ದೇಶ

ಆರ್ ಎಸ್ಎಸ್ ಕಚೇರಿಗೆ ಭೇಟಿ: ಪ್ರಣಬ್ ವಿರುದ್ಧ ಟ್ವೀಟ್ ಗೆ ಆದೇಶಿಸಿದರೇ ಸೋನಿಯಾ?

Srinivas Rao BV
ನವದೆಹಲಿ: ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಆರ್ ಎಸ್ಎಸ್ ಕಚೇರಿಗೆ ಭೇಟಿ ನೀಡುವುದನ್ನು ವಿರೋಧಿಸಿ ಹಲವು ಕಾಂಗ್ರೆಸ್ ನಾಯಕರು ಟ್ವೀಟ್ ಮಾಡಿದ್ದರು. ಅಷ್ಟೇ ಅಲ್ಲದೇ ಸ್ವತಃ ಪ್ರಣಬ್ ಮುಖರ್ಜಿ ಅವರ ಪುತ್ರಿ ಶರ್ಮಿಷ್ಟ ಮುಖರ್ಜಿ ಟ್ವೀಟ್ ಮಾಡಿ ತಂದೆಯ ನಿರ್ಧಾರವನ್ನು ವಿರೋಧಿಸಿದ್ದರು.
ಶರ್ಮಿಷ್ಟ ಮುಖರ್ಜಿ ಸೇರಿದಂತೆ ಕಾಂಗ್ರೆಸ್ ನಾಯಕರ ಟ್ವೀಟ್ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದು, ಎಐಸಿಸಿ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರೇ ಪ್ರಣಬ್ ಮುಖರ್ಜಿ ವಿರುದ್ಧ ಟ್ವೀಟ್ ಮಆಡುವಂತೆ ಆದೇಶಿಸಿದ್ದರು ಎಂಬ ಬಗ್ಗೆಯೂ ವರದಿಗಳು ಪ್ರಕಟವಾಗಿದೆ. 
ಸೋನಿಯಾ ಗಾಂಧಿ ಅವರ ಆಣತಿಯ ಮೇರೆಗೆ ಪ್ರಣಬ್ ಮುಖರ್ಜಿ ವಿರುದ್ಧ ಟೀಕೆಗಳು ವ್ಯಕ್ತವಾಗಿತ್ತು ಎಂದು ವಿಶ್ಲೇಷಿಸಲಾಗುತ್ತಿದೆ. 
ಕಾಂಗ್ರೆಸ್ ನಾಯಕರಾಗಿದ್ದ ಪ್ರಣಬ್ ಮುಖರ್ಜಿ ಆರ್ ಎಸ್ಎಸ್ ಕಾರ್ಯಕ್ರಮಕ್ಕೆ ಹೋಗುವುದು ರಾಜಕೀಯವಾಗಿ ಹಾಗೂ ಸಾಮಾಜಿಕವಾಗಿ ದೂರಗಾಮಿ ಪರಿಣಾಮಗಳನ್ನು ಬೀರುತ್ತದೆ. ಬಿಜೆಪಿ ಪ್ರಣಬ್ ಮುಖರ್ಜಿ ಅವರ ಭೇಟಿಯನ್ನೇ ಮುಂದಿಟ್ಟುಕೊಂಡು ಲಾಭ ಪಡೆಯಲ್ಯ್ ಯತ್ನಿಸುತ್ತದೆ ಎಂದು ಶರ್ಮಿಷ್ಟ ಮುಖರ್ಜಿ ಟ್ವೀಟ್ ಮಾಡಿ ತಂದೆಗೆ ಎಚ್ಚರಿಸಿದ್ದರು. 
SCROLL FOR NEXT