ಪ್ರಣಬ್ ಮುಖರ್ಜಿ - ಮೋಹನ್ ಭಾಗವತ್ 
ದೇಶ

ಆರ್‏ಎಸ್ಎಸ್ 'ಸಂಗ'ದಲ್ಲಿ ಇಡೀ ದಿನ ಕಳೆದ ಪ್ರಣಬ್ ಮುಖರ್ಜಿ

ತೃತೀಯ ವರ್ಷದ ಸಂಘ ಶಿಕ್ಷಾ ವರ್ಗ(ಎಸ್ ಎಸ್ ವಿ)ದ ಸಮಾರೋಪ ಸಮಾರಂಭಕ್ಕೆ ಆಗಮಿಸಿರುವ ಮಾಜಿ ರಾಷ್ಟ್ರಪತಿ...

ನಾಗ್ಪುರ: ತೃತೀಯ ವರ್ಷದ ಸಂಘ ಶಿಕ್ಷಾ ವರ್ಗ(ಎಸ್ ಎಸ್ ವಿ)ದ ಸಮಾರೋಪ ಸಮಾರಂಭಕ್ಕೆ ಆಗಮಿಸಿರುವ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು, ಇಡೀ ದಿನ ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್ ಎಸ್ ಎಸ್)ದ ಪರಿಚಯ ಮಾಡಿಕೊಂಡಿದ್ದಾರೆ.
ನಿನ್ನೆ ರಾತ್ರಿಯೇ ನಾಗ್ಪುರಕ್ಕೆ ಆಗಮಿಸಿದ್ದ ಪ್ರಣಬ್ ಮುಖರ್ಜಿ ಅವರು, ಇಂದು ಬೆಳಗ್ಗೆ ಆರ್ ಎಸ್ ಎಸ್ ಸಂಸ್ಥಾಪಕ ಡಾ.ಕೆ.ಬಿ.ಹೆಡಗೇವಾರ್ ಅವರ ನಿವಾಸಕ್ಕೆ ಭೇಟಿ ನೀಡಿದರು. ಈ ವೇಳೆ ಹೆಡಗೇವಾರ್ ಬಗ್ಗೆ ಮತ್ತು ಅವರ ಕೆಲಸದ ಮಾಜಿ ರಾಷ್ಟ್ರಪತಿಗೆ ಮಾಹಿತಿ ನೀಡಲಾಯಿತು ಎಂದು ಅವರೊಂದಿಗಿದ್ದ ಅಧಿಕಾರಿಗಳು ತಿಳಿಸಿದ್ದಾರೆ.
ಬಳಿಕ ಮಹಲ್ ಪ್ರದೇಶದಲ್ಲಿರುವ ಆರ್ ಎಸ್ಎಸ್ ಪ್ರಧಾನ ಕಚೇರಿಗೆ ಭೇಟಿ ನೀಡಿದ ಪ್ರಣಬ್ ಮುಖರ್ಜಿ, ಕಚೇರಿಯಲ್ಲಿದ್ದ ಹಾಜರಿ ಪುಸ್ತಕದಲ್ಲಿ ಸಹಿ ಹಾಕಿ, ಹೆಡಗೇವಾರ್ ಗೆ ವಿಶೇಷ ಗೌರವ ಸಲ್ಲಿಸಿದರು. 
ಭಾರತದ ಹೆಮ್ಮೆಯ ಪುತ್ರ, ಕೆ.ಬಿ. ಹೆಡಗೇವಾರ್‌ ಜನ್ಮಸ್ಥಳಕ್ಕೆ ಆಗಮಿಸಿದ್ದೇನೆ. ಈ ಧೀಮಂತ ನಾಯಕನಿಗೆ ಗೌರವ ಸಲ್ಲಿಸಲು ಇಲ್ಲಿಗೆ ಆಗಮಿಸಿದ್ದೇನೆ ಎಂದು ಪ್ರಣಬ್‌ ಮುಖರ್ಜಿ ವೀಕ್ಷಕರ ಹಾಜರಿ ಪುಸ್ತಕದಲ್ಲಿ ಬರೆದು ತಮ್ಮ ಸಹಿ ಹಾಕಿದರು.
ಆರ್ ಎಸ್ ಎಸ್ ಕಚೇರಿಯಲ್ಲಿ ಕೆಲ ಸಮಯ ಕಳೆದು, ನಂತರ ಸಂಘ ಶಿಕ್ಷಾ ವರ್ಗ ನಡೆಯುವ ರೆಷಿಮ್ ಬಾಗ್ ಗೆ ತೆರಳಿದರು. ಅಲ್ಲಿ ಆರ್ ಎಸ್ ಎಸ್ ಪದಾಧಿಕಾರಿಗಳಿಂದ ಎಸ್ ಎಸ್ ವಿ ಸೇರಿದಂತೆ ವಿವಿಧ ಸಂಘದ ವಿವಿಧ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಪಡೆದುಕೊಂಡರು.
ಪ್ರಣಬ್ ಮುಖರ್ಜಿ ಅವರು ಸಂಘ ಶಿಕ್ಷಾ ವರ್ಗದ ತರಬೇತಿಗೆ ಸಂಬಂಧಿಸಿದಂತೆ ಕುತೂಹಲದಿಂದ ಹಲವು ಪ್ರಶ್ನೆಗಳನ್ನು ಕೇಳಿದರು ಎಂದು ಆರ್ ಎಸ್ ಎಸ್ ಮಾಧ್ಯಮ ವಿಭಾಗದ ಉಸ್ತುವಾರಿ ವಿಶ್ವ ಸಂವದ್ ಕೇಂದ್ರ ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!