ಕಾಂಗ್ರೆಸ್ ನಾಯಕ ಹಾಗೂ ಮಾಜಿ ವಿತ್ತ ಸಚಿವ ಪಿ.ಚಿದಂಬರಂ 
ದೇಶ

ಭಾರತದ ಆರ್ಥಿಕತೆಯ ಟೈಯರ್'ಗಳು ಪಂಕ್ಚರ್ ಆಗಿವೆ: ಮಾಜಿ ವಿತ್ತ ಸಚಿವ ಪಿ ಚಿದಂಬರಂ

ಕೇಂದ್ರದ ಆಡಳಿತಾರೂಢ ಎನ್'ಡಿಎ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ನಾಯಕ ಹಾಗೂ ಮಾಜಿ ವಿತ್ತ ಸಚಿವ ಪಿ.ಚಿದಂಬರಂ ಅವರು, ಭಾರತದ ಆರ್ಥಿಕತೆಯ ಟೈಯರ್'ಗಳು ಪಂಕ್ಚರ್ ಆಗಿವೆ ಎಂದು ಸೋಮವಾರ ಹೇಳಿದ್ದಾರೆ...

ನವದೆಹಲಿ; ಕೇಂದ್ರದ ಆಡಳಿತಾರೂಢ ಎನ್'ಡಿಎ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ನಾಯಕ ಹಾಗೂ ಮಾಜಿ ವಿತ್ತ ಸಚಿವ ಪಿ.ಚಿದಂಬರಂ ಅವರು, ಭಾರತದ ಆರ್ಥಿಕತೆಯ ಟೈಯರ್'ಗಳು ಪಂಕ್ಚರ್ ಆಗಿವೆ ಎಂದು ಸೋಮವಾರ ಹೇಳಿದ್ದಾರೆ. 
ರಾಜಧಾನಿ ನವದೆಹಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು, ಪ್ರಧಾನಿ ಮೋದಿ ನೇತೃತ್ವದ ಎನ್'ಡಿಎ ಸರ್ಕಾರದ ಕೆಟ್ಟ ನೀತಿಗಳಿಂದಾಗಿ ನಾಲ್ಕು ಚಕ್ರಗಳ ಮೂರು ವಾಹನಗಳ ಟೈಯರ್'ಗಳು ಪಂಕ್ಚರ್ ಆಗಿವೆ ಎಂದು ಹೇಳಿದ್ದಾರೆ. 
ಕೇಂದ್ರದ ಕೆಟ್ಟ ನೀತಿಗಳಿಂದಾಗಿ ಇಂದು ದೇಶದ ರೈತ ವಲಯ ಸೇರಿದಂತೆ ಹಲವು ವಲಯಗಳಲ್ಲಿ ಸಾಕಷ್ಟು ಸಮಸ್ಯೆಗಳುಂಟಾಗಿವೆ. ಒಂದೆಡೆ ರೈತರು ತಾವು ಬೆಳೆದ ಬೆಳೆಗಳಿಗೆ ಫಲ ಸಿಗದೆ ಸಂಕಷ್ಟವನ್ನು ಅನುಭವಿಸುತ್ತಿದ್ದರೆ, ಮತ್ತೊಂದೆಡೆ ಯುವಕರು ನಿರುದ್ಯೋಗ ಸಮಸ್ಯೆಯಿಂದ ಬಳಲುತ್ತಿದ್ದಾರೆ. 
ಭಾರತದ ಆರ್ಥಿಕತೆಯನ್ನು ಮುನ್ನಡೆಸುವ ನಾಲ್ಕು ಚಕ್ರಗಳ ಮೂರು ವಾಹನಗಳ ಚಕ್ರಗಳು ಹಾಳಾಗಿವೆ. ಮೊದಲನೆಯ ವಾಹನ ರಫ್ತಾಗಿದೆ. ಕಳೆದ ನಾಲ್ಕು ವರ್ಷಗಳಿಂದ ರಫ್ತು ಬೆಳವಣಿಗೆಗಳು ಋಣಾತ್ಮಕವಾಗಿದೆ. ಎರಡನೆಯ ವಾಹನ ಖಾಸಗಿ ಹೂಡಿಕೆ. ದೇಶದಲ್ಲಿ ಖಾಸಗಿ ಹೂಡಿಕೆ ಸಾವಿನಂಚಿನಲ್ಲಿದೆ. ಕಳೆದ ಮೂರು ವರ್ಷಗಳಿಂದ ಸಮಗ್ರ ಸ್ಥಿರ ಬಂಡವಾಳ ಶೇ.28.5ರಲ್ಲಿಯೇ ನಿಂತಿದೆ. ಮೂರನೇಯ ವಾಹನ ಖಾಸಗಿ ಬಳಕೆಯಾಗಿದ್ದು, ಕೆಲ ತಿಂಗಳ ಹಿಂದೆ ಏರಿಕೆಯಾಗಿದ್ದರೂ, ಅಂತಹ ದೊಡ್ಡ ಬೆಳವಣಿಗೆಗಳೇನು ಕಂಡು ಬಂದಿಲ್ಲ. 
ಏರಿಳಿತವನ್ನು ತೋರಿಸುತ್ತಿರುವ ಏಕೈಕ ಚಕ್ರವೆಂದರೆ ಅದು ಸರ್ಕಾರ ವೆಚ್ಚ. ಆದರೆ, ಇಲ್ಲಿಯೂ ಸರ್ಕಾರದ ಆಯ್ಕೆಗಳು ಸೀಮಿತವಾಗಿವೆ. ಆದರೆ, ಪ್ರಸ್ತುತ ಸರ್ಕಾರದ ಖಾತೆಗಳಲ್ಲಿಯೂ ಹಣದ ಕೊರೆತೆಯಿದ್ದು, ಒತ್ತಡಗಳು ಹೆಚ್ಚಾಗಿವೆ ಎಂದು ತಿಳಿಸಿದ್ದಾರೆ. 
ಇಂದು ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ. ದೇಶದ ಕ್ಯಾಂಪಸ್'ಗಳಲ್ಲಿ ದೊಡ್ಡ ಕೋಲಾಹಲಗಳು ಸೃಷ್ಟಿಯಾಗುತ್ತಿವೆ. ಪದವಿ ಪೂರ್ಣಗೊಳಿಸಿದ ಬಳಿಕ ತಮಗೆ ಉದ್ಯೋಗ ದೊರಕುವುದಿಲ್ಲ ಎಂಬುದು ಇಂದಿನ ಯುವಕರಿಗೆ ತಿಳಿದುಹೋಗಿದೆ. ಪಕೋಡಾ ಮಾಡುವುದರಲ್ಲಿಯೂ ಕೆಲಸವಿದೆ ಎಂಬುದಕ್ಕೆ ಈ ವರೆಗೂ ಯಾರೊಬ್ಬರೂ ಯಾವುದೇ ರೀತಿಯ ನವೀನ ಪರಿಕಲ್ಪನೆಗಳನ್ನು ನೀಡಿಲ್ಲ ಎಂದು ವ್ಯಂಗ್ಯವಾಡಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ಕನ್ನಡಿಗರು ಕೊಟ್ಟ ದುಡ್ಡಲ್ಲೇ AR Rahman ತಮ್ಮ ಮೊದಲ ಸ್ಟುಡಿಯೋ ಕಟ್ಟಿದ್ದು: ನಟ ಯಶ್

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!