ಸುಳ್ಳು ಕಥೆಗಳನ್ನು ಹೇಳುವುದಕ್ಕೆ ಸಂಘಕ್ಕೆ ಅವಕಾಶ ನೀಡುತ್ತಿದ್ದೀರಿ: ಪ್ರಣಬ್ ಮುಖರ್ಜಿ ಗೆ ಪುತ್ರಿ ಶರ್ಮಿಷ್ಟಾ 
ದೇಶ

ಸುಳ್ಳು ಕಥೆಗಳನ್ನು ಹರಡಲು ಆರ್ ಎಸ್ಎಸ್ ಗೆ ಅವಕಾಶ ನೀಡುತ್ತಿದ್ದೀರಿ: ಪ್ರಣಬ್ ಮುಖರ್ಜಿ ಗೆ ಪುತ್ರಿ ಶರ್ಮಿಷ್ಟಾ

ಕಾಂಗ್ರೆಸ್ ನಾಯಕಿಯೂ ಆಗಿರುವ ಪ್ರಣಬ್ ಮುಖರ್ಜಿ ಪುತ್ರಿ ಶರ್ಮಿಷ್ಟಾ ಮುಖರ್ಜಿ ತಂದೆಯ ನಿರ್ಧಾರದ ವಿರುದ್ಧವಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನವದೆಹಲಿ: ಆರ್ ಎಸ್ಎಸ್ ಕಾರ್ಯಕ್ರಮದಲ್ಲಿ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಭಾಗಿಯಾಗಲು ನಾಗ್ಪುರಕ್ಕೆ ತೆರಳಿರುವುದು ಸದ್ಯಕ್ಕೆ ದೇಶಾದ್ಯಂತ ಚರ್ಚೆಯಾಗುತ್ತಿರುವ ಸುದ್ದಿ. ಆರ್ ಎಸ್ಎಸ್ ಕಾರ್ಯಕ್ರಮಕ್ಕೆ ಹೋಗದಂತೆ ಹಲವು ಕಾಂಗ್ರೆಸ್ಸಿಗರು ಪ್ರಣಬ್ ಮುಖರ್ಜಿಗೆ ಮನವಿ ಮಾಡಿದ್ದರು. ಈಗ ಕಾಂಗ್ರೆಸ್ ನಾಯಕಿಯೂ ಆಗಿರುವ ಪ್ರಣಬ್ ಮುಖರ್ಜಿ ಪುತ್ರಿ ಶರ್ಮಿಷ್ಟಾ ಮುಖರ್ಜಿ ತಂದೆಯ ನಿರ್ಧಾರದ ವಿರುದ್ಧವಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 
ಬಿಜೆಪಿ ಹಾಗೂ ಸಂಘಪರಿವಾರ ಸುಳ್ಳು ಕಥೆಗಳನ್ನು ಹರಡುವುದಕ್ಕೆ ಪ್ರಣಬ್ ಮುಖರ್ಜಿ ಅತ್ಯುತ್ತಮ ಅವಕಾಶ ಒದಗಿಸುತ್ತಿದ್ದಾರೆ, ಅವರ ಭಾಷಣವನ್ನು ಮರೆಯಲಾಗುತ್ತದೆ, ಆದರೆ ದೃಶ್ಯಗಳು ಮಾತ್ರ ಉಳಿಯುತ್ತವೆ ಎಂದು ಶರ್ಮಿಷ್ಟಾ ಮುಖರ್ಜಿ ಹೇಳಿದ್ದಾರೆ. ತಮ್ಮ  ತಂದೆ ಆರ್ ಎಸ್ ಎಸ್ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿರುವುದರ ಬಗ್ಗೆ  ಟ್ವಿಟರ್ ನಲ್ಲಿ ಬರೆದಿರುವ ಶರ್ಮಿಷ್ಟಾ ಮುಖರ್ಜಿ, ಬಿಜೆಪಿಯ ಸುಳ್ಳು ಪ್ರಚಾರ ಮಾಡುವ ವಿಭಾಗ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ಮಾಜಿ ರಾಷ್ಟ್ರಪತಿಗಳು ಅರ್ಥಮಾಡಿಕೊಳ್ಳಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಆದರೆ ಅವರ ಭೇಟಿ  ಬಿಜೆಪಿ ಹಾಗೂ ಸಂಘಪರಿವಾರ ಸುಳ್ಳು ಕಥೆಗಳನ್ನು ಹರಡುವುದಕ್ಕೆ ಅವಕಾಶ ಒದಗಿಸಿಕೊಡುತ್ತಿದ್ದು ತಮ್ಮ ಭೇಟಿ ದೂರಗಾಮಿ ಪರಿಣಾಮಗಳನ್ನು ಬೀರಲಿದೆ ಎಂದೂ ಎಚ್ಚರಿಸಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರಾಜೀನಾಮೆ ಬಗ್ಗೆ ಖುದ್ದು ಸುಳಿವು ನೀಡಿದ CM ಸಿದ್ದರಾಮಯ್ಯ; ಸಾಮಾಜಿಕ ಮಾಧ್ಯಮದಲ್ಲಿ ಮಹತ್ವದ ಪೋಸ್ಟ್​!

ಹೈಕಮಾಂಡ್ ಅದೇಶ ಪಾಲನೆ: ಗುರುವಾರ ಬೆಳಗ್ಗೆ 10.30ಕ್ಕೆ ರಾಜ್ಯಪಾಲರ ಭೇಟಿಗೆ ಸಮಯ ಕೇಳಿದ ಸಿಎಂ ಸಿದ್ದರಾಮಯ್ಯ; Video

SIR ಪ್ರಕ್ರಿಯೆಗೆ ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್; ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗೆ ಅಗತ್ಯ ಎಂದ ನ್ಯಾಯಪೀಠ..!

ಸಿಎಂ ಸಿದ್ದರಾಮಯ್ಯ ಪದತ್ಯಾಗ; ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಹತ್ವದ ಸಭೆ

Mysuru Rain: ಸಿಡಿಲು ಬಡಿದು ಬೆಂಗಳೂರಿನ ಟೆಕ್ಕಿ ಸಾವು

SCROLL FOR NEXT