ಕೇಂದ್ರ ಗೃಹ ಖಾತೆಗಳ ರಾಜ್ಯ ಸಚಿವ ಹನ್ಸ್'ರಾಜ್ ಅಹಿರ್ 
ದೇಶ

ಪ್ರಧಾನಿ ಮೋದಿ ಹತ್ಯೆಗೆ ರಚಿಸಲಾಗಿರುವ ಸಂಚು ಯಶಸ್ವಿಯಾಗಲು ಸೇನಾಪಡೆಗಳು ಬಿಡುವುದಿಲ್ಲ; ಹನ್ಸ್'ರಾಜ್ ಅಹಿರ್

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಹತ್ಯೆಗೆ ಸಂಚುಗಳನ್ನು ರೂಪಿಸಲಾಗಿದ್ದು, ಇಂತಹ ಸಂಚುಗಳು ಯಶಸ್ವಿಯಾಗಲು ಭದ್ರತಾ ಪಡೆಗಳು ಬಿಡುವುಡಿಲ್ಲ ಎಂದು ಕೇಂದ್ರ ಗೃಹ ಖಾತೆಗಳ ರಾಜ್ಯ ಸಚಿವ ಹನ್ಸ್'ರಾಜ್ ಅಹಿರ್ ಅವರು ಶನಿವಾರ ಹೇಳಿದ್ದಾರೆ...

ಚಂದ್ರಾಪುರ (ಮಹಾರಾಷ್ಟ್ರ): ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಹತ್ಯೆಗೆ ಸಂಚುಗಳನ್ನು ರೂಪಿಸಲಾಗಿದ್ದು, ಇಂತಹ ಸಂಚುಗಳು ಯಶಸ್ವಿಯಾಗಲು ಭದ್ರತಾ ಪಡೆಗಳು ಬಿಡುವುಡಿಲ್ಲ ಎಂದು ಕೇಂದ್ರ ಗೃಹ ಖಾತೆಗಳ ರಾಜ್ಯ ಸಚಿವ ಹನ್ಸ್'ರಾಜ್ ಅಹಿರ್ ಅವರು ಶನಿವಾರ ಹೇಳಿದ್ದಾರೆ. 
ಪ್ರಧಾನಿ ಮೋದಿ ಹತ್ಯೆ ಸಂಚು ಪ್ರಕರಣ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ಮೋದಿ ಹತ್ಯೆ ಸಂಚು ಯಶಸ್ವಿಗೊಳ್ಳಲು ಭದ್ರತಾತ ಪಡೆಗಳು ಬಿಡುವಿದಿಲ್ಲ. ಸರ್ಕಾರ ಮತ್ತು ಗೃಹ ಸಚಿವಾಲಯ ಇಂತಹ ಸಂಚುಗಳ ಹಿಂದಿರುವವರ ವಿರುದ್ಧ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದ್ದಾರೆ. 
ಪ್ರಕರಣ ಸಂಬಂಧ ಈಗಾಗಲೇ ಹಲವರನ್ನು ಬಂಧನಕ್ಕೊಳಪಡಿಸಲಾಗಿದೆ. ತನಿಖೆ ಕೂಡ ಪ್ರಗತಿಯಲ್ಲಿದೆ. ಇಂತಹ ಕ್ರಿಮಿನಲ್'ಗಳನ್ನು ಕ್ಷಮಿಸುವುದಿಲ್ಲ ಎಂಬುದರ ಕುರಿತು ಭರವಸೆ ನೀಡುತ್ತೇನೆಂದು ತಿಳಿಸಿದ್ದಾರೆ. 
ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರನ್ನು ಆತ್ಮಾಹುತಿ ಬಾಂಬ್ ಬಳಸಿ 27 ವರ್ಷಗಳ ಹಿಂದೆ ಹತ್ಯೆ ಮಾಡಿದ ರೀತಿಯಲ್ಲಿಯೇ ಹಾಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನೂ ಕೊಲ್ಲಲು ಭಯಾನಕ ಸಂಚೊಂದು ರೂಪಿತವಾಗಿರುವ ಆತಂಕಕಾರಿ ಮಾಹಿತಿಯೊಂದು ನಿನ್ನೆಯಷ್ಟೇ ಬೆಳಕಿಗೆ ಬಂದಿತ್ತು. 
ಸಂಚಿನ ಹಿಂದಿನ ರೂವಾರಿಗಳು ಪಾಕಿಸ್ತಾನ ಮೂಲದ ಭಯೋತ್ಪಾದಕರಲ್ಲ. ದೇಶದೊಳಗೇ ಇರುವ ನಗರವಾಸಿ ನಕ್ಸಲರಾಗಿದ್ದಾರೆಂದು ಪೊಲೀಸರು ತಿಳಿಸಿದ್ದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT