ನವದೆಹಲಿ: ನವ ವಿವಾಹಿತ ಅನಿವಾಸಿ ಭಾರತೀಯರು 48 ಗಂಟೆಗಳಲ್ಲಿ ತಮ್ಮ ವಿವಾಹ ನೋಂದಣಿ ಮಾಡಿಸಬೇಕು ಎಂದು ಕೇಂದ್ರ ಸಚಿವೆ ಮನೇಕಾ ಗಾಂಧಿ ಹೇಳಿದ್ದಾರೆ.
ದೆಹಲಿಯಲ್ಲಿ ಮಾತನಾಡಿದ ಅವರು, ಭಾರತದಲ್ಲಿ ವಿವಾಹ ನೋಂದಣಿಗೆ ಯಾವುದೇ ಸಮಯಾವಧಿ ಇಲ್ಲ. ಆದರೆ ನವವಿವಾಹಿತ ಅನಿವಾಸಿ ಭಾರತೀಯರು 48 ಗಂಟೆಗಳಲ್ಲಿ ತಮ್ಮ ವಿವಾಹ ನೋಂದಣಿ ಮಾಡಿಸಬೇಕು. ವಿವಾಹ ನೋಂದಣಿಗೆ 30 ದಿನಗಳ ಅಂತಿಮ ಗಡುವಿದ್ದು, 48 ಗಂಟೆಗಳ ಬಳಿಕ ಪ್ರತಿ ದಿನಕ್ಕೆ 5 ರೂ ದಂಡ ವಿಧಿಸಲಾಗುತ್ತದೆ ಎಂದು ಹೇಳಿದ್ದಾರೆ.
ಅಂತೆಯೇ ಒಂದು ವೇಳೆ 30 ದಿನಗಳ ಅಂತಿಮ ಗಡುವಿನ ಹೊರತಾಗಿಯೂ ವಿವಾಹ ನೋಂದಣಿ ಮಾಡಿಸದೇ ಇದ್ದಲ್ಲಿ ಅಂತಹವರಿಗೆ ಪಾಸ್ ಪೋರ್ಟ್ ಮತ್ತು ವೀಸಾ ವಿತರಣೆ ಮಾಡುವುದಿಲ್ಲ. ಅನಿವಾಸಿ ಭಾರತೀಯ ಮಹಿಳೆಯರ ಸುರಕ್ಷತೆಗಾಗಿ ಈ ಕ್ರಮ ಅನುಸರಿಸಲಾಗುತ್ತಿದೆ ಎಂದು ಮನೇಕಾ ಹೇಳಿದ್ದಾರೆ.
ಇತ್ತೀಚೆಗಷ್ಟೇ ರಾಷ್ಟ್ರೀಯ ಮಹಿಳಾ ಆಯೋಗ ಅನಿವಾಸಿ ಭಾರತೀಯರ ವಿವಾಹಕ್ಕೆ ಸಂಬಂಧಿಸಿದಂತೆ ಮತ್ತು ಮಹಿಳೆಯರ ರಕ್ಷಣೆಗೆ ಸಂಬಂಧಿಸಿದಂತೆ ಕೆಲ ಶಿಫಾರಸ್ಸುಗಳನ್ನು ಮಾಡಿತ್ತು. ವಿದೇಶದಲ್ಲಿರವು ಗಂಡಂದಿರುವ ತಮ್ಮ ಪತ್ನಿಯರ ಮೇಲೆ ದೌರ್ಜನ್ಯ ಎಸಗುವುದನ್ನು ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮನೇಕಾ ಗಾಂಧಿ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics