ಮುಂಬೈ ಬಂದರು ಪ್ರದೇಶದಲ್ಲಿ ಭಾರೀ ಅಗ್ನಿ ಅವಘಡ
ಮುಂಬೈ: ಮುಂಬೈನ ಬಂದರು ಪ್ರದೇಶದ ಪಟೇಲ್ ಚೇಂಬರ್ಸ್ ನಲ್ಲಿ ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿದೆ. ಬೆಂಕಿ ನಂದಿಸುವಲ್ಲಿ ನಿರತರಾಗಿದ್ದ ಇಬ್ಬರು ಅಗ್ನಿಶಾಮಕ ದಳ ಸಿಬ್ಬಂದಿಗಳು ಏಣಿಯಿಂದ ಬಿದ್ದು ಗಾಯಗೊಂಡಿದ್ದಾರೆ.
ಕಟ್ಟಡದ ಒಂದು ಭಾಗ ಕುಸಿದ ಪರಿಣಾಮ ಅಗ್ನಿಶಾಮಕ ಅಧಿಕಾರಿಗಳು ಸಹ ಗಾಯಗೊಂಡಿದ್ದಾರೆ. ಸಧ್ಯ ಕನಿಷ್ಟ 18 ಅಗ್ನಿಶಾಮಕ ವಾಹನಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದು ಬೆಂಕಿ ಆರಿಸುವಕಾರ್ಯದಲ್ಲಿ ಯಶಸ್ವಿಯಾಗಿದ್ದಾರೆ.
ಜನನಿಬಿಡ ಪ್ರದೇಶದ ಪಕ್ಕದಲ್ಲೇ ಇದ್ದ ಈ ಕಟ್ಟಡ ಬೆಂಕಿ ಅನಾಹುತದಿಂದ ಸಂಪೂರ್ಣ ಹಾನಿಗೊಂಡಿದ್ದು ಕಟ್ಟಡದ ಒಂದು ಭಾಗ ಕುಸಿದ ಕಾರಣ ಜನ ಸಂಚಾರಕ್ಕೂ ಅಡಚಣೆಯಾಗಿದೆ.
ಬ್ರಿಟೀಷರ ಕಾಲದ ಕಟ್ಟಡವಿದಾಗಿದ್ದು ಅತ್ಯಂತ ಅಪಾಯಕಾರಿ ಕಟ್ಟಡ ವರ್ಗಕ್ಕೆ ಸೇರಿದ್ದ ಇದನ್ನು ಕೆಡವಿ ಹಾಕಲು ನಿರ್ಧರಿಸಲಾಗಿತ್ತು.
ಘಟನೆಯಲ್ಲಿ ಯಾವುದೇ ಸಾವು ಸಂಭವಿಸಿಲ್ಲ ಎಂದು ವರದಿಯಾಗಿದ್ದು ಹೆಚ್ಚಿನ ವಿವರ್ಗಳನ್ನು ನಿರೀಕ್ಷಿಸಲಾಗುತ್ತಿದೆ.