ಮುಂಬೈ: ನಕ್ಸಲರು ಪ್ರಧಾನಿ ನರೇಂದ್ರ ಮೋದಿ ಅವರ ಹತ್ಯೆಗೆ ಸಂಚು ರೂಪಿಸಿದ್ದು ಬಹಿರಂಗವಾದ ಬೆನ್ನಲ್ಲೇ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಹಾಗೂ ಅವರ ಕುಟುಂಬದವರಿಗೆ ಮಾವೋವಾದಿಗಳು ಜೀವ ಬೆದರಿಕೆ ಹಾಕಿದ್ದಾರೆ.
ಮಹಾ ಸಿಎಂಗೆ ನಕ್ಸಲ್ ಸಂಘಟನೆಗಳಿಂದ ಎರಡು ಬೆದರಿಕೆ ಪತ್ರ ಬಂದಿವೆ ಎಂದು ಮಹಾರಾಷ್ಟ್ರ ಗೃಹ ಸಚಿವಾಲಯದ ಮೂಲಗಳು ತಿಳಿಸಿವೆ.
ವಾರದ ಹಿಂದೆ ಮುಖ್ಯಮಂತ್ರಿ ಕಚೇರಿಗೆ ಬೆದರಿಕೆ ಪತ್ರಗಳು ತಲುಪಿದ್ದು. ತನಿಖೆಗಾಗಿ ಅವುಗಳನ್ನು ಪೊಲೀಸರಿಗೆ ಹಸ್ತಾಂತರಿಸಲಾಗಿದೆ.
ಇತ್ತೀಚಿಗೆ ಗಡ್ ಚಿರೋಲಿಯಲ್ಲಿ ನಡೆದ ನಕ್ಸಲ್ ವಿರೋಧಿ ಕಾರ್ಯಾಚರಣೆಯ ನಂತರ ಈ ಪತ್ರಗಳು ಬಂದಿವೆ. ಆ ಕಾರ್ಯಾಚರಣೆಯಲ್ಲಿ 39 ನಕ್ಸಲರನ್ನು ಹತ್ಯೆ ಮಾಡಲಾಗಿತ್ತು.
ಪತ್ರದಲ್ಲಿ ಗಡ್ ಚಿರೋಲಿಯ ನಕ್ಸಲರ ಎನ್ ಕೌಂಟರ್ ಬಗ್ಗೆ ಪ್ರಸ್ತಾಪಿಸಲಾಗಿದ್ದು, ಅದಕ್ಕೆ ಪ್ರತಿಕಾರವಾಗಿ ಫಡ್ನವೀಸ್ ಹಾಗೂ ಅವರ ಕುಟುಂಬದವರನ್ನು ಹತ್ಯೆ ಮಾಡುವ ಬೆದರಿಕೆ ಹಾಕಲಾಗಿದೆ.
ಇದಕ್ಕೂ ಮುನ್ನ ಪುಣೆ ಪೊಲೀಸರು ಇ ಮೇಲ್ ವೊಂದನ್ನು ವಶಪಡಿಸಿಕೊಂಡಿದ್ದು, ಪ್ರಧಾನಿ ನರೇಂದ್ರ ಮೋದಿ ರೋಡ್ ಶೋಗಳನ್ನು ಗುರಿ ಮಾಡಿಕೊಂಡು, ಅವರನ್ನು ದಿವಂಗತ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಮಾದರಿಯಲ್ಲೇ ಹತ್ಯೆ ಮಾಡಲು ಯೋಜನೆ ರೂಪಿಸಲಾಗಿದೆ ಎಂಬ ಸಂಗತಿ ಬಯಲು ಮಾಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics