ನವದೆಹಲಿ/ ಲಖನೌ: 2019ರ ಲೋಕಸಭಾ ಚುನಾವಣೆ ಹಾಗೂ ಮೂರು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವ ನಿಟ್ಟಿನಲ್ಲಿ ವಿರೋಧಪಕ್ಷಗಳ ಮೈತ್ರಿಯಲ್ಲಿ ಬಿಎಸ್ಪಿ ಮುಖಂಡೆ ಮಾಯಾವತಿ ಹೆಸರು ಮುಂಚೂಣಿಗೆ ಬಂದಿದೆ.
ಉತ್ತರ ಪ್ರದೇಶ-2012, 2014 ಮತ್ತು 2017 ರ ಚುನಾವಣೆಯಲ್ಲಿ ಹಿಂದುಳಿದಿರುವ ಮೂರು ಸ್ಥಾನಗಳನ್ನು ಕಳೆದುಕೊಂಡ ನಂತರ ಲೋಕಸಭೆಯಲ್ಲಿ ಯಾವುದೇ ಸಂಸದರನ್ನು ಹೊಂದಿರದಿದ್ದರೂ, ಹೊಸ ಛಾಯೆಯ ರಾಜಕೀಯವನ್ನು ಕಟ್ಟಲು ಎದುರು ನೋಡುತ್ತಿದ್ದಾರೆ
ಕರ್ನಾಟಕದಲ್ಲಿ ಜೆಡಿಎಸ್- ಕಾಂಗ್ರೆಸ್ ಮೈತ್ರಿ ಸರ್ಕಾರ ರಚನೆಯಾದ ನಂತರ ಉತ್ಸುಕರಾಗಿರುವ ಮಾಯಾವತಿ, ಮುಂಬರುವ ಮಧ್ಯಪ್ರದೇಶ, ರಾಜಸ್ತಾನ ಮತ್ತು ಛತ್ತೀಸ್ ಗಢ ರಾಜ್ಯಗಳಲ್ಲಿಯೂ ಪ್ರಮುಖ ಪಾತ್ರ ನಿರ್ವಹಿಸಲು ಸಿದ್ಧರಾಗಿದ್ದಾರೆ. ಬಿಜೆಪಿಯನ್ನು ಅಧಿಕಾರದಿಂದ ದೂರ ತಳ್ಳುವ ನಿಟ್ಟಿನಲ್ಲಿ ಕಾಂಗ್ರೆಸ್ , ಬಿಎಸ್ಪಿ ಮೈತ್ರಿಗಾಗಿ ಮಾತುಕತೆ ನಡೆಸಿದ್ದಾರೆ. ಈ ಮೂರು ರಾಜ್ಯಗಳಲ್ಲಿ ಒಟ್ಟು 66 ಲೋಕಸಭಾ ಸ್ಥಾನಗಳಿವೆ.
ಉತ್ತರ ಪ್ರದೇಶದ ಗೋರಖ್ ಪುರ ಹಾಗೂ ಪಲ್ಗುರ್ ಉಪಚುನಾವಣೆಯಲ್ಲಿ ಬಿಎಸ್ಪಿ ಹಾಗೂ ಸಮಾಜವಾದಿ ಪಕ್ಷಗಳು ಮೈತ್ರಿ ಮಾಡಿಕೊಳ್ಳುವ ಮೂಲಕ ಹೊಸ ಇತಿಹಾಸವನ್ನೆ ಸೃಷ್ಟಿಸಲಾಗಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲೂ ಎಸ್ಪಿ, ಬಿಎಸ್ಪಿ ಮೈತ್ರಿ ಸಂಬಂಧ ಮಾತುಕತೆ ನಡೆಯುತ್ತಿದೆ. ಹರಿಯಾಣದಲ್ಲಿ ಭಾರತೀಯ ರಾಷ್ಟ್ರೀಯ ಲೋಕ ದಳ ಬ್ಲೂ ಬ್ರಿಗೇಡ್ ಜೊತೆಗೆ ಈಗಾಗಲೇ ಒಪ್ಪಂದ ಮಾಡಿಕೊಂಡಿದೆ.
2013ರ ಚುನಾವಣೆಯ ಮಾಹಿತಿ ಪ್ರಕಾರ ಮಧ್ಯಪ್ರದೇಶದಲ್ಲಿ ಬಿಜೆಪಿ, ಕಾಂಗ್ರೆಸ್ ಮತ್ತು ಬಿಎಸ್ಪಿಯ ಮತಗಳ ಹಂಚಿಕೆ ಬೇರೆ ಬೇರೆಯಾಗಿದೆ. ಬಿಎಸ್ಪಿ- ಕಾಂಗ್ರೆಸ್ ನಡುವಿನ ಮತ ಹಂಚಿಕೆ ಶೇ.2. 21 ರಷ್ಟಾಗಿದೆ. ಈ ಮಧ್ಯೆ ಮಧ್ಯಪ್ರದೇಶದಲ್ಲಿ ಕೇವಲ ನಾಲ್ಕು ಸ್ಥಾನಗಳಲ್ಲಿ ಮಾತ್ರ ಬಿಎಸ್ಪಿ ಗೆಲುವು ಸಾಧಿಸಿದೆ. ಬಿಜೆಪಿ 41 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. 14 ವರ್ಷಗಳ ಬಿಜೆಪಿ ಆಳ್ವಿಕೆಯನ್ನು ಕೊನೆಗೊಳಿಸಲು ಇಲ್ಲಿ ಬಿಎಸ್ಪಿಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದು ಒಳಿತು ಎಂಬುದು ಕಾಂಗ್ರೆಸ್ ಗೆ ಮನವರಿಕೆಯಾಗಿದೆ.
ಇನ್ನೂ ರಾಜಸ್ತಾನದಲ್ಲಿ 2013ರ ಚುನಾವಣೆ ವೇಳೆಯಲ್ಲಿ ಬಿಎಸ್ಪಿ- ಕಾಂಗ್ರೆಸ್ ಶೇ. 37 ರಷ್ಟು ಮತ ಹಂಚಿಕೆಯಾಗಿದ್ದು, ಬಿಜೆಪಿ 165 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರೆ, ಕೇವಲ 24 ಸ್ಥಾನಗಳಲ್ಲಿ ಕಾಂಗ್ರೆಸ್ ಹಾಗೂ ಬಿಎಸ್ಪಿ ಗೆಲುವು ಸಾಧಿಸಿದ್ದವು.ಕಾಂಗ್ರೆಸ್ ಹಾಗೂ ಬಿಎಸ್ಪಿ ಮೈತ್ರಿಯಿಂದ ಮತ ವಿಭಜನೆಯಾಗಬಹುದು ಎಂಬುದು ರಾಜಕೀಯ ತಜ್ಞರ ಅಭಿಪ್ರಾಯವಾಗಿದೆ. ಒಂದು ವೇಳೆ ಮೈತ್ರಿ ಮಾಡಿಕೊಳ್ಳದಿದ್ದರೆ, ಉಭಯ ಪಕ್ಷಗಳ ಮೇಲೂ ನಕಾರಾತ್ಮಕ ಪರಿಣಾಮ ಬೀರಬಹುದು ಎಂದು ಮಾಜಿ ಬಿಎಸ್ಪಿ ಮುಖಂಡ ಶಹೀದ್ ಸಿದ್ದಿಕಿ ಹೇಳಿದ್ದಾರೆ.
ಕಾಂಗ್ರೆಸ್ , ಬಿಜೆಪಿ ಹೊರತುಪಡಿಸಿದರೆ ಬಿಎಸ್ಪಿ ಉತ್ತರ ಭಾರತದ ಎಲ್ಲಾ ರಾಜ್ಯಗಳಲ್ಲೂ ಗುರುತಿಸಿಕೊಂಡಿದೆ. ದಕ್ಷಿಣ ಹಾಗೂ ಪಶ್ಟಿಮದ ರಾಜ್ಯಗಳಲ್ಲೂ ತನ್ನ ಪ್ರಭಾವ ಬೀರಿದೆ. ದಲಿತ, ಬುಡಕಟ್ಟು ಹಾಗೂ ಅಲ್ಪಸಂಖ್ಯಾತ ಮತಗಳು ಬಿಎಸ್ಪಿ ಜೊತೆಯಲ್ಲಿವೆ. ಬಿಜೆಪಿ ಬಗ್ಗೆ ದಲಿತರಿಗೆ ಅಸಮಾಧಾನವಿದೆ. ಬಿಜೆಪಿಯನ್ನು ಬಗ್ಗುಬಡಿದ್ದರೆ ಮಾಯಾವತಿ ಪ್ರಮುಖ ನಾಯಕಿಯಾಗಿ ಹೊರಹೊಮ್ಮಲಿದ್ದಾರೆ.