ಭೀಮಾ ಕೊರೆಗಾಂವ್ ಹಿಂಸಾಚಾರ: ಪುಣೆ ಪೋಲೀಸರಿಂದ ಶಂಕಿತರ ಭಾವಚಿತ್ರ, ಘಟನೆಯ ವೀಡಿಯೋ ಬಿಡುಗಡೆ 
ದೇಶ

ಭೀಮಾ ಕೊರೆಗಾಂವ್ ಹಿಂಸಾಚಾರ: ಶಂಕಿತರ ಭಾವಚಿತ್ರ, ಘಟನೆಯ ವೀಡಿಯೋ ಬಿಡುಗಡೆ

ಜನವರಿ 1 ರಂದು ಸಂಭವಿಸಿದ ಭೀಮಾ ಕೊರೆಗಾಂವ್ ಹಿಂಸಾಚಾರದಲ್ಲಿ ಯುವಕರ ಮೇಲೆ ಹಲ್ಲೆ ನಡೆಸಿದ ನಾಲ್ವರ ಭಾವಚಿತ್ರವನ್ನು ಮಹಾರಾಷ್ಟ್ರದ ಅಪರಾಧ ವಿಭಾಗದ ಪೋಲೀಸರು ಬಿಡುಗಡೆ ಮಾಡಿದ್ದಾರೆ.

ಪುಣೆ: ಜನವರಿ  1 ರಂದು ಸಂಭವಿಸಿದ ಭೀಮಾ ಕೊರೆಗಾಂವ್ ಹಿಂಸಾಚಾರದಲ್ಲಿ ಯುವಕರ ಮೇಲೆ ಹಲ್ಲೆ ನಡೆಸಿದ ನಾಲ್ವರ ಭಾವಚಿತ್ರವನ್ನು ಮಹಾರಾಷ್ಟ್ರದ ಅಪರಾಧ ವಿಭಾಗದ ಪೋಲೀಸರು ಬಿಡುಗಡೆ ಮಾಡಿದ್ದಾರೆ.
ಕನೂರ್ ಮಸಾಯಿ  ನಿವಾಸಿಯಾಗಿದ್ದ ರಾಹುಲ್ ಫತಂಗಡೆ (30) ಎನ್ನುವಾತನ ಮೇಲೆ ಗುಂಪೊಂದು ಹಲ್ಲೆ ನಡೆಸಿ ಕೊಲೆ ಮಾಡಿದ್ದ  ಘಟನೆ ಜನವರಿ 1 ರಂದು ಭೀಮಾ ಕೋರೆಗಾಂವ್ ಹಿಂಸಾಚಾರದ ಸಂದರ್ಭದಲ್ಲಿ  ಮಹಾರಾಷ್ಟ್ರದ ಸನಸ್ವಾಡಿ ಸಮೀಪ ನಡೆದಿತ್ತು.
ಪ್ರಕರಣ ಸಂಬಂಧ ಪುಣೆ ಗ್ರಾಮೀಣ ವಿಭಾಗದ ಪೋಲೀಸರು ಇದಾಗಲೇ ಮೂವರನ್ನು ಬಂಧಿಸಿದ್ದು ಫೆಬ್ರವರಿಯಲ್ಲಿ ಪ್ರಕರಣವನ್ನು ರಾಜ್ಯ ಸಿಐಡಿಗೆ ವಹಿಸಲಾಗಿತ್ತು.
"ತನಿಖೆಯ ಸಮಯದಲ್ಲಿ ಕಲ್ಲುಗಳು ಹಾಗೂ ಕೋಲಿನಿಂದ ಫತಂಗಡೆ ಮೇಲೆ ಹಲ್ಲೆ ನಡೆಸುತ್ತಿರುವ ಜನಸಂದಣಿಯ ದೃಶ್ಯವನ್ನು ಒಳಗೊಂಡ ವೀಡಿಯೋ ಫೂಟೇಜ್ ಅನ್ನು ವಶಪಡಿಸಿಕೊಂಡಿದ್ದೇವೆ. ಅಲ್ಲದೆ ಘಟನೆ ಸಂಬಂಧ ಇನ್ನೂ ನಾಲ್ವರು ಆರೋಪಿಗಳನ್ನು ಗುರುತಿಸಿದ್ದೇವೆ" ಪುಣೆ ಸಿಐಡಿ ಘಟಕದ ಪೊಲೀಸ್ ಅಧೀಕ್ಷಕ  ಅಕ್ಕನೌರು ಪ್ರಸಾದ್ ಪ್ರಹ್ಲಾದ್ ಹೇಳಿದ್ದಾರೆ.
"ವೀಡಿಯೋದಲ್ಲಿ ಇರುವ ನಾಲ್ವರ ಗುರುತು ಇನ್ನೂ ಪತ್ತೆಯಾಗಬೇಕಿದೆ.ಆದ್ದರಿಂದ ನಾವು ಈ ಶಂಕಿತರ ಚಿತ್ರವನ್ನು, ಸಂಪೂರ್ಣ ವೀಡಿಯೊವನ್ನು ಬಿಡುಗಡೆ ಮಾಡಿದ್ದೇವೆ" ಅವರು ಹೇಳಿದ್ದಾರೆ.
ವೀಡಿಯೋದಲ್ಲಿರುವ ನಾಲ್ವರು ಶಂಕಿತರ ಪತ್ತೆಗೆ ತಮಗೆ ಸಾರ್ವಜನಿಕರು ಸಹಕರಿಸಬೇಕೆಂದು ಅವರು ಮನವಿ ಮಾಡಿದ್ದಾರೆ.
ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿಮತ್ತು ಮಹಾರಾಷ್ಟ್ರದಲ್ಲಿ ಮೇಲ್ಜಾತಿಯ ಬ್ರಾಹ್ಮಣರೆನಿಸಿಕೊಂಡಿರುವ ಪೇಶಾವರ ಮಧ್ಯೆ 1818 ಜನವರಿ 1ರಂದು ಮಹಾರಾಷ್ಟ್ರದ ಕೊರೆಗಾಂವ್ ಭೀಮಾದಲ್ಲಿ ಯುದ್ಧವಾಗಿತ್ತು. ಮರಾಠರು ಯುದ್ಧದಲ್ಲಿ ಹಿಂತೆಗೆದುಕೊಂಡರು. ಅಂದಿನಿಂದ ಇದು ತಮ್ಮ ಗೆಲುವೆಂದು ಕೆಳಜಾತಿಯ ಸಮುದಾಯದವರು ಭಾವಿಸುತ್ತಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

ಶಿಬು ಸೊರೇನ್ 'ರಾಜ್ಯದ ಪಿತಾಮಹ' ಎಂದು ಘೋಷಿಸುವಂತೆ ಜೆಎಂಎಂ ಆಗ್ರಹ

Indian Stock Market: ಸತತ ಕುಸಿತ, ಬರೊಬ್ಬರಿ ಶೇ.1ರಷ್ಟು ಕುಸಿದ Sensex, Nifty 50, ರೂಪಾಯಿ ಮೌಲ್ಯ ಇಳಿಕೆ!

SCROLL FOR NEXT