಹೇಳಲಾಗಿದೆ.
ಬಿಹಾರದಲ್ಲಿಯೂ ಬೃಹತ್ ಸಂಪರ್ಕ ಹಗರಣ ನಡೆಯುತ್ತಿದೆ. ನಿತಿಶ್ ಕುಮಾರ್ ಹಾಗೂ ಬಿಜೆಪಿ ಮೈತ್ರಿಯ ಎರಡು, ಮೂರನೇ ಹನಿಮೂನ್ ಕೊನೆಗೆ ಬಂದು ನಿಂತಿದೆ. ಬಿಜೆಪಿ ತನ್ನ ಮೈತ್ರಿ ಪಕ್ಷಗಳನ್ನು ಸರಿಯಾಗಿ ನಡೆಸಿಕೊಳ್ಳುವುದಿಲ್ಲ ಎಂದು ಕೆ. ಸಿ. ತ್ಯಾಗಿ ಹೇಳಿಕೆ ನೀಡಿದ್ದಾರೆ ಎಂದು ಶಿವಸೇನಾ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ನಿತಿಶ್ ಕುಮಾರ್ ಜನಾಧಾರ್ ಬಿಹಾರದಲ್ಲಿ ಈಗ ಅಂತ್ಯಗೊಂಡಿದೆ. ಲಾಲು ಪ್ರಸಾದ್ ಯಾದವ್ ಅವರನ್ನು ಜೈಲಿಗೆ ಕಳುಹಿಸಿದ ನಂತರ ಯಾರು ಪ್ರತಿಸ್ಪರ್ಧಿಗಳಿಲ್ಲ ಎಂಬ ತಪ್ಪು ಕಲ್ಪನೆಯಲ್ಲಿದ್ದಾರೆ.
2019ರ ಚುನಾವಣೆಯಲ್ಲಿಯೂ ನರೇಂದ್ರಮೋದಿ ಅವರನ್ನೇ ಪ್ರಧಾನಿಯಾಗಿ ಮುಂದುವರೆಸಲು ಬಿಜೆಪಿ ಬಯಸಿದೆ. ಹಾಗಾದರೆ, ಜೆಡಿಯು ಹೇಗೆ ಸಂತೋಷದಿಂದ ಇರಲು ಸಾಧ್ಯ. ಆದ್ದರಿಂದ ಬಿಜೆಪಿಯೊಂದಿಗೆ ಮೈತ್ರಿ ಎಂದರೆ ಸ್ವಾತಂತ್ರದ ಹತ್ಯೆಯಾಗಿದೆ. ಇದನ್ನು ಜನರು ಕೂಡಾ ಅರಿತಿದ್ದಾರೆ ಎಂದು ಸಾಮ್ನಾ ಸಂಪಾದಕೀಯದಲ್ಲಿ ವಿಶ್ಲೇಷಣೆ ಮಾಡಲಾಗಿದೆ.