ದೇಶ

ಮಹಾರಾಷ್ಟ್ರ : ಹಳಿತಪ್ಪಿದ ಮುಂಬೈ–ಹೌರಾ ಮೇಲ್‌ ರೈಲಿನ ಮೂರು ಬೋಗಿಗಳು

Nagaraja AB

ಮುಂಬೈ: ಮಹಾರಾಷ್ಟ್ರದ ಇಘಾತ್ಪುರಿ ರೈಲು ನಿಲ್ದಾಣದ ಬಳಿ ಮುಂಬೈ– ಹೌರಾ ಮೇಲ್‌ ರೈಲು  ಇಂದು ಬೆಳಗಿನಜಾವ ಹಳಿ ತಪ್ಪಿದೆ.

ನಾಗ್ಪುರದ ಮೂಲಕ ಚಲಿಸುವ ಈ ರೈಲಿನ ಮೂರು ಬೋಗಿಗಳು ಹಳಿತಪ್ಪಿದ್ದು, ಯಾವುದೇ ಜೀವಹಾನಿಯಾಗಿಲ್ಲ ಎನ್ನಲಾಗಿದೆ. ಸ್ಥಳಕ್ಕೆ ಭದ್ರತಾ ಸಿಬ್ಬಂದಿ ತೆರಳಿದ್ದು, ರಕ್ಷಣಾ ಕಾರ್ಯಾಚರಣೆ ಕೈಗೊಂಡಿದ್ದಾರೆ. ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

ಘಟನೆಯಿಂದಾಗಿ ಈ ಮಾರ್ಗದಲ್ಲಿ ಸಂಚರಿಸಬೇಕಿದ್ದ 12 ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ. ಒಂದು ರೈಲನ್ನು ಬೇರೊಂದು ಮಾರ್ಗದ ಮೂಲಕ ಕಳುಹಿಸಲಾಗಿದೆ.

SCROLL FOR NEXT